Jio Security: ಜಿಯೋ ಗ್ರಾಹಕರಿಗೆ ಇನ್ನುಮುಂದೆ ಸಿಗಲ್ಲ ಈ ಸೌಲಭ್ಯ,

ರಿಲಯನ್ಸ್ ಜಿಯೋ ತನ್ನ ಎಲ್ಲಾ ಪ್ರೀಪೈಡ್ ಮತ್ತು ಪೋಸ್ಟ್ ಪೇಡ ಪ್ಲ್ಯಾನ್ ಗಳಿಂದ ಜಿಯೋ ಸೆಕ್ಯೂಇಟಿಯ ಪ್ರಯೋಜನಗಳನ್ನು ತೆಗೆದುಹಾಕಿದೆ.

Jio Security Service Cancel: ಜಿಯೋ (Jio) ಟೆಲಿಕಾಂ ಕಂಪನಿ ತನ್ನ ಗ್ರಾಹಕರಿಗೆ ಯಾವಾಗಲೂ ಹೊಸ ಹೊಸ ರಿಚಾರ್ಜ್ ಪ್ಲ್ಯಾನ್ ಅನ್ನು ಪರಿಚಯಿಸುತ್ತಲೇ ಇರುತ್ತದೆ. ನಂಬರ್ ಒನ್ ಟೆಲಿಕಾಂ ಕಂಪೆನಿಯಾದ ಜಿಯೋ ಹೊಸ ರಿಚಾರ್ಜ್ ಬಿಡುಗಡೆ ಮಾಡುವ ಮೂಲಕ ತನ್ನ ಸ್ಥಾನವನ್ನು ಗಟ್ಟಿಯಾಗಿರಿಸಿಕೊಂಡಿದೆ ಎನ್ನಬಹುದು. ಆದರೆ ಇದೀಗ ಜಿಯೋ ತನ್ನ ಗ್ರಾಹಕರಿಗೆ ಬೇಸರವನ್ನು ತಂದಿದೆ.

ಟೆಲಿಕಾಂ ಸೇವಾ ಪೂರೈಕೆದಾರರ ಸಂಸ್ಥೆಯಾದ ರಿಲಯನ್ ಜಿಯೋ ತನ್ನ ಪ್ರೀಪೈಡ್ ಮತ್ತು ಪೋಸ್ಟ್ ಪೈಡ್ ಪ್ಲ್ಯಾನ್ ಗಳಿಂದ ಈ ವಿಶೇಷ ಸೌಲಭ್ಯ ಒಂದನ್ನು ತೆಗೆದುಹಾಕಿದೆ. ಅಷ್ಟು ಮಾತ್ರವಲ್ಲದೆ ಗೂಗಲ್ ಪ್ಲೇ ಸ್ಟೋರ್ ಲಿಸ್ಟ್ ನಲ್ಲೂ ಸಹ ಇದು ಕಾಣಿಸಿಕೊಳ್ಳುತ್ತಿಲ್ಲ. ಈ ಮೂಲಕ ಅದೆಷ್ಟೋ ಗ್ರಾಹಕರು ಬೇಸರ ವ್ಯಕ್ತಪಡಿಸಿದ್ದಾರೆ.

Jio Security Service Cancel
Image Credit: Fortuneindia

ಜಿಯೋ ಸೆಕ್ಯೂರಿಟಿ ಸೇವೆ ಕ್ಯಾನ್ಸಲ್
ಜಿಯೋ ಕೇವಲ ಟೆಲಿಕಾಂ ಸೇವೆಯನ್ನಷ್ಟೇ ನೀಡದೆ ವಿವಿಧ ಕ್ಷೇತ್ರಗಳಲ್ಲಿ ತನ್ನದೇ ಆದ ಸೇವೆ ಸಲ್ಲಿಸುತ್ತಿದ್ದು ಈ ಮೂಲಕ ಗ್ರಾಹಕರು ಕಡಿಮೆ ವೆಚ್ಚದಲ್ಲಿ ಹೆಚ್ಚು ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಈ ಸೇವೆಯಲ್ಲಿ ಜಿಯೋ ಸೆಕ್ಯೂರಿಟಿ ಸೇವೆ ಸಹ ಪ್ರಮುಖವಾಗಿತ್ತು. ಆದರೆ ಇನ್ನುಮುಂದೆ ರಿಲಯನ್ಸ್ ಜಿಯೋ ತನ್ನ ಎಲ್ಲಾ ಪ್ರೀಪೈಡ್ ಮತ್ತು ಪೋಸ್ಟ್ ಪೇಡ ಪ್ಲ್ಯಾನ್ ಗಳಿಂದ ಜಿಯೋ ಸೆಕ್ಯೂರಿಟಿ ಪ್ರಯೋಜನಗಳನ್ನು ತೆಗೆದುಹಾಕಿದೆ.

