ಕರೋನ ಮಹಾಮಾರಿಗೆ ಚಿತ್ರರಂಗದ ಇನ್ನೊಬ್ಬ ಖ್ಯಾತ ಹಿರಿಯ ನಟ ಬಲಿ, ಕಣ್ಣೀರಿನಲ್ಲಿ ಚಿತ್ರರಂಗ.

ಭಾರತದ ಚಿತ್ರರಂಗದ ಸಮಯ ಸರಿ ಇಲ್ಲ ಅನ್ನುವುದು ಇನ್ನೊಮ್ಮೆ ಸಾಭೀತು ಆಗುತ್ತಿದೆ ಎಂದು ಹೇಳಬಹುದು. ಹೌದು ಅದೆಷ್ಟೋ ನಟ ಮತ್ತು ನಟಿಯರು ಕಳೆದ ವರ್ಷ ಇಹಲೋಕವನ್ನ ತ್ಯಜಿಸುವುದರ ಮೂಲಕ ಅದೆಷ್ಟೋ ಅಭಿಮಾನಿಗಳಿಗೆ ಬಹಳ ಬೇಸರವನ್ನ ಉಂಟುಮಾಡಿದ್ದರು ಎಂದು ಹೇಳಬಹುದು. ಇನ್ನು ದೇಶದಲ್ಲಿ ಬಹಳ ವೇಗವಾಗಿ ಹರಡುತ್ತಿರುವ ಕರೋನ ಮಹಾಮಾರಿಯ ಕಾರಣ ಕೂಡ ಅದೆಷ್ಟೋ ಜನರು ತಮ್ಮ ಪ್ರಾಣವನ್ನ ಕಳೆದುಕೊಂಡಿದ್ದು ಅವರನ್ನ ಕೆಲವು ಖ್ಯಾತ ನಟ ನಟಿಯರು ಕೂಡ ಸೇರಿಕೊಂಡಿದ್ದಾರೆ ಎಂದು ಹೇಳಬಹುದು. ಇನ್ನು ಮೊನ್ನೆ ಮೊನ್ನೆತಾನೆ ಕನ್ನಡದ ಹೆಸರಾಂತ ನಟ ಮತ್ತು ನಿರ್ಮಾಪಕ ಎನಿಸಿಕೊಂಡಿದ್ದ ಮಂಜುನಾಥ್ ಅವರು ಅವರು ಕರೋನ ಮಹಾಮಾರಿಗೆ ಬಲಿಯಾಗಿದ್ದರು ಮತ್ತು ಕಳೆದ ವರ್ಷ ಕೂಡ ಕೆಲವು ನಟ ನಟಿಯರು ಕರೋನ ಮಹಾಮಾರಿಗೆ ಬಲಿಯಾಗಿದ್ದರು ಎಂದು ಹೇಳಬಹುದು.

ಇನ್ನು ಈಗ ಇನ್ನೊಮ್ಮೆ ಖ್ಯಾತ ಹಿರಿಯ ನಟ ಕರೋನ ಮಹಾಮಾರಿಗೆ ಬಲಿಯಾಗಿದ್ದು ಇವರ ಅಗಲಿಕೆಗೆ ಭಾರತದ ಚಿತ್ರರಂಗ ಕಂಬನಿಯನ್ನ ಮಿಡಿದಿದೆ ಎಂದು ಹೇಳಬಹುದು. ಹಾಗಾದರೆ ಈ ನಟ ಯಾರು ಮತ್ತು ಅವರ ಆರೋಗ್ಯ ಪರಿಸ್ಥಿತಿ ಹೇಗಿತ್ತು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಕರೋನ ಮಹಾಮಾರಿಯ ಎರಡನೆಯ ಅಲೆಗೆ ಕೆಲವು ಸೆಲೆಬ್ರಿಟಿಗಳು ಕೂಡ ಬಲಿಯಾಗುತ್ತಿದ್ದಾರೆ ಎಂದು ಹೇಳಬಹುದು.

