Bus Accident: ಬಸ್ ಅಪಘಾತದಲ್ಲಿ ಸತ್ತರೆ ಇನ್ನುಮುಂದೆ ಕಡ್ಡಾಯವಾಗಿ ಇಷ್ಟು ಪರಿಹಾರ ಕೊಡಬೇಕು, ಅಧಿಕೃತ ಆದೇಶ

ಸರ್ಕಾರೀ ಬಸ್ ಅಪಘಾತದಲ್ಲಿ ವ್ಯಕ್ತಿ ಪ್ರಾಣ ಬಿಟ್ಟರೆ ಇಷ್ಟು ಮೊತ್ತದ ಪರಿಹಾರ ಕಡ್ಡಾಯವಾಗಿ ಕೊಡಬೇಕು

KSRTC Bus Accident Compensation Fund: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(KSRTC)ವಾಹನಗಳಲ್ಲಿ ಪ್ರಯಾಣ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು, ಈ ಪ್ರಯಾಣಿಕರ ಸೌಕರ್ಯಕ್ಕಾಗಿ ಇಲಾಖೆ ಒಂದು ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಇನ್ನುಮುಂದೆ ಸರ್ಕಾರಿ ಸಾರಿಗೆ ವಾಹನಗಳು ಅಪಘಾತಕ್ಕೆ ಒಳಗಾದಾಗ, ನಿಗಮದ ವಾಹನಗಳಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರು ಮೃತಪಟ್ಟಲ್ಲಿ, ಮೃತ ಪ್ರಯಾಣಿಕರ ಅವಲಂಭಿತರಿಗೆ ಆರ್ಥಿಕ ನೆರವು ನೀಡುವ ಸಲುವಾಗಿ ಅಂತಹ ಪ್ರಯಾಣಿಕರ ಅಪಘಾತ ಪರಿಹಾರ ನಿಧಿಯನ್ನು ಬಿಡುಗಡೆ ಮಾಡಲಾಗುತ್ತದೆ.

KSRTC Bus Accident Compensation Fund
Image Credit: Oneindia

ಅಪಘಾತ ಪರಿಹಾರ ನಿಧಿ ಟ್ರಸ್ಟ್ ವತಿಯಿಂದ ಪರಿಹಾರ

ಇಂದಿನ ದಿನಗಳಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸರ್ಕಾರಿ ವಾಹನ ಅಪಘಾತವಾದರೆ ಅದರಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರ ಪರಿಸ್ಥಿತಿ ಏನು ಅನ್ನುವುದರ ಕುರಿತು ಪ್ರಶ್ನೆ ಮೂಡಿದಾಗ, ಅವರ ಅವಲಂಭಿತರಿಗಾಗಿ ಇಲಾಖೆ ಹೊಸ ಪರಿಹಾರ ನಿಧಿಯನ್ನು ಆರಂಭಿಸಿದ್ದು, ಈ ಮೂಲಕ ನಿಗಮದ ವಾಹನಗಳಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರು ಮೃತಪಟ್ಟಲ್ಲಿ, ಮೃತ ಪ್ರಯಾಣಿಕರ ಅವಲಂಭಿತರಿಗೆ, ಆರ್ಥಿಕ ನೆರವು ನೀಡುವ ಸಲುವಾಗಿ ಪ್ರಯಾಣಿಕರ ಅಪಘಾತ ಪರಿಹಾರ ನಿಧಿ ಟ್ರಸ್ಟ್ ವತಿಯಿಂದ ಪ್ರಸ್ತುತ ರೂ.1,00,000/- ಪರಿಹಾರ ನೀಡಲಾಗುತ್ತಿದೆ.

ಈ ನಡುವೆ ಪ್ರಸ್ತುತ ಪಾವತಿಸುತ್ತಿರುವ ಪರಿಹಾರ ಮೊತ್ತವನ್ನು ದಿನಾಂಕ 01.03.2017 ಪಾವತಿಸಲಾಗುತ್ತಿದ್ದು, ತದನಂತರ ಪರಿಹಾರದ ಮೊತ್ತದಲ್ಲಿ ಯಾವುದೇ ಹೆಚ್ಚಳವಾಗಿರುವುದಿಲ್ಲ. ಈ ಹಿನ್ನೆಲೆಯಲ್ಲಿ ದಿನಾಂಕ 31.10.2023 ರಂದು ಜರುಗಿದ 29ನೇ ಅಪಘಾತ ಸಂಹಾರ ನಿಧಿ ಸಭೆಯಲ್ಲಿ ಚರ್ಚಿಸಿ, ಪರಿಹಾರ ಮೊತ್ತವನ್ನು ರೂ.1,00,000/- ದಿಂದ ರೂ.10,00,000/-(ರೂ.ಹತ್ತು ಲಕ್ಷ ಮಾತ್ರ) ಗಳಿಗೆ ಹೆಚ್ಚಿಸಲು ಸಭೆಯು ಅನುಮೋದಿಸಿರುತ್ತದೆ.

