Jio Space Fiber: ದೇಶದ ಜನರಿಗೆ ದಿವಾಳಿ ಉಡುಗೊರೆ ನೀಡಿದ ಅಂಬಾನಿ, Jio Space Fiber ಕಡಿಮೆ ಬೆಲೆಗೆ ಲಾಂಚ್.

ದೇಶದಲ್ಲಿ Jio ಸ್ಪೇಸ್ ಫೈಬರ್ ಲಾಂಚ್ ಮಾಡಿದ ಮುಕೇಶ್ ಅಂಬಾನಿ, ಇದರ ವಿಶೇಷತೆ ಏನು...?

Jio Space Fiber Launch: ಸದ್ಯ ದೇಶದಲ್ಲಿ Jio Reliance ಹೈ ಸ್ಪೀಡ್ ನೆಟ್ ವರ್ಕ್ ನೀಡುವಲ್ಲಿ ಹೆಸರುವಾಸಿಯಾಗಿದೆ. ಈಗಾಗಲೇ ದೇಶದ ವಿವಿಧ ಪ್ರದೇಶದಲ್ಲಿ Jio ತನ್ನ 5G ಸೇವೆಯನ್ನು ಆರಂಭಿಸಿದೆ. ಜಿಯೊದ 5G ಸೇವೆಯಿಂದಾಗಿ ಬಳಕೆದಾರರು ತಮ್ಮ ಯೋಜನೆಯ ಡೇಟಾ ಮುಗಿದ ಬಳಿಕವೂ ಕೂಡ ಅನಿಯಮಿತ ಹೈ ಸ್ಪೀಡ್ ಡೇಟಾವನ್ನು ಬಳಸಬಹುದಾಗಿದೆ.

ಸಾಮಾನ್ಯವಾಗಿ ಹೆಚ್ಚಿನ ದೂರದ ಪ್ರದೇಶಗಳಿಗೆ ನೆಟ್ ವರ್ಕ್ ಸರಿಯಾಗಿ ಹಂಚಿಕೆ ಆಗುವುದಿಲ್ಲ. ಹೀಗಾಗಿ ದೂರದ ಪ್ರದೇಶದ ಜನರು ಕೂಡ ಯಾವುದೇ ಕೊರತೆ ಇಲ್ಲದೆ ನೆಟ್ ವರ್ಕ್ ಅನ್ನು ಪಡೆಯಬೇಕು ಎನ್ನುವ ಕಾರಣಕ್ಕೆ Jio Reliance ಇದೀಗ ಹೊಸ ಆವಿಷ್ಕಾರವನ್ನು ಕಂಡು ಹಿಡಿದಿದೆ.

Jio Space Fiber Launch
Image Source: MathruBhumi

Jio Space Fiber
ಜನಪ್ರಿಯ ಟೆಲಿಕಾಂ ಕಂಪನಿಯಾಗಿರುವ Jio ಇದೀಗ Jio Space Fiber ಪರಿಚಯಿಸಿದೆ. ಇದು ಸ್ಯಾಟಲೈಟ್ ಆಧಾರಿತ ಗಿಗಾ ಫೈಬರ್ ತಂತ್ರಜ್ಞಾನವಾಗಿದ್ದು, ಫೈಬರ್ ಕೇಬಲ್ ಮೂಲಕ ಇಂಟರ್ ನೆಟ್ ಸಂಪರ್ಕ ಕಷ್ಟವಾಗಿರುವ ಪ್ರದೇಶಗಳಲ್ಲಿಯೂ ಹೆಚ್ಚಿನ ವೇಗದ ಇಂಟರ್ನೆಟ್ ಸೌಲಭ್ಯವನ್ನು ಒದಗಿಸಲಿದೆ.