ಈ ಜಿಯೋ ಸೆಕ್ಯುರಿಟಿಯ ಸೇವೆಯ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸೊರ್ ನಿಂದಲೂ ತೆಗೆದುಹಾಕಿದೆ. ಆದರೆ ಈವರೆಗೂ ಸಾ ಆಪಲ್ ಅಪ್ ಸ್ಟೋರ್ ನಲ್ಲಿ ಈ ಅಪ್ ಇನ್ನು ಕಾಣಿಸಿಕೊಳ್ಳುತ್ತಿದ್ದು ಇದನ್ನು ಸಹ ಇಲ್ಲಿಂದ ಶೀಘ್ರದಲ್ಲಿಯೇ ತೆಗೆದುಹಾಕಲಾಗುವುದು ಎಂದು ತಿಳಿದುಬಂದಿದೆ.

Jio Security Service Cancel
Image Credit: Psuconnect

ಜಿಯೋ ಬಳಕೆದಾರರಿಗೆ ಬೇಸರದ ಸುದ್ದಿ
ಜಿಯೊದ ಎಲ್ಲ ಸೇವೆಗಳು ಜಿಯೋ ಗ್ರಾಹಕರಿಗೆ ಮಾತ್ರ ಲಭ್ಯ ಇರುತ್ತಿತ್ತು. ಅಂದರೆ ಜಿಯೋ ಅಲ್ಲದ ಗ್ರಾಹಕರು ಈ ಸೇವೆಗಳನ್ನು ಪಡೆದುಕೊಳ್ಳಲು ಆಗುವುದಿಲ್ಲ. ಅದರಂತೆ ಈ ಜಿಯೋ ಸೆಕ್ಯೂರಿಟಿ ಜಿಯೋ ಬಳಕೆದಾರರಿಗೆ ಹೆಚ್ಚುವರಿ ಭದ್ರತೆ ಮತ್ತು ಸೈಬರ್ ಬೆದರಿಕೆಗಳು ಮತ್ತು ಆನ್ ಲೈನ್ ವಂಚನೆಗಳ ವಿರುದ್ಧ ರಕ್ಷಣೆ ನೀಡುತ್ತಿತ್ತು. ಇದರ ಜೊತೆಗೆ ಇದು ಆಂಡ್ರಾಯ್ಡ್ ಹಾಗೂ ಐಫೋನ್‌ಗಳು, ಐಪ್ಯಾಡ್‌ಗಳಲ್ಲಿ ಬಳಕೆ ಆಗುತ್ತಿತ್ತು.

Join Nadunudi News WhatsApp Group

ಇಷ್ಟು ಮಾತ್ರವಲ್ಲದೆ ಈ ಜಿಯೋ ಸೆಕ್ಯೂರಿಟಿ ಅಪ್ಲಿಕೇಶನ್ ಬಳಕೆದಾರರಿಗೆ ಹಾನಿಕಾರಕ ವೆಬ್‌ಸೈಟ್‌ಗಳು, ಪೇಜ್‌ಗಳು ಮತ್ತು ಇನ್ನೂ ಹೆಚ್ಚಿನ ಮಾಹಿತಿಯನ್ನು ಹಾಗೂ ಅವರ ಡೇಟಾವನ್ನು ಸುರಕ್ಷಿತವಾಗಿರಿಸಲು ಯಾವಾಗಲು ಸಹಾಯ ಮಾಡುತ್ತಿತ್ತು ಹಾಗೂ ಸೂಚನೆ ನೀಡುತ್ತಿತ್ತು. ಆದರೆ ಇನ್ನುಮುಂದೆ ಈ ಸೇವೆ ಜಿಯೋ ಬಳಕೆದಾರರಿಗೆ ಲಭ್ಯ ಇರುವುದಿಲ್ಲ ಎನ್ನುವುದು ಹಲವರಿಗೆ ಬೇಸರ ಉಂಟುಮಾಡುವ ವಿಷಯವಾಗಿದೆ.

Join Nadunudi News WhatsApp Group