Kantara: ರಿಷಬ್ ಶೆಟ್ಟಿಯ ಕಾಂತಾರ ಮಾಡಿರುವ ಈ ದಾಖಲೆ ಮುರಿಯೋದು ಅಸಾಧ್ಯ.

Kantara: ರಿಷಬ್ ಶೆಟ್ಟಿ(Rishab Shetty) ನಿರ್ದೇಶನದ ಹಾಗೂ ನಟನೆಯ ಕಾಂತಾರ ಚಿತ್ರ ಸದ್ಯ ಬಾಕ್ಸ್ ಆಫೀಸ್‌ನಲ್ಲಿ(Box office) ಅಬ್ಬರಿಸುತ್ತಿದೆ. ಮೊದಲಿಗೆ ಏಕಭಾಷೆಯಲ್ಲಿ ಬಿಡುಗಡೆಗೊಂಡಿದ್ದ ಕಾಂತಾರ ಅಭೂತಪೂರ್ವ ವಿಮರ್ಶೆಗಳನ್ನು ಪಡೆದುಕೊಂಡು ಈಗ ಪ್ಯಾನ್ ಇಂಡಿಯಾ(Pan India)ಸಿನಿಮಾವಾಗಿ ಪರಿವರ್ತನೆಗೊಂಡಿದೆ.ಈಗಾಗಲೇ ಕಾಂತಾರ ನೂರು ಕೋಟಿ ಗಳಿಸಿ ಇನ್ನೂರು ಕೋಟಿ ಕ್ಲಬ್ ಸೇರುವತ್ತ ದಾಪುಗಾಲಿಟಿದೆ.

ಭಾಷೆ-ಆಚಾರ-ವಿಚಾರ-ಧರ್ಮವನ್ನು ಮೀರಿ ಎಲ್ಲರಿಂದಲೂ ಪ್ರಶಂಸೆಗೆ ಒಳಪಟ್ಟ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ತನ್ನ ಹೊಸ ಚರಿತ್ರೆ, ಮೈಲಿಗಲ್ಲನ್ನು ನಿರ್ಮಿಸಿದ ಚಿತ್ರ ಕಾಂತಾರ(Kantara).ಕಾಂತರ ಸಿನಿಮಾ ಕರ್ನಾಟಕ ಮಾತ್ರವಲ್ಲದೆ ಜಗತ್ತಿನಾದ್ಯಂತ ಎಲ್ಲಾ ವರ್ಗದವರು ಜಾತಿ ಮತ ಧರ್ಮವನ್ನು ಮೀರಿ ಸಿನಿಮಾವನ್ನು ವೀಕ್ಷಿಸಿ ಮುಕ್ತಕಂಠದಿಂದ ಹೊಗಳಿದ್ದು ನಮ್ಮನಾಡಿಗೆ ಸಿಕ್ಕಂತಹ ದೊಡ್ಡ ಗೌರವ.

ತುಳು ನಾಡ ಸಂಸ್ಕೃತಿಯ ಪ್ರಧಾನ ಅಂಗವಾಗಿ ದೈವಾರಾಧನೆ ಇದೆ. ತುಳುನಾಡಿನವರಿಗೆ ದೇವರಿಗಿಂತ ಹೆಚ್ಚಾಗಿ ದೈವವನ್ನೇ ನಂಬಿಕೊಂಡು ಬಂದಿರುವುದು ಇತಿಹಾಸ. ದೈವ ಇಲ್ಲದ ತುಳು ಸಂಸ್ಕೃತಿಯೇ ಇಲ್ಲ ಎನ್ನುವುದು ಅದರ ಪಾರಮ್ಯ. ನಂಬಿಕೆಯ ಆಧಾರದ ಮೇಲೆ ನಿಂತಿರುವ ಈ ಆರಾಧನಾ ಪದ್ಧತಿಯು ಶತಮಾನಗಳ ಪರಂಪರೆಯುಳ್ಳದ್ದು.

This record made by Rishabh Shetty's Kantara is impossible to break
Image Credit: The Economic Times

ಇಂಥ ಸಂಸ್ಕೃತಿಯ ಬೇರುಗಳು ಆಳಕ್ಕೆ ಇಳಿದು ಕಾಂತಾರ ಸಿನಿಮಾ ನಿರ್ಮಾಣ ಮಾಡಿ ಜಗತ್ತೇ ಬೆರಗಾಗುವಂತೆ ಮಾಡಿದ ಚಿತ್ರತಂಡಕ್ಕೆ ಧನ್ಯವಾದ ಹೇಳಲೇಬೇಕು.ಕಾಂತಾರ ಸಿನಿಮಾ ನೋಡುವಾಗ ಈ ಮಣ್ಣಿನ ಸಂಸ್ಕೃತಿ ಅರಿವಿದ್ದವರ ಮೈ ಜುಂ ಅನಿಸಿರಬಹುದು.

