Kodi Shree: ಎರಡು ಪ್ರಧಾನಿಗಳ ಸಾವಾಗಲಿದೆ, ಕೊಡಿ ಮಠದ ಶ್ರೀಗಳ ಇನ್ನೊಂದು ಸ್ಪೋಟಕ ಭವಿಷ್ಯ

ಇನ್ನೊಂದು ಶಾಕಿಂಗ್ ಭವಿಷ್ಯ ನುಡಿದ ಕೊಡಿ ಮಠದ ಶ್ರೀಗಳು

Kodi Shree Prediction: ಕೊಡಿ ಮಠದ ಶ್ರೀಗಳಾದ Shivayogi Shivananda Rajendra ಸ್ವಾಮೀಜಿಯವರು 2024 ರ ಆರಂಭದಲ್ಲಿ ಈ ವರ್ಷದಲ್ಲಿ ಎದುರಾಗುವಂತಹ ಸಮಸ್ಯೆಗಳ ಬಗ್ಗೆ ಭವಿಷ್ಯವಾಣಿ ನುಡಿದು ಜನರನ್ನು ಎಚ್ಚರಿಸಿದ್ದಾರೆ. ಕೊಡಿ ಮಠದ ಶ್ರೀಗಳ ಭವಿಷ್ಯವಾಣಿ ಈವರೆಗೆ ಸಾಕಷ್ಟು ನಿಜವಾಗಿದೆ. ಹೀಗಾಗಿ ಜನರು ಶ್ರೀಗಳ ಭವಿಷ್ಯವಾಣಿಯನ್ನು ನಂಬುತ್ತಾರೆ.

ಶ್ರೀಗಳು ಮುಂದೆ ಆಗುವಂತಹ ಅನಾಹುತದ ಬಗ್ಗೆ ಮುನ್ನೆಚೆರಿಕೆ ವಹಿಸುವಂತೆ ಹೇಳುತ್ತಾರೆ. ಕಳೆದ ಕೆಲವು ದಿನಗಳ ಹಿಂದೆ ಚಿಕ್ಕಬಳ್ಳಾಪುರದಲ್ಲಿ ಕೊಡಿ ಮಠದ ಶ್ರೀಗಳು ಮುಂದೆ ರಾಜ್ಯದಲ್ಲಾಗುವ ಅನಾಹುತ ರಾಜ್ಯ ರಾಜಕಾರಣದ ಬಗ್ಗೆ ಭವಿಷ್ಯ ಹೇಳಿದ್ದರು. ಅದಲ್ಲದೆ ಇದೀಗ ಮತ್ತೆ ಸ್ಪೋಟಕವಾದಂತಹ ಭವಿಷ್ಯವನ್ನು ಧಾರವಾದಲ್ಲಿ ನುಡಿದಿದ್ದಾರೆ.

Kodi Shree Prediction
Image Credit: Original Source

ಆಘಾತಕಾರಿ ಭವಿಷ್ಯ ನುಡಿದ ಕೊಡಿ ಶ್ರೀಗಳು
ಧಾರವಾಡದಲ್ಲಿ ಆಘಾತಕಾರಿ ಭವಿಷ್ಯ ನುಡಿದ ಕೊಡಿ ಶ್ರೀಗಳು, ಹಿಂದೂ ಸಂಪ್ರದಾಯದಲ್ಲಿ ಸಂವತ್ಸರಗಳಿಗೆ ಹೆಚ್ಚಿನ ಮಹತ್ವ ನೀಡುತ್ತಾರೆ. ಸಂವತ್ಸರ ಎಂದರೆ ಸಂಸ್ಕೃತದಲ್ಲಿ ವರ್ಷವಾಗಿದ್ದು, ಹಿಂದೂ ಸಂಪ್ರದಾಯದಲ್ಲಿ ಒಟ್ಟು 60 ಸಂವತ್ಸರಗಳಿವೆ. ಸದ್ಯ ಕ್ರೋಧಿ ನಾಮ ಸಂವತ್ಸರ ನೆಡೆಯುತ್ತಿದೆ. ಈ ಸಂವತ್ಸರದಲ್ಲಿ ಒಳಿತಿಗಿಂತ ಕೆಡುಕು ಹೆಚ್ಚಾಗಿರುತ್ತದೆ.

ಭೂಮಿ, ಅಗ್ನಿ, ಆಕಾಶ, ವಾಯು, ಜಲ ಇವೆಲ್ಲದರಿಂದಲೂ ತೊಂದರೆ ಆಗಲಿದೆ. ಇದಲ್ಲದೆ ರಾಜಕೀಯದ ಬಗ್ಗೆ ಮಾತನಾಡಿದ ಅವರು ರಾಷ್ಟ್ರದಲ್ಲಿ ಅಧಿಕಾರಕ್ಕಾಗಿ ಕೂಡಿಕೊಂಡಿದ್ದಾರೆ, ಇನ್ನೂ ಅಂಗಡಿ ಓಪನ್ ಆಗಿಲ್ಲ, ವ್ಯಾಪಾರ ಶುರುವಾಗಲಿ ಆ ಬಳಿಕ ರಾಷ್ಟ್ರ ರಾಜಕಾರಣದ ಬಗ್ಗೆ ಭವಿಷ್ಯ ಹೇಳುವೆ. ಜಗತ್ತಿನಲ್ಲಿ ಎರಡುಮೂರು ಪ್ರಧಾನಿಗಳು ಮರಣ ಹೊಂದಲಿದ್ದಾರೆ. ದೊಡ್ಡ ದೊಡ್ಡವರಿಗೆ ನೋವು ತಾಪ ದುಃಖ ಆಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

two to three prime ministers will die in the world, kodi shree prediction
Image Credit: Vistaranews

Join Nadunudi News WhatsApp Group

Join Nadunudi News WhatsApp Group