ಮೂರು ಮದುವೆಯಾದರೂ ನಟಿ ಲಕ್ಷ್ಮಿ ಹೆಣ್ಣು ಮಗುವನ್ನು ದತ್ತು ಪಡೆದಿದ್ದು ಯಾಕೆ ಗೊತ್ತಾ, ಆಕೆ ಎಲ್ಲಿದ್ದಾಳೆ ನೋಡಿ

ಕನ್ನಡ ಚಿತ್ರರಂಗದ ಚಂದನದ ಗೊಂಬೆ ಲಕ್ಷ್ಮಿ ಚತುರ್ಭಾಷಾ ತಾರೆ. ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟಿ ಲಕ್ಷ್ಮಿಯವರು ಕನ್ನಡವಲ್ಲದೇ ತಮಿಳು, ಹಿಂದಿ, ತೆಲುಗು ಮತ್ತು ಮಲಯಾಳಂ ಭಾಷೆಗಳೆಲ್ಲ ಸೇರಿ ಸುಮಾರಿ ನಾಲ್ಕೂನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.ಆಂಧ್ರಪ್ರದೇಶದ ನೆಲ್ಲೂರಿನ ಮೂಲದವರಾದ ಇವರ ತಂದೆ ಯರಗುಡಿಪತಿ ವರದರಾವ್ ನಿರ್ದೇಶಕ ಮತ್ತು ನಟರಾಗಿ ಗುರುತಿಸಿಕೊಂಡಿದ್ದರು. ಇವರ ನಿರ್ದೇಶನದ ಹೆಚ್ಚು ಚಿತ್ರಗಳು ಸಾಮಾಜಿಕ ವಿಷಯಗಳ ಮೇಲೆ ಕೇಂದ್ರಿತವಾಗಿದ್ದವು. ಇವರ ತಾಯಿ ರುಕ್ಮಿಣಿ ಮತ್ತು ಮುತ್ತಜ್ಜಿ ಎನ್.ಜಾನಕಿ ಕೂಡ ತಮಿಳು ಚಿತ್ರರಂಗದಲ್ಲಿ ನಟಿಯರಾಗಿ ಪರಿಚಿತರು.

ಕುಟುಂಬದ ಮೂರನೇ ತಲೆಮಾರಿನ ನಟಿಯಾಗಿ ಚಿತ್ರರಂಗ ಪ್ರವೇಶಿದರು. ಲಕ್ಷ್ಮಿಯವರ ಪುತ್ರಿ ಐಶ್ವರ್ಯ ಕೂಡ 1990 ರಲ್ಲಿ ನಟಿಯಾಗಿ ಚಿತ್ರರಂಗ ಪ್ರವೇಶಿಸಿದರು.1968 ರಲ್ಲಿ ಕೇವಲ 15 ವರ್ಷದವರಿದ್ದಾಗಲೇ ತಮಿಳು ಚಿತ್ರ `ಜೀವನಾಂಶ’ ದಿಂದ ಸಿನರಂಗ ಪ್ರವೇಶಿಸಿದರು. 1975 ರಲ್ಲಿ ಹಿಂದಿ ಭಾಷೆಯಲ್ಲಿ ತೆರೆಗೆ ಬಂದ `ಜೂಲಿ’ ಚಿತ್ರದಿಂದ ತುಂಬಾ ಪ್ರಸಿದ್ಧಿ ಪಡೆದರು. 1968 ರಲ್ಲಿ ಡಾ.ರಾಜ್ ಅಭಿನಯದ `ಗೋವಾದಲ್ಲಿ ಸಿ.ಐ.ಡಿ 999′ ಚಿತ್ರದ ಮೂಲಕ ಚಂದನವನ ಪ್ರವೇಶಿಸಿದರು. ನಂತರ ರಾಜ್ ಜೊತೆ `ನಾ ನಿನ್ನ ಮರೆಯಲಾರೆ’ ಮತ್ತು `ಒಲವು ಗೆಲವು’ ಚಿತ್ರಗಳಲ್ಲಿ ನಟಿಸಿದರು.Telugu Actress Aishwarya Lakshmi Family Images | Actress Lakshmi's Daughter  | Tollywood Updates - YouTube

