ಲೈವ್ ಬಂದು ಕೆಂಡಾಮಂಡಲರಾದ ನಟ ಜಗ್ಗೇಶ್ ಹೇಳಿದ್ದೇನು ಗೊತ್ತಾ, ನೋಡಿ ಜಗ್ಗೇಶ್ ಖಡಕ್ ಮಾತು.

ನಿನ್ನೆಯಿಂದ ಸಾಮಾಜಿಕ ಜಾಲತಾಣದಲ್ಲಿ ಸಕತ್ ಆಗಿ ಹರಿದಾಡುತ್ತಿರುವ ವಿಷಯ ಏನು ಅನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರ ಆಗಿದೆ. ಹೌದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳು ನವರಸ ನಾಯಕ ಜಗ್ಗೇಶ್ ಅವರ ಮುತ್ತಿಗೆ ಹಾಕಿ ನೀವು ಎಲ್ಲರ ಮುಂದೆ ಕ್ಷಮೆ ಕೇಳಬೇಕು ಎಂದು ಅವರ ಕೈಯಲ್ಲಿ ಕ್ಷಮೆಯನ್ನ ಕೇಳಿಸಿದ್ದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದ್ದು ಸದ್ಯ ಈ ವಿಷಯದಲ್ಲಿ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಕೋಲಾಹಲವನ್ನ ಸೃಷ್ಟಿ ಮಾಡಿದೆ ಎಂದು ಹೇಳಬಹುದು. ಹೌದು ಜಗ್ಗೇಶ್ ಅವರು ದರ್ಶನ್ ಅವರ ಅಭಿಮಾನಿಗಳಿಗೆ ಫೋನ್ ಸಂಭಾಷಣೆಯಲ್ಲಿ ಅವಮಾನ ಮಾಡಿದ್ದಾರೆ ಎಂದು ಅವರ ಮೇಲೆ ಕೋಪ ಮಾಡಿಕೊಂಡಿರುವ ದರ್ಶನ್ ಅಭಿಮಾನಿಗಳು ನಿನ್ನೆ ಜಗ್ಗೇಶ್ ಅವರು ಸಿದ್ದ ಶೂಟಿಂಗ್ ಸ್ಪಾಟ್ ಗೆ ಬಂದು ಅಲ್ಲಿ ಅವರನ್ನ ಸುತ್ತುವರೆದು ಗಲಾಟೆ ಮಾಡಿದ್ದಾರೆ ಮತ್ತು ಅವರಿಂದ ಕ್ಷಮೆಯನ್ನ ಕೇಳಿಸಿದ್ದಾರೆ.

ನಿನ್ನೆ ಜಗ್ಗೇಶ್ ಅವರು ಅಭಿಮಾನಿಗಳಿಗೆ ಎಷ್ಟೇ ಮನವರಿಕೆ ಮಾಡಲು ಪ್ರಯತ್ನ ಮಾಡಿದರೂ ಕೂಡ ಕೇಳದ ದರ್ಶನ್ ಅಭಿಮಾನಿಗಳು ಜಗ್ಗೇಶ್ ಅವರ ಕೈಯಿಂದ ಕ್ಷಮೆ ಕೇಳಿಸಿದ್ದು ಸದ್ಯ ಈ ವಿಷಯ ದೊಡ್ಡ ತಿರುವನ್ನ ಪಡೆದುಕೊಳ್ಳುತ್ತಿದೆ ಎಂದು ಹೇಳಿದರೆ ತಪ್ಪಾಗಲ್ಲ. ನಿನ್ನೆ ಈ ಘಟನೆ ನಡೆದಿದ್ದು ಇಂದು ಜಗ್ಗೇಶ್ ಅವರು ಲೈವ್ ಬಂದು ಮಾತನಾಡಿದ್ದು ಆಕ್ರೋಶವನ್ನ ವ್ಯಕ್ತಪಡಿಸಿದ್ದಾರೆ ಎಂದು ಹೇಳಬಹುದು ಹಾಗಾದರೆ ಲೈವ್ ಬಂದ ಜಗ್ಗೇಶ್ ಅವರು ಹೇಳಿದ್ದೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಜಗ್ಗೇಶ್ ಅವರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