ಜಿಯೋ ಸ್ಪೇಸ್ ಫೈಬರ್ ಕಡಿಮೆ ದರದಲ್ಲಿ ದೇಶಾದ್ಯಂತ ಲಭ್ಯವಾಗಲಿದೆ

IMC 2023 ಈವೆಂಟ್‌ ನಲ್ಲಿ ದೆಹಲಿಯ ಪ್ರಗತಿ ಮೈದಾನದಲ್ಲಿ ದೂರದ ಪ್ರದೇಶಗಳಿಗೆ ಇಂಟರ್ನೆಟ್ ಒದಗಿಸಲು ಆಕಾಶ್ ಅಂಬಾನಿ ಜಿಯೋ ಸ್ಪೇಸ್ ಫೈಬರ್ ಉಪಗ್ರಹ ಆಧಾರಿತ ಗಿಗಾ ಫೈಬರ್ ಸೇವೆಯನ್ನು ಪರಿಚಯಿಸಿದರು. ಈಗಾಗಲೇ Reliance Jio ಬಳಕೆದಾರರಿಗಾಗಿ Jio Fiber ಮತ್ತು Jio Air Fiber ತಂತ್ರಜ್ಞಾನವನ್ನು ಪರಿಚಯಿಸಿದೆ.ಇದೀಗ ಮತ್ತೊಂದು ಹೆಜ್ಜೆ ಮುಂದೆ ಇಟ್ಟು ದೇಶದ ಮೂಲೆ ಮೂಲೆ Jio Network ತಲುಪುವಂತೆ ಮಾಡಲು Jio Space Fiber ಬಿಡುಗಡೆಗೆ Jio ಸಿದ್ಧತೆ ನಡೆಸುತ್ತಿದೆ.

Join Nadunudi News WhatsApp Group

Jio Space Fiber Launch
Image Source: News18

Jio Space Fiber ಹೇಗೆ ಕಾರ್ಯನಿರ್ವಹಿಸಲಿದೆ
ಜಿಯೋ ಸ್ಪೇಸ್ ಫೈಬರ್‌ ಗಾಗಿ ಗ್ರಾಹಕರಿಗೆ ಸ್ಯಾಟಲೈಟ್ ಡಿಶ್ ಮತ್ತು ವೈ-ಫೈ ರೂಟರ್ ಅಗತ್ಯವಿದೆ. ಸ್ಯಾಟಲೈಟ್ ಸಂಕೇತವನ್ನು ಪಡೆಯುತ್ತದೆ. ಮತ್ತು Wi-Fi ರೂಟರ್ ಆ ಸಂಕೇತವನ್ನು ಲ್ಯಾಪ್‌ ಟಾಪ್‌ ಗಳು, ಮೊಬೈಲ್ ಫೋನ್‌ ಗಳು ಮತ್ತು ಇತರ ಸಾಧನಗಳಿಗೆ ರವಾನಿಸುತ್ತದೆ. ಈ Jio Space Fiber ಇಂಟರ್ನೆಟ್ ಲಭ್ಯವಿಲ್ಲದ ಪ್ರದೇಶಗಳಿಗೆ ಸುಲಭವಾಗಿ ಇಂಟರ್ನೆಟ್ ನ ಸಂಪರ್ಕವನ್ನು ನೀಡುತ್ತದೆ.

ಕಡಿಮೆ ವೆಚ್ಚದ ಇಂಟರ್ನೆಟ್ ಸೇವೆಯೊಂದಿಗೆ ವೇಗದ ಇಂಟರ್ನೆಟ್ ಅನ್ನು ಈ Space Fiber ನ ಮೂಲಕ ಪಡೆಯಬಹುದು. ಮುಂದಿನ ದಿನಗಳಲ್ಲಿ ದೇಶದ ಮೂಲೆ ಮೂಲೆಯ ಜನರು ಈ ಸ್ಪೇಸ್ ಫೈಬರ್ ಬಳಸಬಹುದು ಮತ್ತು ಮುಂದಿನ ದಿನಗಳಲ್ಲಿ ಕಡಿಮೆ ಬೆಲೆಗೆ ಈ ಸ್ಪೇಸ್ ಫೈಬರ್ ಜನರ ಕೈಗೆ ಸೇರಲಿದೆ ಎಂದು ಮುಕೇಶ್ ಅಂಬಾನಿ ಅವರು ಹೇಳಿದ್ದಾರೆ.

Join Nadunudi News WhatsApp Group