ಜಿಯೋ ಗ್ರಾಹಕರಿಗೆ ಅಂಬಾನಿಯಿಂದ ಬಂದಿದೆ ದೊಡ್ಡ ಆಫರ್, ಎರಡು ವರ್ಷ ಇಂಟೆರ್ ನೆಟ್ ಮತ್ತು ಕಾಲ್ ಉಚಿತ.

ಈ ಡಿಜಿಟಲ್ ಯುಗದಲ್ಲಿ ಅತೀ ದೊಡ್ಡ ಹೆಸರನ್ನ ಮಾಡಿದ ಕಂಪನಿ ಅಂದರೆ ಜಿಯೋ ಕಂಪನಿ ಎಂದು ಹೇಳಿದರೆ ತಪ್ಪಾಗಲ್ಲ. ಇಡೀ ಇತಿಹಾಸದಲ್ಲೇ ಯಾರು ಮಾಡ ದೊಡ್ಡ ಸಾಧನೆಯನ್ನ ಮಾಡಿತು ಜಿಯೋ ಫೋನ್ ಎಂದು ಹೇಳಬಹುದು. ಚಿಕ್ಕ ಮಕ್ಕಳಿಂದ ಹಿಡಿದು ಹಳೆ ಮುದುಕರ ತನಕ ಬಾಯಲ್ಲಿ ಕೇಳಿ ಬರುತ್ತಿದ್ದ ಹೆಸರು ಅಂದರೆ ಅದೂ ಜಿಯೋ ಎಂದು ಹೇಳಬಹುದು. ಮುಕೇಶ್ ಅಂಬಾನಿಯವರ ಜಿಯೋ ಕಂಪನಿ ಯಾವ ದೇಶದಲ್ಲಿ ಉಚಿತವಾಗಿ ಇಂಟೆರ್ ನೆಟ್ ಸೇವೆಯನ್ನ ಆರಂಭ ಮಾಡಿತೋ ಅಂದಿನಿಂದ ಇತರೆ ಟೆಲಿಕಾಮ್ ಕಂಪನಿಗಳು ಕೂಡ ಉಚಿತ ಕರೆ ಮತ್ತು ಇಂಟೆರ್ ನೆಟ್ ಸೇವೆಯನ್ನ ಆರಂಭ ಮಾಡಿತು ಎಂದು ಹೇಳಬಹುದು.

ಇನ್ನು ಜಿಯೋ ಕಂಪನಿ ಬರಿ ಉಚಿತವಾಗಿ ಇಂಟೆರ್ ನೆಟ್ ಬಿಡುಗಡೆ ಮಾಡುವುದರ ಜೊತೆಗೆ ಕಡಿಮೆ ಬೆಲೆಯಲ್ಲಿ ಇಂಟೆರ್ ನೆಟ್ ಬಳಸುವ ಮೊಬೈಲ್ ಕೂಡ ಮಾರುಕಟ್ಟೆಗೆ ಜಾರಿಗೆ ತಂದು ಇಡೀ ತಂತ್ರಜ್ಞಾನ ಯುಗದಲೇ ದೊಡ್ಡ ಮೈಲುಗಲ್ಲು ಸಾಧಿಸಿತು ಎಂದು ಹೇಳಬಹುದು. ಇನ್ನು ವಿಷಯಕ್ಕೆ ಬರುವುದಾದರೆ ಹಲವು ದಿನಗಳಿಂದ ಯಾವುದೇ ದೊಡ್ಡ ಆಫರ್ ಘೋಷಣೆ ಮಾಡದ ಜಿಯೋ ಕಂಪನಿ ಈಗ ಮತ್ತೆ ತನ್ನ ಗ್ರಾಹಕರಿಗೆ ದೊಡ್ಡ ಆಫರ್ ಅನ್ನು ಘೋಷಣೆ ಮಾಡಿದ್ದು ಇದನ್ನ ಆಫರ್ ಏನು ಎಂದು ತಿಳಿದರೆ ನಿಮಗೆ ಶಾಕ್ ಆಗವುದು ಗ್ಯಾರೆಂಟಿ ಎಂದು ಹೇಳಬಹುದು.

