KSRTC Buss: ಒಪ್ಪಂದದ ಮೇಲೆ KSRTC ಬಸ್ ಬುಕ್ ಮಾಡುವವರಿಗೆ ಬೇಸರದ ಸುದ್ದಿ, ಹೊಸ ನಿಯಮ ಜಾರಿಗೆ.

KRSTC ಬಸ್ಸನ್ನು ಒಪ್ಪಂದದ ಮೇರೆಗೆ ಬುಕ್ ಮಾಡಿಕೊಳ್ಳುವವರಿಗೆ ಮಹತ್ವದ ಮಾಹಿತಿ.

KSRTC Buss Rule: ರಾಜ್ಯದಲ್ಲಿ KSRTC ಬಸ್ಸುಗಳು ಸಾಕಷ್ಟಿವೆ. ಸದ್ಯ ರಾಜ್ಯದಲ್ಲಿ KSRTC ಬಸ್ಸುಗಳು ಮಹಿಳೆಯರಿಗೆ ಉಚಿತ ಪ್ರಯಾಣವನ್ನು ನೀಡುತ್ತಿವೆ. ರಾಜ್ಯದಲ್ಲಿ ಉಚಿತ ಪ್ರಯಾಣವನ್ನು ನೀಡಿದ ಸಮಯದಿಂದ KSRTC ನಿಗಮಗಳು ಬಸ್ ಸಂಚಾರದಲ್ಲಿ ಅನೇಕ ನಿಯಮವನ್ನು ಹೊರಡಿಸಿದೆ.

ಸದ್ಯ KRSTC ಬಸ್ಸ ಗಳನ್ನೂ ಒಪ್ಪಂದದ ಮೇರೆಗೆ ಬುಕ್ ಮಾಡಿಕೊಳ್ಳುವವರಿಗೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಇದೀಗ ಹೊಸ ನಿಯಮವನ್ನು ಜಾರಿಗೊಳಿಸಿದೆ.

KSRTC Bus Latest Update
Image Credit: Asianetnews

ಒಪ್ಪಂದದ ಮೇಲೆ KSRTC ಬಸ್ ಬುಕ್ ಮಾಡುವವರಿಗೆ ಬೇಸರದ ಸುದ್ದಿ
KSRTC ಬಸ್ ಗಳನ್ನೂ ಜನರು ಒಪ್ಪಂದದ ಮೇರೆಗೆ ಬುಕ್ ಮಾಡಿಕೊಳ್ಳುತ್ತಾರೆ. ಈ ಮೂಲಕ ತಮ್ಮ ವೈಯಕ್ತಿಕ ಪ್ರಯಾಣಕ್ಕಾಗಿ ಜನರು ಬಸ್ ಅನ್ನು ಬಳಸಿಕೊಳ್ಳುತ್ತಾರೆ. ಶಾಲಾ ಟೂರ್ ಗಳು ಅಥವಾ ಇನ್ನಿತರ ಉದ್ದೇಶಕ್ಕಾಗಿ KSRTC ಬಸ್ ಗಳನ್ನೂ ಒಪ್ಪಂದದ ಮೇರೆಗೆ ಬುಕ್ ಮಾಡಿಒಳ್ಳಲಾಗುತ್ತದೆ. ಇದೀಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಒಪ್ಪಂದದ ಮೇರೆಗೆ KSRTC Bus ಗಳನ್ನೂ ಬುಕ್ ಮಾಡುವವರಿಗೆ ಹೊಸ ಆದೇಶ ಹೊರಡಿಸುವ ಮೂಲಕ ಬೇಸರದ ಸುದ್ದಿ ನೀಡಿದೆ.

KSRTC ಬಸ್ ಒಪ್ಪಂದದ ದರ ಹೆಚ್ಚಳ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ KSRTC ಪ್ರೀಮಿಯಂ ಬಸ್ಸುಗಳ ಸಾಂದರ್ಭಿಕ ಒಪ್ಪಂದದ ದರ ಪರಿಷ್ಕರಣೆ ಮಾಡುವಂತೆ ಆದೇಶ ಹೊರಡಿಸಿದೆ. ಡೀಸೆಲ್ ಮತ್ತು ಸಿಬ್ಬಂದಿ ವೆಚ್ಚಗಳ ಹೆಚ್ಚಳದಿಂದಾಗಿ ಹೆಚ್ಚಿನ ಕಾರ್ಯಾಚರಣೆಯ ವೆಚ್ಚದ ಕಾರಣ ಪ್ರೀಮಿಯಂ ಬಸ್‌ಗಳ ಸಾಂದರ್ಭಿಕ ಒಪ್ಪಂದದ ದರಗಳನ್ನು ಪರಿಷ್ಕರಿಸಲಾಗಿದೆ.

KSRTC Bus Rules
Image Credit: Songngunhatanh

ರಾಜಹಂಸ ಎಕ್ಸಿಕ್ಯೂಟಿವ್, ರಾಜಹಂಸ, ರಾಜಹಂಸ (12 ಮೀಟರ್ ಚಾಸಿಸ್), ಮೈಸೂರು ನಗರ ಸಾರಿಗೆ ಸೆಮಿ ಲೋಫ್ಲೋರ್, ಮಿಡಿ ಬಸ್‌ ಗಳ ಸಾಂದರ್ಭಿಕ ಗುತ್ತಿಗೆ ದರವನ್ನು ಮುಂದುವರಿಸಲಾಗಿದೆ. ಉಲ್ಲೇಖ-9 ರಲ್ಲಿ ಕ್ಯಾಶುಯಲ್ ಒಪ್ಪಂದದ ಮೇಲೆ ಗಂಟೆಯ ಆಧಾರದ ಮೇಲೆ ಪ್ರೀಮಿಯಂ ಬಸ್‌ ಗಳನ್ನು ಒದಗಿಸುವ ದರಗಳನ್ನು ಪರಿಷ್ಕರಿಸಲಾಗಿದೆ ಮತ್ತು ಲಭ್ಯವಿರುವ ಎಲ್ಲಾ ಪ್ರೀಮಿಯಂ ಬಸ್ ವರ್ಗವನ್ನು ಅದರಲ್ಲಿ ಸೇರಿಸಲಾಗಿದೆ. ಪರಿಶ್ರಕ ದರಗಳು November 20 ರಿಂದಲೇ ಜಾರಿಗೆ ಬಂದಿವೆ. ಇನ್ನುಮುಂದೆ KSRTC ಬಸ್ ಒಪ್ಪಂದದ ದರ ಹೆಚ್ಚಾಗಲಿದೆ.

Join Nadunudi News WhatsApp Group

Join Nadunudi News WhatsApp Group