ಕನ್ನಡ ಚಿತ್ರರಂಗದಲ್ಲಿ ಅನಂತನಾಗ್ ಮತ್ತು ಲಕ್ಷ್ಮೀ ಜೋಡಿ ಆಗಿನ ಕಾಲದ ಟಾಪ್ ಜೋಡಿಯಾಗಿತ್ತು. ತರಾಸು ಕಾದಂಬರಿ ಆಧಾರಿತ ಚಿತ್ರ`ಚಂದನದ ಗೊಂಬೆ’ ಮೂಲಕ ಆರಂಭವಾದ ಈ ಜೋಡಿ ಸುಮಾರು 25 ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ಪ್ರೇಕ್ಷಕರ ಮನ ಸೆಳೆಯಿತು. ಮಧ್ಯಮ ವರ್ಗದ ಸಮಾಜಿಕ ಸ್ಥಿತಿಗಳನ್ನು ಕನ್ನಡ ಚಲನಚಿತ್ರಗಳಲ್ಲಿ ಪರಿಣಾಮಕಾರಿಯಾಗಿ ಬಿಂಬಿಸಿದ ಶ್ರೇಯ ಅನಂತ್-ಲಕ್ಷ್ಮಿ ಜೋಡಿಗೆ ಸಲ್ಲಬೇಕು.

ಸಿನಿಮಾ ರಂಗದಲ್ಲಿ ಬ್ಯುಸಿಯಾಗಿದ್ದಾಗಲೇ ಭಾಸ್ಕರನ್ ಎಂಬುವವರ ಜೊತೆ ಲಕ್ಷ್ಮಿ ಅವರ ಮದುವೆಯನ್ನು ಅವರ ತಂದೆ ತಾಯಿ ತಾಯಿ ಮಾಡಿಬಿಟ್ಟರು. ಈ ದಂಪತಿಗೆ ಮುದ್ದಾದ ಹೆಣ್ಣು ಮಗುವೊಂದು ಜನಿಸುತ್ತದೆ. ಆ ಮಗುವಿಗೆ ಐಶ್ವರ್ಯ ಎಂದು ಹೆಸರು ಇಡುತ್ತಾರೆ.ಆದರೆ ಲಕ್ಷ್ಮೀ ಹಾಗೂ ಭಾಸ್ಕರನ್ ಅವರ ದಾಂಪತ್ಯ ಜೀವನ ಹೆಚ್ಚು ಸಮಯ ಉಳಿಯಲಿಲ್ಲ. ವೈಯುಕ್ತಿಕ ಕಾರಣದಿಂದಾಗಿ ಭಾಸ್ಕರನ್ ಅವರಿಂದ ದೂರವಾಗಿ ಬಿಟ್ಟರು ಲಕ್ಷ್ಮಿ. ಆದಾದ ಬಳಿಕ ನಟಿ ಲಕ್ಷ್ಮಿಯವರು ಮಲಯಾಳಂ ನಟ ಮೋಹನ್ ಅವರನ್ನು ಪ್ರೀತಿಸಿ ಮದುವೆಯಾದರು.Actress Aishwarya Bhaskaran Family Members with Husband, Daughter & Mother  Lakshmi | Allcinegallery - YouTube