Jio bigg offer

ಹಾಗಾದರೆ ಜಿಯೋ ಕಂಪನಿ ಘೋಷಣೆ ಮಾಡಿದ ಆ ಆಫರ್ ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಮಾಹಿತಿಯನ್ನ ಜಿಯೋ ಮೊಬೈಲ್ ಮತ್ತು ಸಿಮ್ ಬಳಕೆ ಮಾಡುವ ಎಲ್ಲರಿಗೂ ತಲುಪಿಸಿ. ಹೌದು ಸ್ನೇಹಿತರೆ ರಿಲಾಯನ್ಸ್ ಜಿಯೋ ಹೊಸ ಜಿಯೋಫೋನ್ ಗ್ರಾಹಕರಿಗೆ ಭರ್ಜರಿ ಆಫರ್‌ ನೀಡಿದೆ. ಹೌದು 1999 ರೂಪಾಯಿ ನೀಡಿ ನೀವು ಜಿಯೋ ಫೋನ್ ಖರೀದಿ ಮಾಡಿದರೆ ನಿಮಗೆ ಎಲ್ಲಾ ನೆಟ್ ವರ್ಕ್ʼಗಳಿಗೆ ಉಚಿತ ಅನಿಯಮಿತ ವಾಯ್ಸ್ ಕರೆಗಳ ಪ್ರಯೋಜನಗಳು ಮತ್ತು ಪ್ರತಿ ತಿಂಗಳು 2GB ಹೈಸ್ಪೀಡ್ ಡೇಟಾ ದೊರೆಯಲಿದೆ ಮತ್ತು ಈ ಆಫರ್ ಬರೋಬ್ಬರಿ ಎರಡು ವರ್ಷಗಳ ಕಾಲ ಕೂಡ ಇರಲಿದೆ.

ಇನ್ನು ಇನ್ನು 1499 ರೂಪಾಯಿ ಪಾವತಿಸಿ ಜಿಯೋ ಫೋನ್ ಖರೀದಿ ಮಾಡಿದರೆ ನೀವು 1 ವರ್ಷಕ್ಕೆ ಉಚಿತ ಅನಿಯಮಿತ ವಾಯ್ಸ್ ಕರೆಗಳು ಮತ್ತು 2GB ಅನಿಯಮಿತ ಡೇಟಾವನ್ನ ಪಡೆಯಬಹುದು ಮತ್ತು ಇನ್ನೊಂದು ಆಫರ್ ಏನು ಅಂದರೆ ನೀವು 2GB ಡೇಟಾವನ್ನ ಖಾಲಿ ಮಾಡಿದ್ರೂ ಆನ್ ಲೈನ್ʼನಲ್ಲಿ ವಿಷಯವನ್ನ ಬ್ರೌಸ್ ಮಾಡಬಹುದಾಗಿದೆ, ಆದರೆ ವೇಗದಲ್ಲಿ ಸ್ವಲ್ಪ ಕಡಿಮೆ ಇರಲಿದೆ.

Join Nadunudi News WhatsApp Group

Jio bigg offer

ಇನ್ನು ರಿಲಾಯನ್ಸ್ ಜಿಯೋ ಹಾಲಿ ಜಿಯೋಫೋನ್ ಬಳಕೆದಾರರಿಗೆ ಕೂಡ ಆಫರ್ ಘೋಷಿಸಿದೆ ಮತ್ತು ನೀವು ಈಗಾಗಲೇ ಜಿಯೋಫೋನ್ ಹೊಂದಿದ್ದರೆ 749 ರೂಪಾಯಿ ರಿಚಾರ್ಜ್‌ ಮಾಡಿಸಿದರೆ ಆಗ ನೀವು ಅನಿಯಮಿತ ವಾಯ್ಸ್ ಕರೆಗಳು ಮತ್ತು 2GB ಮಾಸಿಕ ಡೇಟಾ ಬೆನಿಫಿಟ್ ಗಳನ್ನ (ಪ್ರತಿ ತಿಂಗಳು) 12 ತಿಂಗಳವರೆಗೆ ಪಡೆಯಬಹುದು. ಇನ್ನು ಈ ಆಫರ್ ಗಳು ಇದೆ ಮಾರ್ಚ್ ಒಂದನೇ ತಾರೀಕಿನಿಂದ ಲಭ್ಯ ಆಗಲಿದೆ ಮತ್ತು ಫೀಚರ್ ಫೋನ್ ಅನ್ನು ರಿಲಯನ್ಸ್ ರಿಟೇಲ್ ಮತ್ತು ಜಿಯೋ ಚಿಲ್ಲರೆ ಮಾರಾಟಗಾರರ ಮೂಲಕ ಮಾರಾಟ ಮಾಡಲಾಗುತ್ತದೆ. ಸ್ನೇಹಿತರೆ ಜಿಯೋ ಈ ಆಫರ್ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group