Jio AirFiber: 599 ರೂ ನಲ್ಲಿ ಮನೆಗೆ ಹಾಕಿಸಿ ಜಿಯೋ ಫೈಬರ್, ಅನಿಯಮಿತ ಇಂಟರ್ನೆಟ್ ಜೊತೆಗೆ 550 ಚಾನೆಲ್ ಮತ್ತು 14 ಆಪ್ ಫ್ರೀ.

ಕಡಿಮೆ ಬೆಲೆಗೆ ಮನೆಗೆ ಹಾಕಿಸಿಕೊಳ್ಳಿ ಜಿಯೋ ಫೈಬರ್.

Jio AirFiber Recharge Plan: ಜಿಯೋ ರಿಲಯನ್ಸ್ (Jio Reliance) ದೇಶದಾದ್ಯಂತ ತನ್ನ 5G ಸೇವೆಯ ಮೂಲಕ ಇನ್ನಷ್ಟು ಎತ್ತರಕ್ಕೆ ಬೆಳೆಯಲು ಸಿದ್ಧತೆ ನಡೆಸುತ್ತಿದೆ. ಸದ್ಯ ಜಿಯೋ ಬಳಕೆದಾರರು 4G ಸೇವೆಯನ್ನು ಆನಂದಿಸುತ್ತಿದ್ದಾರೆ. ಇನ್ನು ಕೆಲವು ನಗರ ಪ್ರದೇಶಗಲ್ಲಿ 5G ಸೇವೆಗಳು ಕೂಡ ಲಭ್ಯವಿದೆ. ಕೆಲ ಪ್ರದೇಶದಲ್ಲಿ ಮಾತ್ರ ಲಭ್ಯವಿರುವ 5G ಸೇವೆಗಳು ಎಲ್ಲಡೆ ನಿಡಲು ಜಿಯೋ ರಿಲಯನ್ಸ್ ಸಿದ್ಧತೆ ನಡೆಸುತ್ತಿದೆ.

ದೇಶದಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಹೊಂದಿರುವ ಟೆಲಿಕಾಂ ಕಂಪನಿ ಎಂದರೆ ಅದು ಜಿಯೋ ಎನ್ನಬಹುದು. ಜಿಯೋ ತನ್ನ ಉತ್ತಮ ಸೇವೆಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ. ಜಿಯೋ ಗ್ರಾಹಕರು ಅನಿಯಮಿತ ಡೇಟಾ ಪ್ರಯೋಜನಗಳನ್ನು ಅತಿ ಕಡಿಮೆ ಬೆಲೆಗೆ ಪಡೆಯುತ್ತಿದೆ. ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ, ವಾರ್ಷಿಕ ಯೋಜನೆಗಳು ಜಿಯೋ ಗ್ರಾಹಕರಿಗೆ ಕಡಿಮೆ ಬೆಲೆಗೆ ಸಿಗುತ್ತಿದೆ.

Jio AirFiber Recharge Plan
Image Credit: 91mobiles

Jio ಬಳಕೆದಾರರಿಗೆ Jio AirFiber ಲಭ್ಯ
ದೇಶದಲ್ಲಿ ಜಿಯೋ ಬಳಕೆದಾರರ ಸಂಖ್ಯೆ 450 ಮಿಲಿಯನ್ ಗೂಮೀರಿದೆ. ಜಿಯೋ ಕಂಪನಿ ವರ್ಷದಿಂದ ವರ್ಷಕ್ಕೆ ಶೇ. 20 ರಷ್ಟು ಆದಾಯವನ್ನು ಹೆಚ್ಚಿಗೆ ಗಳಿಸುತ್ತಿದೆ. ಇನ್ನು 5G ನೆಟ್ವರ್ಕ್ ದೇಶದಲ್ಲೆಡೆ 96 ಪ್ರತಿಶತದಷ್ಟು ಹರಡಿದೆ. ಉಳಿದ ನಗರ ಪ್ರದೇಶಗಳಲ್ಲಿ ಕೂಡ 5G ಕ್ರಾಂತಿಗಾಗಿ ಜಿಯೋ ಸಿದ್ಧತೆ ನಡೆಸುತ್ತಿದೆ.