Kishor nandaleskar

ಹಿಂದಿ ಮತ್ತು ಮರಾಠಿ ಸಿನಿಮಾಗಳ ಮೂಲಕ ಬಾರಿ ಜನಮೆಚ್ಚುಗೆಯನ್ನ ಗಳಿಸಿಕೊಂಡಿದ್ದ ಖ್ಯಾತ ಹಿರಿಯ ನಟ ಕಿಶೋರ್ ನಂದಲಸ್ಕರ್ ಅವರು ಕರೋನ ಮಹಾಮಾರಿಗೆ ಬಲಿಯಾಗಿದ್ದಾರೆ. ಸುಮಾರು 81 ವರ್ಷ ವಯಸ್ಸಿನವರಾಗಿರುವ ಕಿಶೋರ್ ನಂದಲಸ್ಕರ್ ಅವರು ಕರೋನ ಮಹಾಮಾರಿಯಿಂದ ನಿಧನರಾಗಿದ್ದಾರೆ ಎಂದು ಅವರ ಮೊಮ್ಮೊಗ ಖಚಿತಪಡಿಸಿದ್ದಾರೆ. ಕಳೆದ ಬುಧವಾರ ಅವರಿಗೆ ಕರೋನ ಪಾಸಿಟಿವ್ ಬಂದಿತ್ತು ಮತ್ತು ಅವರಿಗೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ ಎಂದು ಅವರ ಮೊಮ್ಮಗ ಖಚಿತಪಡಿಸಿದ್ದಾರೆ. 1989 ರಲ್ಲಿ ಕಿಶೋರ್ ನಂದಲಸ್ಕರ್ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದರು ಮತ್ತು ಹಲವು ಸಮಯಗಳಿಂದ ಚಿತ್ರರಂಗದಲ್ಲಿ ಬಹುಬೇಡಿಕೆಯ ಪೋಷಕ ನಟರಾಗಿದ್ದರು ಕಿಶೋರ್ ನಂದಲಸ್ಕರ್ ಅವರು.

ಖಾಕಿ, ವಾಸ್ತವ್, ದ ರಿಯಾಲಿಟಿ, ಸಿಂಗಂ ಸೇರಿದಂತೆ ಹಲವು ಹಿಂದಿ ಸಿನಿಮಾಗಳಲ್ಲಿ ನಟನೆಯನ್ನ ಮಾಡುವುದರ ಜೊತೆಗೆ ಕೆಲವು ಮರಾಠಿ ಚಿತ್ರಗಳಲ್ಲಿ ನಟನೆಯನ್ನ ಮಾಡಿದ್ದರು ಕಿಶೋರ್ ನಂದಲಸ್ಕರ್ ಅವರು. ಕೆಲವು ಸಮಯದ ಹಿಂದೆ, ನಾನು ಹಲವು ಸಿನಿಮಾಗಳಲ್ಲಿ ನಟನೆಯನ್ನ ಮಾಡಿದರು ಯಾರು ಕೂಡ ನನ್ನನ್ನ ಗುರುತು ಹಿಡಿಯುತ್ತಿಲ್ಲ ಎಂದು ಬಹಳ ಬೇಸರವನ್ನ ವ್ಯಕ್ತಪಡಿಸಿದ್ದರು ಕಿಶೋರ್ ನಂದಲಸ್ಕರ್ ಅವರು. ಜೀವನದಲ್ಲಿ ಬಹಳ ನೋವನ್ನ ಅನುಭವಿಸಿದ್ದ ಕಿಶೋರ್ ನಂದಲಸ್ಕರ್ ಅವರು ಈಗ ಕರೋನ ಮಹಾಮಾರಿಗೆ ಬಲಿಯಾಗಿದ್ದು ಚಿತ್ರರಂಗ ಅವರ ಅಗಲಿಕೆಗೆ ಕಂಬನಿಯನ್ನ ಮಿಡಿದಿದೆ. ಇವರ ಆತ್ಮಕ್ಕೆ ಆ ದೇವರು ಶಾಂತಿ ಎಂದು ನಾವು ದೇವರಲ್ಲಿ ಪ್ರಾರ್ಥನೆಯನ್ನ ಮಾಡೋಣ.

Join Nadunudi News WhatsApp Group

Kishor nandaleskar

Join Nadunudi News WhatsApp Group