Kalki 2898 AD: ಎರಡೇ ದಿನದಲ್ಲಿ ಎಲ್ಲಾ ದಾಖಲೆ ಧೂಳಿಪಟ ಮಾಡಿದ ಪ್ರಭಾಸ್ ಕಲ್ಕಿ, ದಾಖಲೆಯ ಕಲೆಕ್ಷನ್.

ಎರಡೇ ದಿನದಲ್ಲಿ ಎಲ್ಲಾ ದಾಖಲೆ ಧೂಳಿಪಟ ಮಾಡಿದ ಪ್ರಭಾಸ್ ಕಲ್ಕಿ

Kalki 2898 AD Second Day Collection: ಸದ್ಯ ಪ್ರಭಾಸ್ ನಟನೆಯ ಕಲ್ಕಿ 2898 ಎಡಿ ಚಿತ್ರ ಬಾರಿ ಸದ್ದು ಮಾಡುತ್ತಿದೆ. ಕಲ್ಕಿ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದ್ದು, ಚಿತ್ರರಂಗದ ಹಲವು ಸಿನಿಮಾಗಳ ದಾಖಲೆ ಬ್ರೇಕ್ ಮಾಡಲು ಈ ಸಿನಿಮಾ ರೆಡಿಯಾಗಿದೆ. ಜೂನ್ 27 ರಂದು ಬಿಡುಗಡೆಯಾದ ಕಲ್ಕಿ ಸಿನಿಮಾ ಮೊದಲ ದಿನವೇ ಲಕ್ಷಾಂತರ ಟಿಕೆಟ್ ಗಳು ಮಾರಾಟಗೊಂಡಿವೆ. ಚಿತ್ರ ನೋಡಿದ ಪ್ರತಿಯೊಬ್ಬರೂ ಕೂಡ ಚಿತ್ರದ ಬಗ್ಗೆ ಪಾಸಿಟಿವ್ ಆಗಿ ಪ್ರತಿಕ್ರಿಯಿಸುತ್ತಿದ್ದಾರೆ.

ಇನ್ನು ಚಿತ್ರಕ್ಕೆ ಸಿಕ್ಕ ರಿವೀವ್ ನೋಡಿ ಮತ್ತಷ್ಟು ಜನರು ಸಿನಿಮಾ ನೋಡಲು ಕಾಯುತ್ತಿದ್ದಾರೆ. ನಾಗ್ ಅಶ್ವಿನ್ ಪ್ರಭಾಸ್ ನಟನೆಯ ಕಲ್ಕಿ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಕಲ್ಕಿ ಸಿನಿಮಾದಲ್ಲಿ ಅನೇಕ ಟಾಪ್ ಸ್ಟಾರ್ ನಟ ಪಾತ್ರವಿದ್ದು, ಬಾರಿ ಮೆಚ್ಚುಗೆಗೆ ಕಾರಣವಾಗಿದೆ. ಸದ್ಯ ಕಲ್ಕಿ ಸಿನಿಯಮದ ಕಲೆಕ್ಷನ್ ಬಗ್ಗೆ ಚರ್ಚೆ ನಡೆಯುತ್ತಿದೆ. ಎಲ್ಲರ ಮೆಚ್ಚುಗೆಗೆ ಕಾರಣವಾದ ಕಲ್ಕಿ ಸಿನಿಮಾ ತೆರೆಕಂಡ ಎರಡು ದಿನಗಳಲ್ಲಿ ಎಷ್ಟು ಕಲೆಕ್ಷನ್ ಮಾಡಿದೆ ಎನ್ನುವ ಬಗ್ಗೆ ನಾವೀಗ ಮಾಹಿತಿ ತಿಳಿಯೋಣ.

