ನಾಳೆಯಿಂದ ಕರ್ನಾಟಕ ಫುಲ್ ಲಾಕ್ ಡೌನ್, ನಾಳೆಯಿಂದ ರಾಜ್ಯದಲ್ಲಿ ಏನಿರುತ್ತೆ ಏನಿರಲ್ಲ ನೋಡಿ.

ದೇಶದಲ್ಲಿ ಕರೋನ ಮಹಾಮಾರಿ ಯಾವ ರೀತಿಯಲ್ಲಿ ಹರಡುತ್ತಿದೆ ಅನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರ ಆಗಿದೆ ಎಂದು ಹೇಳಬಹುದು. ಹೌದು ಕಳೆದ ವರ್ಷ ದೇಶದಲ್ಲಿ ಕಾಣಿಸಿಕೊಂಡ ಕರೋನ ಇನ್ನು ಕೂಡ ತನ್ನ ಆರ್ಭಟವನ್ನ ಮುಂದುವರೆಸಿದ್ದು ಕರೋನ ಮಹಾಮಾರಿಗೆ ತುತ್ತಾಗುವವರ ಸಂಖ್ಯೆ ದಿನದಿಂದ ದಿನಕ್ಕೆ ಬಹಳ ಜಾಸ್ತಿ ಆಗುತ್ತಿದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಕರ್ನಾಟಕದಲ್ಲಿ ಕೂಡ ಕರೋನ ಮಹಾಮಾರಿಗೆ ಆರ್ಭಟ ಬಹಳ ಜಾಸ್ತಿ ಆಗಿದ್ದು ಜನರು ಮಾತ್ರವಲ್ಲದೆ ಸರ್ಕಾರ ಕೂಡ ಕೂಡ ಕರೋನ ಮಹಾಮಾರಿಗೆ ಬೇಸತ್ತು ಹೋಗಿದೆ ಎಂದು ಹೇಳಬಹುದು. ಇನ್ನು ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಬಹಳ ಜಾಸ್ತಿ ಆಗುತ್ತಿದ್ದು ಅದೆಷ್ಟೋ ನಿಯಂತ್ರಣ ಕ್ರಮವನ್ನ ಕೈಗೊಂಡರು ಕೂಡ ಕರೋನ ಮಹಾಮಾರಿಯನ್ನ ನಿಯಂತ್ರಣ ಮಾಡಲು ಸಾಧ್ಯವಾಗುತ್ತಿಲ್ಲ ಅನ್ನುವುದು ಬಹಳ ಬೇಸರದ ಸಂಗತಿ ಆಗಿದೆ ಎಂದು ಹೇಳಿದರೆ ತಪ್ಪಾಗಲ್ಲ.

ಇನ್ನು ಕರೋನ ಮಹಾಮಾರಿಯನ್ನ ನಿಯಂತ್ರಣ ಮಾಡುವ ಸಲುವಾಗಿ ನಾಳೆಯಿಂದ ಮತ್ತೆ ರಾಜ್ಯದಲ್ಲಿ ಲಾಕ್ ಡೌನ್ ಘೋಷಣೆ ಆಗಿದ್ದು ಜನರು ಸರ್ಕಾರದ ಈ ನಿರ್ಧಾರಕ್ಕೆ ತಲೆಬಾಗಬೇಕಾಗಿದೆ ಎಂದು ಹೇಳಬಹುದು. ಹಾಗಾದರೆ ನಾಳೆಯಿಂದ ರಾಜ್ಯದಲ್ಲಿ ಏನಿರುತ್ತದೆ ಮತ್ತು ಏನಿರಲ್ಲ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಈ ಹಿಂದೆ ಲಾಕ್ ಡೌನ್ ಮಾಡಲ್ಲ ಮಾಡಲ್ಲ ಎಂದು ಹೇಳುತ್ತಿದ್ದ ರಾಜ್ಯ ಸರ್ಕಾರ ಈಗ ಮುಂದಿನ 15 ದಿನಗಳ ಕಾಲ ರಾಜ್ಯವನ್ನ ಲಾಕ್ ಡೌನ್ ಮಾಡಲು ನಿರ್ಧಾರವನ್ನ ಮಾಡಿದೆ.

Karnataka lock down

ಇನ್ನು ನಾಳೆಯಿಂದ ಬೆಳಿಗ್ಗೆ 6 ಘಂಟೆಯಿಂದ 10 ಘಂಟೆ ತನಕ ಮಾತ್ರ ಅಗತ್ಯ ವಸ್ತುಗಳನ್ನ ಖರೀದಿ ಮಾಡಲು ಅವಕಾಶವನ್ನ ನೀಡಲಾಗುತ್ತದೆ ಎಂದು ರಾಜ್ಯದ ಮುಖ್ಯ ಮಂತ್ರಿಗಳು ಘೋಷಣೆಯನ್ನ ಮಾಡಿದ್ದಾರೆ. ರಾಜ್ಯದಲ್ಲಿ ಕರೋನ ಮಹಾಮಾರಿ ಜಾಸ್ತಿ ಆಗುತ್ತಿರುವ ಕಾರಣ ರಾಜ್ಯದಲ್ಲಿ ಲಾಕ್ ಡೌನ್ ನಿಯಮವನ್ನ ಜಾರಿಗೆ ತರಲಾಗುತ್ತಿದೆ. ಇನ್ನು ನಾಳೆಯಿಂದ ರಾಜ್ಯದಲ್ಲಿ ಬೆಳಿಗ್ಗೆ ಹತ್ತು ಘಂಟೆಯಿಂದ ಎಲ್ಲವೂ ಸಂಪೂರ್ಣವಾಗಿ ಬಂದ್ ಆಗಲಿದೆ ಎಂದು ಹೇಳಬಹುದು. ಇನ್ನು ಬೆಳಿಗ್ಗೆ ಅಗತ್ಯ ವಸ್ತುಗಳನ್ನ ಅಂಗಡಿ ಮಾತ್ರ ತೆರೆಯಲಿದ್ದು ಜನರು ಹತ್ತು ಘಂಟೆಯ ಒಳಗಾಗಿ ಆ ಎಲ್ಲಾ ವಸ್ತುಗಳನ್ನ ಖರೀದಿ ಮಾಡಬೇಕಾಗಿದೆ.

ಗಾರ್ಮೆಂಟ್ಸ್ ನೌಕರರು, ಕಟ್ಟಡ ಕಾಮಗಾರಿ ಮತ್ತು ಕೃಷಿ ಚಟುವಟಿಕೆಗೆ ಯಾವುದೇ ಸಮಸ್ಯೆ ಇರುವುದಿಲ್ಲ. ಇನ್ನು ರಾಜ್ಯದಲ್ಲಿ ವೈದ್ಯಕೀಯ ಅಗತ್ಯ ಸೇವೆ ಎಂದಿನಂತೆ ಇರಲಿದೆ. ಇನ್ನು ರಾಜ್ಯದಲ್ಲಿ ಕರೋನ ಮಹಾಮಾರಿ ಆರ್ಭಟ ಕಡಿಮೆ ಆಗಬೇಕು ಅಂದರೆ ಮುಂದಿನ 15 ದಿನಗಳ ಕಾಲ ಕರ್ನಾಟಕ ಸಂಪೂರ್ಣ ಬಂದ್ ಆಗಬೇಕು ಎಂದು ಹೇಳಿದರೆ ತಪ್ಪಾಗಲ್ಲ. ಸ್ನೇಹಿತರೆ ಈ ಕರೋನ ಲಾಕ್ ಡೌನ್ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

Karnataka lock down

Join Nadunudi News WhatsApp Group