ಆಸ್ತಿ ಅಥವಾ ಭೂಮಿ ಖರೀದಿ ಮಾಡುವ ಮುನ್ನ ಈ 5 ದಾಖಲೆ ಸರಿಯಾಗಿ ಇದೆಯಾ ನೋಡಿಕೊಳ್ಳಿ, ಹೊಸ ನಿಯಮ ಜಾರಿಗೆ.

ಈಗಿನ ಕಾಲದಲ್ಲಿ ಒಬ್ಬ ಮನುಷ್ಯನಿಗೆ ಬೆಲೆ ಬರುವುದು ಅಂದರೆ ಆತನ ಬಳಿ ಬೇಕಾದಷ್ಟು ಆಸ್ತಿಗಳು ಇದ್ದಾಗ ಮಾತ್ರ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಈಗಿನ ಕಾಲದ ಜನರು ಆಸ್ತಿಯನ್ನ ಸಂಪಾಧನೆ ಮಾಡಲು ನಾನಾ ರೀತಿಯಲ್ಲಿ ಕಷ್ಟಪಡುತ್ತಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಜನರು ಕೆಲವು ಹಣವನ್ನ ನೀಡಿ ತಮಗೆ ಬೇಕಾದಷ್ಟು ಆಸ್ತಿಯನ್ನ ಖರೀದಿ ಮಾಡುತ್ತಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಕೆಲವು ಬಾರಿ ನಾವು ಆಸ್ತಿಯನ್ನ ಖರಿದಿ ಮಾಡುವ ಸಮಯದಲ್ಲಿ ಮೋಸ ಹೋಗುತ್ತೇವೆ ಎಂದು ಹೇಳಬಹುದು. ಆಸ್ತಿ ಅಥವಾ ಭೂಮಿಯನ್ನ ಖರಿದಿ ಮಾಡುವ ಸಮಯದಲ್ಲಿ ನಾವು ಬಹಳ ಜಾಗೂರತೆಯಿಂದ ಇರುವುದು ಉತ್ತಮ ಎಂದು ಹೇಳಬಹುದು.

ಆಸ್ತಿಯನ್ನ ಖರೀದಿ ಮಾಡುವ ಮುನ್ನ ನಾವು ಕೆಲವು ದಾಖಲೆಗಳು ಸರಿಯಾಗಿ ಇದೆಯೇ ಅನ್ನುವುದು ನೋಡಿಕೊಳ್ಳುವುದು ಉತ್ತಮ ಎಂದು ಹೇಳಬಹುದು. ಹೌದು ಆಸ್ತಿ ಖರೀದಿ ಮಾಡುವ ಮುನ್ನ ನಾವು ಈ ಐದು ದಾಖಲೆಗಳು ಅವಶ್ಯಕಗಿ ಸರಿಯಾಗಿ ಇದೆಯೇ ಅನ್ನುವುದನ್ನ ನೋಡಿಕೊಳ್ಳಬೇಕಾಗುತ್ತದೆ. ಹಾಗಾದರೆ ಆಸ್ತಿ ಖರೀದಿ ಮಾಡುವ ಮುನ್ನ ಯಾವ 5 ದಾಖಲೆಗಳು ಸರಿಯಾಗಿ ಇದೆಯೇ ಅನ್ನುವುದನ್ನ ನೋಡಿಕೊಳ್ಳಬೇಕು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಮಾಹಿತಿಯನ್ನ ಆಸ್ತಿಯನ್ನ ಖರೀದಿ ಮಾಡಲು ಬಯಸುವ ಎಲ್ಲರಿಗೂ ತಲುಪಿಸಿ.