Kalki 2898 AD box office collection Day 2
Image Credit: Businesstoday

ಎರಡೇ ದಿನದಲ್ಲಿ ಎಲ್ಲಾ ದಾಖಲೆ ಧೂಳಿಪಟ ಮಾಡಿದ ಪ್ರಭಾಸ್ ಕಲ್ಕಿ
ಕಲ್ಕಿ 2898 AD ಸಿನಿಮಾ ಎರಡನೇ ದಿನದ ಕಲೆಕ್ಷನ್ ನಲ್ಲಿ ದಾಖಲೆ ಬರೆದಿದೆ. ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಸೇರಿದಂತೆ ಅನೇಕ ಸ್ಟಾರ್ ನಟ ನಟಿಯರು ಕಲ್ಕಿ ಸಿನಿಮಾದಲ್ಲಿ ನಟಿಸಿದ್ದಾರೆ. ಇದಲ್ಲದೆ, ಅನೇಕ ಸೆಲೆಬ್ರಿಟಿಗಳು ಅತಿಥಿ ಪಾತ್ರಗಳನ್ನು ಮಾಡಿದ್ದಾರೆ. ಮೊದಲ ದಿನವೇ ಸಿನಿಮಾ ಭರ್ಜರಿ ಗಳಿಕೆ ಮಾಡಿದ್ದು, ಎರಡನೇ ದಿನ ಕೂಡ ಕಲೆಕ್ಷನ್ ನಲ್ಲಿ ದಾಖಲೆ ಬರೆದಿದೆ. ಆರಂಭಿಕ ಲೆಕ್ಕಾಚಾರದಂತೆ ಮೊದಲ ದಿನವೇ ಚಿತ್ರ 180 ಕೋಟಿ ಗಳಿಸಿದ ಎನ್ನಲಾಗುತ್ತಿದೆ. ಹಾಗೆಯೆ ಎರಡನೇ ದಿನ ಸರಿಸುಮಾರು 149 ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗುತ್ತಿದೆ.

ಕಲ್ಕಿ ಸಿನಿಮಾದ ದಾಖಲೆಯ ಕಲೆಕ್ಷನ್
ಇನ್ನು ‘ಕಲ್ಕಿ 2898 AD’ ಚಿತ್ರಕ್ಕೆ ಭಾರತದಲ್ಲಿ ಪಾಸಿಟಿವ್ ಪ್ರತಿಕ್ರಿಯೆ ಸಿಕ್ಕಿದೆ. ಅಂದಹಾಗೆ ಈ ಸಿನಿಮಾ ಭಾರತದಲ್ಲಿ 95 ಕೋಟಿ ರೂಪಾಯಿ ಗಳಿಸಿದೆ. ಒಟ್ಟು ಕಲೆಕ್ಷನ್ ಲೆಕ್ಕ ಹಾಕಿದರೆ 115 ಕೋಟಿ ರೂ. ಆಗಿದೆ. ವಿಶ್ವಾದ್ಯಂತ ಲೆಕ್ಕಾಚಾರ ಹಾಕಿದರೆ ‘ಕಲ್ಕಿ 2898 ಎಡಿ’ ಚಿತ್ರ ಹಲವು ಚಿತ್ರಗಳ ದಾಖಲೆಯನ್ನು ಮುರಿದಿದೆ. ಕೆಜಿಎಫ್ 2 , ಸಲಾರ್, ಲಿಯೋ, ಸಾಹೂ ಚಿತ್ರಗಳ ದಾಖಲೆಯನ್ನು ಬ್ರೇಕ್ ಮಾಡಿದೆ.

ಆರ್ ಆರ್ ಆರ್, ಬಾಹುಬಲಿ ಚಿತ್ರಗಳ ದಾಖಲೆಯನ್ನು ಬ್ರೇಕ್ ಮಾಡುತ್ತಾ ಕಲ್ಕಿ ಸಿನಿಮಾ ಹೆಜ್ಜೆ ಹಾಕುತ್ತಿದೆ. ಇನ್ನು ಚಿತ್ರಕ್ಕೆ ಸಿಕ್ಕಿರುವ ರೆಸ್ಪಾನ್ಸ್ ನೋಡಿದರೆ ಕಲ್ಕಿ ಸಿನಿಮಾ ಕಲೆಕ್ಷನ್ ನಲ್ಲಿ ದಾಖಲೆ ಬರೆಯುವದರಲ್ಲಿ ಸಂದೇಹವಿಲ್ಲ ಎನ್ನಬಹುದು. ಕೇವಲ ಎರಡು ದಿನಗಳಲ್ಲಿ ಕೋಟಿ ಕೋಟಿ ಹಣ ಗಳಿಸಿದ ಸಿನಿಮಾ ಇನ್ನುಮುಂದಿನ ದಿನಗಳ ಎಷ್ಟು ಹಣ ಗಳಿಸಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

Join Nadunudi News WhatsApp Group

Kalki 2898 AD Second Day Collection
Image Credit: India Today

Join Nadunudi News WhatsApp Group