ಮಹಿಳೆಯರ ಹೆಸರಿನಲ್ಲಿ ಮನೆ ಅಥವಾ ಆಸ್ತಿ ಇದ್ದರೆ ಬಂಪರ್ ಗುಡ್ ನ್ಯೂಸ್, ಏನೆಲ್ಲಾ ಲಾಭಗಳು ಸಿಗಲಿದೆ ಗೊತ್ತಾ.

ಈಗಿನ ಕಾಲದಲ್ಲಿ ಹೆಚ್ಚಿನ ಮನೆಯಲ್ಲಿ ಆಸ್ತಿಗಳು ಮಹಿಳೆಯ ಹೆಸರಿನಲ್ಲಿ ಇರುತ್ತದೆ ಎಂದು ಹೇಳಬಹುದು. ಹೌದು ಪತಿಯಾದವನು ಹೆಚ್ಚಾಗಿ ಆಸ್ತಿಯನ್ನ ಮಹಿಳೆಯ ಹೆಸರಿನಲ್ಲಿ ಖರೀದಿ ಮಾಡುತ್ತಾನೆ ಎಂದು ಹೇಳಬಹುದು. ಇನ್ನು ಮಹಿಳೆಯ ಹೆಸರಿನಲ್ಲಿ ಆಸ್ತಿಯನ್ನ ಖರೀದಿ ಮಾಡುವುದರಿಂದ ನಮಗೆ ಕೆಲವು ಸರ್ಕಾರೀ ಸವಲತ್ತುಗಳು ಸಿಗುತ್ತದೆ ಅನ್ನುವ ಕಾರಣದಿಂದ ಜನರು ಹೆಚ್ಚಾಗಿ ಮಹಿಳೆಯ ಹೆಸರಿನಲ್ಲಿ ಆಸ್ತಿಗಳನ್ನ ಖರೀದಿ ಮಾಡುತ್ತಾರೆ ಎಂದು ಹೇಳಬಹುದು. ಇನ್ನು ಜೀವನದಲ್ಲಿ ಎಲ್ಲರಿಗೂ ಕೂಡ ತಾವು ಆಸ್ತಿಯನ್ನ ಖರೀದಿ ಮಾಡಬೇಕು, ಮನೆಯನ್ನ ಖರೀದಿ ಮಾಡಬೇಕು ಅನ್ನುವ ಆಸೆ ಇದ್ದೆ ಇರುತ್ತದೆ ಎಂದು ಹೇಳಬಹುದು. ಇನ್ನು ಹಿಂದಿನ ಕಾಲದಲ್ಲಿ ಮನೆಯ ಯಜಮಾನನ ಹೆಸರಿನಲ್ಲಿ ಮನೆ ಮತ್ತು ಆಸ್ತಿಗಳು ಇರುತ್ತಿದ್ದವು, ಆದರೆ ಇತ್ತೀಚಿನ ದಿನಗಳಲ್ಲಿ ಮನೆಯ ಯಜಮಾನಿಯ ಹೆಸರಿನಲ್ಲಿ ಆಸ್ತಿಗಳು ಮತ್ತು ಇತರೆ ವಿವರಗಳು ಇದೆ ಎಂದು ಹೇಳಬಹುದು.

ಇನ್ನು ಇತ್ತೀಚಿನಗಳಲ್ಲಿ ಬಂದಿರುವ ಮಾಹಿತಿಯ ಪ್ರಕಾರ ದೇಶದಲ್ಲಿ ಮನೆ ಖರೀದಿ ಮಾಡುವ ಜನರಲ್ಲಿ ಶೇಕಡಾ 75 ರಷ್ಟು ಮಹಿಳೆಯರೇ ಇದ್ದಾರೆ ಅನ್ನುವುದು ಬೆಳಕಿಗೆ ಬಂದಿದೆ. ಮಹಿಳೆಯ ಹೆಸರಿನಲ್ಲಿ ಮನೆ ಮತ್ತು ಆಸ್ತಿಯನ್ನ ಖರೀದಿ ಮಾಡುವುದರಿಂದ ನಮಗೆ ಕೆಲವು ರಿಯಾಯಿತಿಗಳು ಸಿಗುತ್ತದೆ ಮತ್ತು ಸರ್ಕಾರದ ಕೆಲವು ಸವಲತ್ತುಗಳು ಕೂಡ ಸಿಗುತ್ತದೆ ಎಂದು ಹೇಳಬಹುದು. ಹಾಗಾದರೆ ಮಹಿಳೆಯ ಹೆಸರಿನಲ್ಲಿ ಮನೆ ಮತ್ತು ಆಸ್ತಿಯನ್ನ ಖರೀದಿ ಮಾಡುವುದರಿಂದ ಏನೆಲ್ಲಾ ಲಾಭ ಇದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Land of women