Land purchase info

ಈಗಿನ ಕಾಲದಲ್ಲಿ ಕೆಲವು ದಾಖಲೆಗಳನ್ನ ನಮಗೆ ಬೇಕಾದ ಹಾಗೆ ಬದಲಿಸಬಹುದಾದ ಕಾರಣ ನಾವು ಯಾವುದೇ ವಸ್ತು ಅಥವಾ ಆಸ್ತಿಯನ್ನ ಖರೀದಿ ಮಾಡುವ ಮುನ್ನ ದಾಖಲೆಗಳು ಸರಿಯಾಗಿ ಇದೆಯೇ ಅನ್ನುವುದನ್ನ ನೋಡಿಕೊಳ್ಳಬೇಕಾಗುತ್ತದೆ. ಮೊದಲನೆಯದಾಗಿ ಯಾವುದೇ ಸ್ಥಿರಾಸ್ತಿ ಹಕ್ಕನ್ನು ಯಾವುದೇ ಒಬ್ಬ ವ್ಯಕ್ತಿ ಪಡೆಯಬೇಕಾದರೆ ಅದನ್ನು ಈಗಾಗಲೇ ಆ ಆಸ್ತಿಯ ಮೇಲೆ ಮಾಲೀಕತ್ವದ ಹಕ್ಕನ್ನು ಹೊಂದಿರುವ ವ್ಯಕ್ತಿ ಈ ವ್ಯಕ್ತಿಗೆ ಸೆಲ್ ಡೀಡ್ ಮೂಲಕ ಮಾಲೀಕತ್ವದ ಹಕ್ಕನ್ನು ವರ್ಗಾಯಿಸಬೇಕು. ಆಸ್ತಿ ಮಾರಾಟದ ನಿಜವಾದ ಹಾಗೂ ಕಾನೂನುಬದ್ಧ ದಾಖಲೇ ಎಂದರೆ ಅದು ಸಬ್ ರಿಜಿಸ್ಟರ್ ಆಫೀಸ್ನಲ್ಲಿ ನೋಂದಣಿಯಾದ ಸೆಲ್ ಡೀಡ್ ಆಗಿರುತ್ತದೆ.

ಪ್ರಾಪರ್ಟಿ ಖರೀದಿ ಮಾಡುವವರು ನೇರವಾಗಿ ಸಬ್ ರಿಜಿಸ್ಟರ್ ಆಫೀಸ್ ಗೆ ಹೋಗಿ ಅಲ್ಲಿ ರಜಿಷ್ಟ್ರೇಶನ್ ಮಾಡಿಸಲೆಂದೆ ಹೊರಗೆ ಕುಳಿತಿರುವ ಕೆಲವು ಜನರನ್ನ ಅವಸರದಲ್ಲಿ ಭೇಟಿ ಮಾಡಿ ತಾವು ಖರೀದಿಸುವ ಪ್ರಾಪರ್ಟೀಯ ಸೆಲ್ ಡೀಡ್ ನೋಂದಣಿ ಮಾಡಿಸುವಂತೆ ಕೇಳುತ್ತಾರೆ. ಇದು ನಾವು ಸಾಮಾನ್ಯವಾಗಿ ನೋಡಿರುತ್ತೇವೆ. ಇವರು ಸರ್ಕಾರಿ ಅಧಿಕಾರಿಗಳು ಅಲ್ಲದೆ ಇದ್ದರೂ ಸಹ ಇವರು ನೋಂದಣಿ ಮಾಡಿಸಿಕೊಡಬಲ್ಲರು. ಇವರು ಪ್ರಾಪರ್ಟಿ ಮಾರುವವರು ಮತ್ತು ಕೊಳ್ಳುವವರು ಎರಡೂ ಕಡೆಯವರ ಹೆಸರು, ವಿಳಾಸ, ತಂದೆಯವರ ಹೆಸರು, ವಯಸ್ಸು ಹಾಗೂ ಇದಕ್ಕೆ ಬೇಕಾಗಿರುವ ಬೇರೆ ಇನ್ನಿತರ ದಾಖಲೆಗಳು ಅಥವಾ ಮಾಹಿತಿಯನ್ನು ಕೇಳಿಕೊಂಡು ಜಾಗದ ಬೆಲೆ, ವಿಸ್ತೀರ್ಣ ಇವೆಲ್ಲವನ್ನೂ ಕೇಳಿ ಟೈಪ್ ಮಾಡಿಸಿ ನಂತರ ಒಳಗೆ ತೆಗೆದುಕೊಂಡು ಹೋಗಿ ಸೇಲ್ ಡೀಡ್ ನೋಂದಣಿ ಮಾಡಿಸಿ ಕೊಡುತ್ತಾರೆ.

