KSRTC Ticket Price: ಸರ್ಕಾರೀ ಬಸ್ಸಿನಲ್ಲಿ ಪ್ರಯಾಣ ಮಾಡುವ ಪುರುಷರಿಗೆ ಬೇಸರದ ಸುದ್ದಿ, ಇನ್ನುಮುಂದೆ ಡಬಲ್ ಟಿಕೆಟ್.

ಇನ್ನುಮುಂದೆ KSRTC ಬಸ್ ಗೆ ಡಬಲ್ ಟಿಕೆಟ್

KSRTC Ticket Price Hike: ಸದ್ಯ ರಾಜ್ಯ ಸರ್ಕಾರ ಮಹಿಳೆಯರಿಗಾಗಿ Shakthi ಯೋಜನೆಯನ್ನು ಪ್ರಾರಂಭಿಸಿದೆ. ವಿಧಾನಸಭಾ ಚುನವಣಾ ಬಳಿಕ ಕಾಂಗ್ರೆಸ್ ಸರ್ಕಾರ ರಾಜ್ಯದ ಎಲ್ಲ ಮಹಿಳೆಯರಿಗೆ KSRTC ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶವನ್ನು ನೀಡಿದೆ.

ರಾಜ್ಯದೆಲ್ಲೆಡೆ ಮಹಿಳೆಯರು ಯಾವುದೇ ಹಣವನ್ನು ನೀಡದೆ ಸರ್ಕಾರೀ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣವನ್ನು ಮಾಡಬಹುದಾಗಿದೆ. ಆದರೆ ರಾಜ್ಯ ಸರ್ಕಾರ ಈ ಉಚಿತ ಬಸ್ ಪ್ರಯಾಣ ಪುರುಷರಿಗೆ ಅನ್ವಯಿಸುವುದಿಲ್ಲ. ಮೊದಲೇ ಉಚಿತ ಪ್ರಯಾಣದಿಂದ ವಂಚಿತರಾಗಿರುವ ಪುರುಷರಿಗೆ ಇದೀಗ ಮತ್ತೊಂದು ಬೇಸರದ ಸುದ್ದಿ ಹೊರಬಿದ್ದಿದೆ.

KSRTC Ticket Price Hike
Image Credit: New India Express

ಸರ್ಕಾರೀ ಬಸ್ಸಿನಲ್ಲಿ ಪ್ರಯಾಣ ಮಾಡುವ ಪುರುಷರಿಗೆ ಬೇಸರದ ಸುದ್ದಿ
ಸದ್ಯ ರಾಜ್ಯದಲ್ಲಿ ಉಚಿತ ಪ್ರಯಾಣ ಜಾರಿಗೆ ಬಂದಾಗಿನಿಂದ ಸರ್ಕಾರೀ ಬಸ್ ಗಳಲ್ಲಿ ಮಹಿಳೆಯರು ಪ್ರಯಾಣ ಮಾಡುವ ಸಂಖ್ಯೆ ಹೆಚ್ಚಾಗಿದೆ ಎನ್ನಬಹುದು. ಮಹಿಳೆಯರ ಉಚಿತ ಪ್ರಯಾಣದಿಂದ ಪುರುಷರು ಬಸ್ ನಲ್ಲಿ ಪ್ರಯಾಣ ಮಾಡಲು ಹಿಂದೇಟು ಹಾಕುವಂತಾಗಿದೆ. ಅದಾಗ್ಯೂ, KSRTC ಬಸ್ ಗಳಲ್ಲಿ ಪುರುಷರಿಗೆ ಯಾವುದೇ ಮೀಸಲಾತಿ ಇಲ್ಲ. ಹೀಗಾಗಿ ಪುರುಷರು ಬಸ್ ನಲ್ಲಿ ಪ್ರಯಾಣ ಮಾಡುವಾಗ ಹಣವನ್ನು ಕೊಟ್ಟು ಪ್ರಯಾಣಿಸುವಂತಾಗಿದೆ. ಸದ್ಯ KSRTC ಬಸ್ ನಲ್ಲಿ ಪ್ರೇನಿಸುವ ಪುರುಷರಿಗೆ ಮತ್ತೊಂದು ಬೇಸರದ ಸುದ್ದಿ ಹೊರಬಿದ್ದಿದೆ. ರಾಜ್ಯ ಸಾರಿಗೆ ಇಲಾಖೆ ಬಸ್ ದರ ಹೆಚ್ಚಳಕ್ಕೆ ಮುಂದಾಗಿದೆ ಎನ್ನಲಾಗುತ್ತಿದೆ.

ಇನ್ನುಮುಂದೆ KSRTC ಬಸ್ ಗೆ ಡಬಲ್ ಟಿಕೆಟ್
ಲೋಕಸಭಾ ಚುನಾವಣೆಯ ಬೆನ್ನಲ್ಲೇ ರಾಜ್ಯ ಸಾರಿಗೆ ಸಂಸ್ಥೆ ಪ್ರಯಾಣಿಕರಿಗೆ ಬಿಗ್ ಶಾಕ್ ನೀಡಿದೆ. ಸದ್ಯದಲ್ಲೇ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಪ್ರಯಾಣ ದರ ಶೇ.10ರಿಂದ 15 ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ.

ಡೀಸೆಲ್, ಸಿಬ್ಬಂದಿ ವೇತನ ಹೆಚ್ಚಳ, ಬಿಡಿಭಾಗಗಳ ಬೆಲೆ ಏರಿಕೆ ಸೇರಿದಂತೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ವೆಚ್ಚ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಬಸ್ ಟಿಕೆಟ್ ದರ ಹೆಚ್ಚಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡುವ ಸಾಧ್ಯತೆ ಇದೆ. ಸಾರಿಗೆ ಬಸ್ ದರ ಏರಿಕೆ ಬಗ್ಗೆ ಚರ್ಚೆ ಆರಂಭವಾಗಿದ್ದು, ರಾಜ್ಯ ಸರ್ಕಾರದಿಂದ ಪ್ರಸ್ತಾವನೆ ಬಂದರೆ ಪರಿಶೀಲನೆ ನಡೆಸುವ ಚಿಂತನೆಯೂ ನಡೆದಿದೆ ಎನ್ನಲಾಗುತ್ತಿದೆ.

Join Nadunudi News WhatsApp Group

KSRTC Ticket Price Update
Image Credit: News9live

Join Nadunudi News WhatsApp Group