ಹೌದು ಸ್ನೇಹಿತರೆ ಕರೋನ ಮಹಾಮಾರಿಯ ನಡುವೆಯೂ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಬೆಳವಣಿಗೆ ಕಾಣುತ್ತಿದೆ ಎಂದು ಹೇಳಬಹುದು ಮತ್ತು ಮನೆಯನ್ನ ಖರೀದಿ ಮಾಡುವವರ ಸಂಖ್ಯೆ ಕೂಡ ಹೆಚ್ಚಾಗಿದೆ ಎಂದು ಹೇಳಬಹುದು. ಇನ್ನು ಮಹಿಳೆಯ ಹೆಸರಿನಲ್ಲಿ ಮನೆಯನ್ನ ಖರೀದಿ ಮಾಡಿದರೆ ಅನೇಕ ಕ್ಷೇತ್ರದಲ್ಲಿ ಸ್ಟ್ಯಾಂಪ್ ಡ್ಯೂಟಿ ಮೇಲೆ ದೊಡ್ಡ ರಿಯಾಯಿತಿಯನ್ನ ನೀಡಲಾಗುತ್ತಿದೆ. ಇನ್ನು ಉತ್ತರ ಪ್ರದೇಶದಲ್ಲಿ ಪುರುಷರಿಗಿಂತ ಮಹಿಳೆಯರ ಹೆಸರಿನಲ್ಲಿ ಮನೆಯನ್ನ ಖರೀದಿ ಮಾಡಿದರೆ ಸ್ಟ್ಯಾಂಪ್ ಡ್ಯೂಟಿ ಶೇಕಡಾ 2 -3 ರಷ್ಟು ಕಡಿಮೆ ಆಗುತ್ತಿದೆ.

ಇನ್ನು ಮನೆ ಖರೀದಿ ಮಾಡಲು ಬ್ಯಾಂಕ್ ಮತ್ತು ಇತರೆ ಹಣಕಾಸು ಸಂಸ್ಥೆಗಳಲ್ಲಿ ಗೃಹ ಸಾಲವನ್ನ ನೀಡಲಾಗುತ್ತದೆ ಮತ್ತು ಇದನ್ನ ಮಾಸಿಕ ಕಂತುಗಳಲ್ಲಿ ಪಾವತಿ ಮಾಡಬೇಕಾಗುತ್ತದೆ, ಇನ್ನು ಕೆಲವು ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಲ್ಲಿ ಮಹಿಳೆಯರು ಪಡೆಯುವ ಗ್ರಹ ಸಾಲಕ್ಕೆ ವಿಶೇಷವಾದ ಕೊಡುಗೆಯನ್ನ ನೀಡಲಾಗುತ್ತದೆ ಎಂದು ಹೇಳಬಹುದು. ಹೌದು ಮಹಿಳೆಯ ಹೆಸರಿನಲ್ಲಿ ಬ್ಯಾಂಕ್ ಮತ್ತು ಇತರೆ ಹಣಕಾಸು ಸಂಸ್ಥೆಯಲ್ಲಿ ಸಾಲವನ್ನ ಮಾಡಿದರೆ ಬಡ್ಡಿಯಲ್ಲಿ ಶೇಕಡಾ 05 ರಿಂದ 5 ರ ತನಕ ರಿಯಾಯಿತಿಯನ್ನ ನೀಡಲಾಗುತ್ತದೆ. ಇನ್ನು ಮಹಿಳೆಯ ಹೆಸರಿನಲ್ಲಿ ಸಾಲವನ್ನ ಮಾಡಿದರೆ ಆದಾಯ ತೆರಿಗೆಯಲ್ಲಿ ಹೆಚ್ಚಿನ ಲಾಭ ಸಿಗುತ್ತದೆ ಎಂದು ಹೇಳಬಹುದು. ಇನ್ನು ಮನೆ ಕಟ್ಟುವ ಆಸ್ತಿಯೂ ಮಹಿಳೆಯ ಹೆಸರಿನಲ್ಲಿ ಇದ್ದರೆ ಕೆಲವು ಸರ್ಕಾರೀ ಯೋಜನೆಯ ಲಾಭಗಳು ಸಿಗುತ್ತದೆ ಎಂದು ಹೇಳಬಹುದು. ಸ್ನೇಹಿತರೆ ಈ ಮಾಹಿತಿಯನ್ನ ಎಲ್ಲರಿಗೂ ತಲುಪಿಸಿ.

Join Nadunudi News WhatsApp Group

Land of women

Join Nadunudi News WhatsApp Group