ಇದೀಗ Jio ತನ್ನ 5G ಸೇವೆಯ ಪರಿಚಯಿಸುತ್ತಿರುವ ಬೆನ್ನಲ್ಲೇ Jio AirFiber ಅನ್ನು ಪ್ರಾರಂಭಿಸಿದೆ. ಸದ್ಯ Jio AirFiber ಬಳಕೆದಾರರರಿಗೆ Home Entertainment, Smart Home Services and High-Speed ​​Broadband ನಂತಹ ಅನೇಕ ಸೇವೆಗಳನ್ನು ಒಡಗಿಸಲಿದೆ.

ಕೇವಲ 599 ರೂ ನಲ್ಲಿ ಮನೆಗೆ ಹಾಕಿಸಿ ಜಿಯೋ ಫೈಬರ್
ಬಳಕೆದಾರರು Jio AirFiber ಯೋಜನೆಯಲ್ಲಿ 30Mbps ಮತ್ತು 100Mbps ನಲ್ಲಿ ಲಭ್ಯವಿರುವ ಎರಡು ರೀತಿಯ ವೇಗ ಯೋಜನೆಗಳನ್ನು ಪಡೆಯಬಹುದು. ರೂ. 599 ಬೆಲೆಯಲ್ಲಿ ನೀವು 30Mbps ಸೌಲಭ್ಯವನ್ನು ಪಡೆಯಬಹುದು. ರೂ. 899 ಬೆಲೆಯಲ್ಲಿ ನೀವು 100Mbps ಸೌಲಭ್ಯವನ್ನು ಪಡೆಯಬಹುದು.

Join Nadunudi News WhatsApp Group

Jio AirFiber Recharge plan
Image Credit: Punenow

ಗ್ರಾಹಕರು 550 ಕ್ಕೂ ಹೆಚ್ಚು ಡಿಜಿಟಲ್ ಚಾನಲ್‌ಗಳು ಮತ್ತು 14 ಮನರಂಜನಾ ಅಪ್ಲಿಕೇಶನ್‌ಗಳನ್ನು ಪಡೆಯಬಹುದು. ಇನ್ನು ರೂ. 1199 ಬೆಲೆಯಲ್ಲಿ ನೀವು 100Mbps ಸೌಲಭ್ಯವನ್ನು ಪಡೆಯಬಹುದು. ಈ ಯೋಜನೆಯ ಮೂಲಕ Netflix, Amazon and Jio Cinema ಗಳ ಉಚಿತ ಚಂದಾದಾರಿಕೆಯನ್ನು ಪಡೆಯಬಹುದು.

Jio AirFiber Max
ಇನ್ನು ಬಳಕೆದಾರರಿಗೆ ಹೆಚ್ಚಿನ ವೇಗದ ಇಂಟೆರ್ ನೆಟ್ ನ ಅವಶ್ಯಕೆತೆ ಇದ್ದರೆ Jio AirFiber Max ಅನ್ನು ಆಯ್ಕೆ ಮಾಡಿಕೊಳ್ಳಬಹುದು. ಕಂಪನಿಯು 300 Mbps ನಿಂದ 1000 Mbps ವರೆಗೆ ಅಂದರೆ 1Gbps ವರೆಗಿನ ಮೂರು ಯೋಜನೆಗಳನ್ನು ಪರಿಚಯಿಸಿದೆ. ಮೊದಲ ಪ್ಲಾನ್ ರೂ 1499 ಆಗಿದ್ದು, ಇದರಲ್ಲಿ 300 Mbps ವೇಗ ಲಭ್ಯವಿರುತ್ತದೆ. ಎರಡನೆಯದಾಗಿ, 500 Mbps ವರೆಗಿನ ವೇಗವು ರೂ 2499 ಗೆ ಲಭ್ಯವಿದೆ. ನೀವು 1Gbps ವೇಗದಲ್ಲಿ ಯೋಜನೆಯನ್ನು ತೆಗೆದುಕೊಳ್ಳಲು ರೂ. 3999 ಆಯ್ಕೆಯನ್ನು ಆರಿಸಬಹುದು.

Join Nadunudi News WhatsApp Group