jaggesh in live

ಹೌದು ಲೈವ್ ಬಂದು ಮಾತನಾಡಿದ ಜಗ್ಗೇಶ್ ಅವರು. “ರೀ ಜ್ಞಾಪಕ ಇಟ್ಟುಕೊಳ್ಳಿ, ನಾನು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಾಗ ಯಾವನು ಹುಟ್ಟಿರಲಿಲ್ಲ, ಯಾರ್ನೋ ನೀವು ಜಾಲ್ರ ಹಿಡಿತ ಇದ್ದಿರಲ್ಲ ಅವರು ಯಾರು ಹುಟ್ಟಿರಲಿಲ್ಲ ಮತ್ತು ನೀವು ಯಾರಿಗೆ ಬಕೆಟ್ ಹಿಡಿದ ಇದ್ದಿರಲ್ಲ ಅವರು ಯಾರು ಕೂಡ ಹುಟ್ಟಿರಲಿಲ್ಲ” ಎಂದು ಆಕ್ರೋಶವನ್ನ ವ್ಯಕ್ತಪಡಿಸಿದ್ದಾರೆ. 80 ದಶಕದಲ್ಲಿ ಸಿನಿಮಾರಂಗಕ್ಕೆ ಬಂದವನು ನಾನು, ನಾನು ರಾಜಕುಮಾರ್, ವಿಷ್ಣುವರ್ಧನ್, ಅಂಬರೀಷ್, ಪ್ರಭಾಕರ್, ಶಂಕರ್ ನಾಗ್, ಅನಂತ್ ನಾಗ್ ಅವರ ಹೆಜ್ಜೆ ಹಾಕಿದ್ದೇನೆ ಮತ್ತು ಅವರ ಜೊತೆ ಮಾತನಾಡಿದವನು ನಾನು ಮತ್ತು ಬದುಕಿದವನು ನಾನು, ಅವರ ಜೊತೆ ನಕ್ಕಿದವನು ಅವರ ಜೊತೆ ಅತ್ತವನು ನಾನು ಎಂದು ಲೈವ್ ಬಂದು ಹೇಳಿದ್ದಾರೆ.

ಇವತ್ತು ನಾನು ಈ ಜಾಗದಲ್ಲಿ ನಿಂತಿದ್ದೇನೆ ಅಂದರೆ ನಿಮ್ಮ್ಯಾರಿಂದ ಅಲ್ಲ ಕನ್ನಡಿಗರಿಂದ ಮತ್ತು ಕನ್ನಡಿಗರ ಪ್ರೀತಿ ಹೃದಯದಿಂದ, ನಾನು ಇಲ್ಲಿಯತನ ನನ್ನ ಎಡ ಕಾಲನ್ನ ಕೂಡ ಬೇರೆ ಭಾಷೆಗೆ ಇಟ್ಟಿಲ್ಲ ಮತ್ತು ಯಾವ ಭಾಷೆಯವರಿಗೂ ಕೂಡ ನಾನು ಜಾಲ್ರ ಹೊಡೆದಿಲ್ಲ ಮತ್ತು ಯಾವ ಭಾಷೆಯವನನ್ನ ಕಟ್ಟಿಕೊಂಡು ನನಗೆ ಏನು ಆಗಬೇಕಾಗಿಲ್ಲ, ನಾನು ಬದುಕಿದ್ದು ಕನ್ನಡಕ್ಕೆ ಸಾಯುವುದು ಕನ್ನಡಕ್ಕೆ ಎಂದು ಲೈವ್ ಬಂದು ಆಕ್ರೋಶವನ್ನ ವ್ಯಕ್ತಪಡಿಸಿದ್ದಾರೆ ಜಗ್ಗೇಶ್ ಅವರು. ಸ್ನೇಹಿತರೆ ಜಗ್ಗೇಶ್ ಅವರ ಈ ಮಾತಿನ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

jaggesh in live

Join Nadunudi News WhatsApp Group