ಆದರೆ ಈ ಮದುವೆ ಕೂಡ ಹೆಚ್ಚು ದಿನ ಉಳಿಯುವುದಿಲ್ಲ. ಸಿನಿಮಾರಂಗದಲ್ಲಿ ಯಶಸ್ಸಿನ ಯಶಸ್ಸು ಸಿಕ್ಕ ಲಕ್ಷ್ಮಿ ಪಾಲಿಗೆ ವೈವಾಹಿಕ ಜೀವನದಲ್ಲಿ ಸಾಕಷ್ಟು ಏಳು ಬೀಳುಗಳನ್ನು ನೋಡಬೇಕಾಯಿತು. ಹೀಗಾಗಿ ಸಿನಿಮಾದಲ್ಲಿ ಬ್ಯುಸಿಯಾದರು ಲಕ್ಷ್ಮಿ. ಆದರೆ ಮತ್ತೆ ನಟಿ ಲಕ್ಷ್ಮಿಯವರು ನಟ ಶಿವಚಂದ್ರನ್ ಅವರ ಜೊತೆ ಮದುವೆಯಾಗುವ ನಿರ್ಧಾರ ಮಾಡಿದರು. ಹೌದು ಮೂವರೇ ಮದುವೆಯಾಗಲು ನಿರ್ಧಾರ ಮಾಡಿದ್ದರು. ಆದರೆ ಆ ಸಮಯಕ್ಕೆ ಲಕ್ಷ್ಮಿ ಅವರ ಮಗಳು ಐಶ್ವರ್ಯ ಕೂಡ ಮದುವೆ ವಯಸ್ಸಿಗೆ ಬಂದಿದ್ದಳು.

Join Nadunudi News WhatsApp Group

ಈ ಕಾರಣದಿಂದ ಲಕ್ಷ್ಮಿಯವರ ಮದುವೆಯ ಕುರಿತು ಭಾರಿ ಟೀಕೆ ಕೇಳಿ ಬಂದಿತ್ತು. ಅವರ ಮಗಳು ಸಹ ತಾಯಿಯ ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಮಗಳು ಐಶ್ವರ್ಯರವರು, ಶಿವಚಂದ್ರನ್ ಅವರನ್ನು ನಾನು ಸರ್ ಎಂದು ಕರೆಯುತ್ತಿದ್ದೆ, ಅವರನ್ನು ಅಪ್ಪ ಎಂದು ಹೇಗೆ ಕರೆಯುವುದು ಎಂದಿದ್ದಳು. ಆದರೆ ಲಕ್ಷ್ಮಿಯವರು ಈ ಎಲ್ಲಾ ವಿರೋಧದ ನಡುವೆಯೇ, 1987ರಲ್ಲಿ ನಟಿ ಲಕ್ಷ್ಮಿ ಅವರು ಶಿವಚಂದ್ರನ್ ಅವರನ್ನು ವಿವಾಹ ಮಾಡಿಕೊಂಡರು.Actress Lakshmi & Aishwarya with Family - YouTube

ಮೂರನೇ ಮದುವೆಯಾದ ಲಕ್ಷ್ಮಿ ಮತ್ತು ಶಿವಚಂದ್ರನ್ ದಂಪತಿಗಳು ಖುಷಿಯಾಗಿ ಸಂಸಾರ ಮಾಡುತ್ತಿದ್ದಾರೆ. ಆದರೆ ಮೂರನೇ ಮದುವೆಯಾದ ಲಕ್ಷ್ಮಿಯವರಿಗೆ ಮದುವೆ ವಯಸ್ಸಿಗೆ ಬಂದ ಮಗಳಿದ್ದರೂ, 2000 ದಲ್ಲಿ ಒಂದು ಹೆಣ್ಣು ಮಗುವನ್ನು ದತ್ತು ಪಡೆದುಕೊಂಡರು. ಆಕೆಗೆ ಸಂಯುಕ್ತ ಎಂದು ಹೆಸರಿಟ್ಟು ಮುದ್ದಾಗಿ ಬೆಳೆಸುತ್ತಿದ್ದಾರೆ. ಈ ದಂಪತಿಗಳ ಮಗಳು ಸಂಯುಕ್ತ ಅವರು ಇನ್ನು ಕೆಲ ಸಮಯದಲ್ಲಿ ಸಿನಿಮಾರಂಗಕ್ಕೆ ಬರಲಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ. ಯಾವಾಗ ಸಿನಿ ರಂಗಕ್ಕೆ ಎಂಟ್ರಿ ಕೊಡುತ್ತಾರೆ ಎಂಬುದನ್ನು ಕಾದು ನೋಡಬೇಕು.

Join Nadunudi News WhatsApp Group