Join Nadunudi News WhatsApp Group

Land purchase info

ನಂತರ ಯಾವುದೋ ವಕೀಲರು ಒಬ್ಬರು ತಯಾರಿಸಿದ ಸೇಲ್ ಡಿಡಿ ಕ್ರಯ ಪತ್ರವನ್ನು ನೀಡುತ್ತಾರೆ. ಒಂದು ರೆಡಿ ಕ್ರಯ ಪತ್ರ ಇದ್ದು ಅದರಲ್ಲಿ ನಿಮ್ಮ ಎಲ್ಲಾ ವಿವರಗಳನ್ನು ತುಂಬಿ ಕೊಡುತ್ತಾರೆ. ಈ ಕ್ರಯ ಪತ್ರದಲ್ಲಿ ಕೊಂಡುಕೊಂಡವನಿಗೆ ಸಂಬಂಧಿಸಿದ ಯಾವುದೇ ಹಕ್ಕು ಹಾಗೂ ರಕ್ಷಣೆಯೂ ಅನ್ವಯ ಆಗುವುದಿಲ್ಲ. ಅಂದರೆ ಕಾನೂನಿನ ಅನ್ವಯ ಯಾವುದೇ ಷರತ್ತುಗಳು ಆಗಲೀ, ನಿಬಂಧನೆಗಳ ಯಾವುದೇ ಒಡಂಬಡಿಕೆಗಳ ಆಗಲಿ ಇರುವುದೆಲ್ಲ ಇಂತಹ ಸೆಲ್ ಡೀಡ್ ಅನ್ನು ಉಪನೋಂದಣಾಧಿಕಾರಿಗಳ ಅಥವಾ ಸಬ್ ರಿಜಿಸ್ಟರ್ ಆಫೀಸ್ ನಲ್ಲಿ ಅವಸರವಾಗಿ ನೋಂದಣಿ ಮಾಡಿಸುವಾಗ ಅನೇಕ ಅತ್ಯಗತ್ಯ ಅವಶ್ಯಕತೆಗಳ ಬಗ್ಗೆ ಗಮನಹರಿಸಲಾಗುವುದು.

ಇನ್ನು ನಾವು ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಸಾಮಾನ್ಯವಾಗಿ ಒಬ್ಬ ವ್ಯಕ್ತಿ ನಮಗೆ ಗೊತ್ತಿಲ್ಲದೆ ತನ್ನ ಆಸ್ತಿಯನ್ನು ಇನ್ನೊಬ್ಬ ವ್ಯಕ್ತಿಗೆ ನೀಡಿದ್ದರೆ ಖುದ್ದಾಗಿ ನಾವೇ ಸಬ್ ರಿಜಿಸ್ಟರ್ ಆಫೀಸ್ ನಲ್ಲಿ ಋಣಭಾರ ರಹಿತ ಪತ್ರ ಇದಕ್ಕೆ ಅಪ್ಲೈ ಮಾಡಿ ತೆಗೆದುಕೊಂಡರೆ ಇದರ ಮೂಲಕ ನಾವು ಆಸ್ತಿ ಮೊದಲೇ ಮಾರಾಟ ಆಗಿದೆಯೋ ಅಥವಾ ಇಲ್ಲವೋ ಎನ್ನುವುದನ್ನು ತಿಳಿದುಕೊಳ್ಳಬಹುದು ಮತ್ತು ಅಷ್ಟೇ ಅಲ್ಲದೆ ಆಸ್ತಿಯ ಹಿನ್ನೆಲೆಯನ್ನು ಕೂಡ ನಾವು ತಿಳಿದುಕೊಳ್ಳಬಹುದು.

ಇನ್ನು ಕ್ರಯಪತ್ರ ಅಥವಾ ಸೇಲ್ ಡೀಡ್ ತಯಾರಿಸುವ ಸಂದರ್ಭದಲ್ಲಿ ಯಾವ ಪ್ರಾಪರ್ಟಿಯನ್ನು ನೀವು ಖರೀದಿಸಲು ಇಷ್ಟಪಡುತ್ತೀರೋ ಅದರ ಮಾಲಿಕತ್ವದ ಹಕ್ಕುಪತ್ರಗಳನ್ನು ಹಾಗೂ ಅದರ ಮೂಲ ದಾಖಲಾತಿಗಳನ್ನು ಅದಕ್ಕೆ ಸಂಬಂಧಪಟ್ಟ ಇತರೆ ದಾಖಲಾತಿಗಳನ್ನು ಆಸ್ತಿಯ ಕಾನೂನಿನಲ್ಲಿ ಪರಿಣಿತಿ ಪಡೆದಿರುವ ವಕೀಲರಿಂದ ಪರೀಕ್ಷೆಗೆ ಒಳಪಡಿಸಿ ಅವರ ಅಭಿಪ್ರಾಯವನ್ನು ಪಡೆದು ಮುಂದುವರೆಯುವುದು ಯಾವಾಗಲೂ ಕ್ಷೇಮ.

Join Nadunudi News WhatsApp Group