ದೈವದ ಕೊಲದ ದೃಶ್ಯ, ದೈವದ ನುಡಿ, ದೈವದ ಆವೇಶ, ಕಂಬಳ ಕ್ರೀಡೆ, ಕೋಳಿ ಅಂಕ, ಇವುಗಳ ಮಧ್ಯೆ ಪೋಲಿತನದ ಬೈಗುಳ ಕೆಲವೊಂದು ಹಾಸ್ಯ ಸೇರಿದಂತೆ ಮುಖ್ಯವಾಗಿ ಪ್ರಕೃತಿಯನ್ನು ತೋರಿಸಿದ ದೃಶ್ಯ ಎಲ್ಲವೂ ದೀರ್ಘ ಕಾಲ ನೆನಪಲ್ಲಿ ಉಳಿಯುವಂತೆ ಮಾಡಿದೆ.

Join Nadunudi News WhatsApp Group

ಈ ಸಿನಿಮಾದಲ್ಲಿ ಪ್ರಮುಖ ನಾಯಕನಟನಿಂದ ಹಿಡಿದು ಸಣ್ಣ ಪಾತ್ರದಾರಿ ಕೂಡ ತನ್ನ ಅದ್ಭುತ ನಟನೆಯಿಂದ ಸಿನಿಮಾ ಗೆಲ್ಲುವಲ್ಲಿ ಪ್ರಮುಖ ಕಾರಣಕರ್ತರಾಗಿದ್ದಾರೆ. ಸಿನಿಮಾ ನಿರ್ಮಾಣ ಮಾಡಿದರೆ ಈ ರೀತಿಯ ಸಿನಿಮಾ ಮಾಡಬೇಕು ಮತ್ತು ಈ ರೀತಿಯ ಸಿನಿಮಾವನ್ನು ಸಿನಿಪ್ರೇಕ್ಷಕರು ಕೈಬಿಡುವುದಿಲ್ಲ ಎಂಬುದಕ್ಕೆ ಕಾಂತಾರ ಸಿನಿಮಾವೇ ಸಾಕ್ಷಿ.

This record made by Rishabh Shetty's Kantara is impossible to break.
Image Credit: The Economic Times

ದೈವದ ಬಗ್ಗೆ ಎಷ್ಟೊಂದು ಭಯ-ಭಕ್ತಿ ಇದೆ ಅಂದರೆ ಸಿನಿಮಾ ನೋಡಲು ಕುಟುಂಬ ಸಮೆತ ಹೋದವರಲ್ಲಿ ಅನೇಕ ಮಂದಿ ಮನೆಯಲ್ಲಿ ಸ್ನಾನ ಮಾಡಿ ಶುದ್ಧತೆಯಿಂದ ಸಿನಿಮಾ ವೀಕ್ಷಿಸಿದವರು ಕೆಲವರಾದರೆ, ಸಿನಿಮಾದಲ್ಲಿ ದೈವ ನರ್ತನ ಪ್ರಾರಂಭವಾಗುವಾಗ ತನ್ನ ಪಾದರಕ್ಷೆಯನ್ನು ಕಳಚಿಟ್ಟು ಸಿನಿಮಾ ವೀಕ್ಷಿಸಿದ ಅದೆಷ್ಟು ಪ್ರೇಕ್ಷಕರು ಒಂದೆಡೆಯಾದರೆ, ಕೆಲ ಪ್ರೇಕ್ಷಕರಿಗೆ ದೈವ ಮೈಮೇಲೆ ಬಂದಿರುವುದು ಈ ಸಿನಿಮಾದ ದಿವ್ಯಶಕ್ತಿಯನ್ನು ಎತ್ತಿ ತೋರಿಸುತ್ತದೆ.

ಇನ್ನು 18 ಸಾವಿರ ವೋಟ್‌ಗಳಿಗೆ 9.9% ರೇಟಿಂಗ್ ಪಡೆದುಕೊಂಡಾಗಲೇ ಬುಕ್ ಮೈ ಶೋನಲ್ಲಿ ವಿಶ್ವ ದಾಖಲೆ ಬರೆದಿದ್ದ ಕಾಂತಾರ ಇನ್ನೂ ಸಹ ಅದೇ ರೇಟಿಂಗ್ ಹೊಂದಿದೆ.

ಕಾಂತಾರ ಹೊಂದಿರುವ ಈ ರೇಟಿಂಗ್ ದಾಖಲೆಯನ್ನು ಮುಂಬರುವ ಯಾವ ಚಿತ್ರವೂ ಸಹ ಮುರಿಯುವುದಿಲ್ಲ ಎಂದು ಹೇಳಬಹುದು. ಏಕೆಂದರೆ ಕಾಂತಾರ ರೀತಿ ಲಕ್ಷ ವೋಟಿಂಗ್ ಪಡೆದುಕೊಂಡು 9.9% ರೇಟಿಂಗ್ ಹೊಂದುವುದು ಅಷ್ಟು ಸುಲಭದ ಮಾತಲ್ಲ.

Join Nadunudi News WhatsApp Group