Bus Ticket Price: ಪುರುಷರಿಗೆ ಬೇಸರದ ಸುದ್ದಿ, KSRTC ಬಸ್ಸಿನ ಟಿಕೆಟ್ ದರ ಈ ದಿನದಿಂದ ಏರಿಕೆ

KSRTC ಬಸ್ಸಿನ ಟಿಕೆಟ್ ದರ ಈ ದಿನದಿಂದ ಏರಿಕೆ

KSRTC Bus Ticket Price Hike: ಇದೀಗ ಜನಸಾಮಾನ್ಯರು ದಿನನಿತ್ಯದ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿಹೋಗಿದ್ದಾರೆ. ರಾಜ್ಯದಲ್ಲಿ ಉಚಿತ ಗ್ಯಾರಂಟಿ ಯೋಜನೆಗಳು ಜಾರಿಗೆ ಬಂದ ಸಮಯದಿಂದ ರಾಜ್ಯದಲ್ಲಿ ವಸ್ತುಗಳ ಬೆಲೆ ಒಂದೊಂದೇ ಏರಿಕೆಯಾಗುತ್ತಿದೆ. ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮತ್ತೆ ಪೆಟ್ರೋಲ್- ಡೀಸೆಲ್ ಬೆಲೆಯನ್ನು ಹೆಚ್ಚಿಸಿದೆ.

ಪೆಟ್ರೋಲ್- ಡೀಸೆಲ್ ಬೆಲೆ ಹೆಚ್ಚಳದ ಕುರಿತು ಜನಸಾಮಾನ್ಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಇಂಧನ ಬೆಲೆಯೇರಿಕೆಯ ಬೆನ್ನಲ್ಲೇ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಬಸ್ ಪ್ರಯಾಣ ದರ ಏರಿಕೆಯ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರದ ಮುಂದಿಟ್ಟಿದೆ.

NWKRTC Bus Ticket Price Hike
Image Credit: Thesouthfirst

KSRTC ಬಸ್ಸಿನ ಟಿಕೆಟ್ ದರ ಈ ದಿನದಿಂದ ಏರಿಕೆ
ಸದ್ಯ ಹುಬ್ಬಳ್ಳಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ವಾಹನಗಳಿಗೆ ನಿತ್ಯ ಸರಾಸರಿ 3 ಲಕ್ಷ ಲೀಟರ್ ಡೀಸೆಲ್ ಬಳಕೆ ಮಾಡುತ್ತಿದೆ. ಇದರಿಂದ ನಿತ್ಯ 9 ಲಕ್ಷ ರೂ. ಹೊರೆಯಾಗುತ್ತಿದ್ದು, ತಿಂಗಳಿಗೆ 3 ಕೋಟಿ ರೂ. ಹಣವನ್ನು ಇಂಧನಕ್ಕಾಗಿ ಹೆಚ್ಚುವರಿಯಾಗಿ ಪಾವತಿಸಬೇಕಾದ ಪರಿಸ್ಥಿತಿ ಸಂಸ್ಥೆಗೆ ಎದುರಾಗಿದೆ. ಈ ಭಾರವನ್ನು ಸರಿದೂಗಿಸಲು ಸಂಸ್ಥೆಯು ಬಸ್ ಪ್ರಯಾಣ ದರದಲ್ಲಿ ಏರಿಕೆ ಮಾಡಲು ಚಿಂತನೆ ನಡೆಸಿದೆ.

2020 ರ ಬಳಿಕ ಬಸ್ ಪ್ರಯಾಣ ದರದಲ್ಲಿ ಏರಿಕೆಯಾಗಿಲ್ಲ. ಈ ನಡುವೆ ಸತತವಾಗಿ ಡೀಸೆಲ್ ಬೆಲೆ ಏರಿಕೆಯಾಗಿರುವುದರಿಂದ ಬಸ್ ಪ್ರಯಾಣ ದರದಲ್ಲಿ ಏರಿಕೆ ಮಾಡಲು ಅವಕಾಶ ನೀಡಬೇಕೆಂದು ನಾಲ್ಕು ಸಾರಿಗೆ ನಿಗಮಗಳು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದವು. ಶೀಘ್ರದಲ್ಲೇ ಬಸ್ ಪ್ರಯಾಣ ದರ ಏರಿಕೆ ಮಾಡಲಾಗುದು ಎಂದು ಮಾಹಿತಿ ತಿಳಿದುಬಂದಿದೆ. ಇದೀಗ ಪ್ರಯಾಣ ದರ ಏರಿಕೆ ಮಾಡಿದರೆ ಇದರಿಂದ ಮಹಿಳೆಯರಿಗೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ. ಇದರ ಪರಿಣಾಮ ನೇರವಾಗಿ ಪುರುಷರ ಮೇಲೆ ಬೀಳುತ್ತದೆ.

KSRTC Bus Ticket Price Hike
Image Credit: Starofmysore

Join Nadunudi News WhatsApp Group

Join Nadunudi News WhatsApp Group