KSRTC Bus Accident Compensation Fund latest Update
Image Credit: Bangaloremirror

ಮೃತರ ಕುಟುಂಬದವರಿಗೆ ಪರಿಹಾರ ಧನವನ್ನು ನೀಡಲಾಗುವುದು

Join Nadunudi News WhatsApp Group

ನಿಗಮದ ವಾಹನಗಳಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರು ಮೃತಪಟ್ಟಲ್ಲಿ ಪರಿಷ್ಕೃತ ಪರಿಹಾರ ಮೊತ್ತ ರೂ.10,00,000/-ಗಳಲ್ಲಿ (ರೂ. ಹತ್ತು ಲಕ್ಷ ಮಾತ್ರ) ತಕ್ಷಣದ ಪರಿಹಾರವಾಗಿ ರೂ.25,000/-ವನ್ನು (ರೂ.ಇಪ್ಪತ್ತೈದು ಸಾವಿರ ಮಾತ್ರ) ಕ.ರಾ.ರ.ಸಾ.ನಿಗಮದ ಸುತ್ತೋಲೆ ಸಂಖ್ಯೆ: 754 ದಿನಾಂಕ: 08.12.1998 ರ ಅನುಸಾರ ಸಂಬಂಧಪಟ್ಟ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪಾವತಿಸುವುದು.

ತದನಂತರ ಅಪನಿ ಟ್ರಸ್ಟ್‌ನಿಂದ ರೂ.25,000/-ವನ್ನು (ಡೊ.ಇಪ್ಪತ್ತೈದು ಸಾವಿರ ಮಾತ್ರ) ಸಂಬಂಧಪಟ್ಟ ವಿಭಾಗಗಳಿಗೆ ಮರುಪಾವತಿಸಿ,ಬಾಕಿ ಮೊತ್ತ ರೂ.9,75,000/-(ರೂ. ಒಂಭತ್ತು ಲಕ್ಷದ ಎಪ್ಪತ್ತೈದು ಸಾವಿರ ಮಾತ್ರ) ಗಳನ್ನು ಉಲ್ಲೇಖ | ರ ಸುತ್ತೋಲೆಯಾನುಸಾರ ದಿವಂಗತರ ವಾರಸುದಾರರಿಗೆ ಪಾವತಿಸುವುದು.

ಮೃತರ ಕುಟುಂಬದವರಿಗೆ ಪರಿಹಾರ ಧನವನ್ನು ರೂ.10.00 ಲಕ್ಷ (ರೂ. ಮತ್ತು ಲಕ್ಷ ಮಾತ್ರ) ಹೆಚ್ಚಿಸಿರುವುದರಿಂದ ಕಾಲ ಕ್ರಮೇಣ ಅಪಘಾತ ಪರಿಹಾರ ನಿಧಿಯ ಒಟ್ಟು ಖರ್ಚು ಒಟ್ಟು ಆದಾಯಕ್ಕಿಂತ ಅಧಿಕವಾಗುವ ಹಿನ್ನೆಲೆಯಲ್ಲಿ ಕೆಳಕಂಡಂತೆ ವಂತಿಕೆ ಸಂಗ್ರಹಣೆಯನ್ನು ಹೆಚ್ಚಿಸಲು ಸಹ ಸಭೆಯು ಅನುಮೋದಿಸಿದ್ದು, ಅದರಂತೆ ಕ್ರಮಕೈಗೊಳ್ಳುವುದು, ಈ ಮೇಲ್ಕಂಡ ಸುತ್ತೋಲೆಯು ದಿನಾಂಕ: 01.01.2014 ರಿಂದ ಜಾರಿಗೆ ಬರುತ್ತದೆ.

Join Nadunudi News WhatsApp Group