ಮನೆಯಲ್ಲಿ ಗ್ಯಾಸ್ ಬಳಸುವವರಿಗೆ ಬಂದಿದೆ ದೊಡ್ಡ ಶಾಕಿಂಗ್ ಸುದ್ದಿ, ಮತ್ತೆ ಏರಿಕೆಯಾದ ಗ್ಯಾಸ್ ಬೆಲೆ, ಎಷ್ಟಾಗಿದೆ ನೋಡಿ.

ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲಾ ಕುಟುಂಬದವರು ಗ್ಯಾಸ್ ಸಿಲಿಂಡರ್ ಬಳಕೆ ಮಾಡುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಗ್ಯಾಸ್ ಸಿಲಿಂಡರ್ ಬಳಕೆ ಮಾಡದವರನ್ನ ಹುಡುಕುವುದು ಬಹಳ ಕಷ್ಟವೆಂದು ಹೇಳಬಹುದು. ದೇಶದಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಯಾರಿಗೆ ಬಂದಮೇಲೆ ಬಹುತೇಕ ಎಲ್ಲಾ ಕುಟುಂಬದವರು ಗ್ಯಾಸ್ ಸಿಲಿಂಡರ್ ಬಳಕೆ ಮಾಡುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಗ್ಯಾಸ್ ಸಿಲಿಂಡರ್ ಮೇಲೆ ಕೊಡಲಾಗುತ್ತಿದ್ದ ಸಬ್ಸಿಡಿ ಹಣವನ್ನ ಕಳೆದ ವರ್ಷವೇ ರದ್ದು ಮಾಡಿದ್ದು ನಿಮಗೆಲ್ಲ ತಿಳಿದಿರುವ ವಿಚಾರ ಆಗಿದೆ ಮತ್ತು ಸಬಿಸಿಡಿ ಹಣ ರದ್ದು ಮಾಡಿದ್ದು ಬಡ ಜನರ ಬೇಸರಕ್ಕೆ ಕೂಡ ಕಾರಣವಾಗಿತ್ತು ಎಂದು ಹೇಳಬಹುದು.

ಇನ್ನು ಗ್ಯಾಸ್ ಬೆಲೆಯನ್ನ ಪ್ರತಿ ತಿಂಗಳ ಮೊದಲ ವಾರದಲ್ಲಿ ನಿಗದಿ ಮಾಡಲಾಗುತ್ತದೆ ಮತ್ತು ಕಳೆದ ಎರಡು ವಾರದಿಂದ ಗ್ಯಾಸ್ ಬೆಲೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿರುವುದು ನಿಮಗೆಲ್ಲ ತಿಳಿದಿರುವ ವಿಚಾರ ಕೂಡ ಆಗಿದೆ ಎಂದು ಹೇಳಬಹುದು. ಇನ್ನು ವಿಷಯಕ್ಕೆ ಬರುವುದಾದರೆ ಪ್ರತಿ ಭಾರಿಯಂತೆ ಈ ಭಾರಿ ಕೂಡ ಗ್ಯಾಸ್ ಬೆಲೆಯಲ್ಲಿ ಭಾರಿ ಏರಿಕೆ ಆಗಿದ್ದು ಇದು ಜನರ ಶಾಕ್ ಗೆ ಕಾರಣವಾಗಿದೆ ಎಂದು ಹೇಳಬಹುದು. ಹೌದು ಇಂದು ಗ್ಯಾಸ್ ಬೆಲೆಯಲ್ಲಿ ಮತ್ತೆ ಏರಿಕೆ ಆಗಿದ್ದು ಜನರಿಗೆ ಮಾರ್ಚ್ ತಿಂಗಳ ಮೊದಲ ಶಾಕ್ ಬಂದಿದೆ ಎಂದು ಹೇಳಬಹುದು.

march gas rate

ಹಾಗಾದರೆ ಗ್ಯಾಸ್ ಬೆಲೆ ಎಷ್ಟು ಏರಿಕೆ ಆಗಿದೆ ಮತ್ತು ಇಂದಿನ ಗ್ಯಾಸ್ ಬೆಲೆ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇಂದಿನ ಗ್ಯಾಸ್ ಬೆಲೆಯ ಏರಿಕೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ ಪೆಟ್ರೋಲ್‌, ಡಿಸೇಲ್‌ ಸೇರಿದಂತೆ ದಿನ ನಿತ್ಯ ಬಳಕೆಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಛಳ ಕಾಣುತ್ತಿದ್ದು, ಅದರಂತೆ ಎಲ್‌ಪಿಜಿ ಗ್ಯಾಸ್‌ ಸಿಲೆಂಡರ್‌ ಬೆಲೆ ಕೂಡ ಇಂದು ಹೆಚ್ಚಳ ಕಂಡಿದೆ. ಹೌದು ಮಾರ್ಚ್ ತಿಂಗಳ ಗ್ಯಾಸ್ ಬೆಲೆ ಇಂದು ನಿಗಧಿ ಮಾಡಲಾಗಿದ್ದು ಗ್ಯಾಸ್ ಬೆಲೆಯಲ್ಲಿ ಬರೋಬ್ಬರಿ 25 ರೂಪಾಯಿ ಏರಿಕೆ ಆಗಿದೆ.

ಮೂರೂ ದಿನಗಳ ಹಿಂದೆ ಅಂದರೆ ಫೆಬ್ರವರಿ ತಿಂಗಳ ಅಂತ್ಯದಲ್ಲಿ ಕೂಡ ಗ್ಯಾಸ್ ಬೆಲೆಯಲ್ಲಿ 25 ರೂಪಾಯಿ ಏರಿಕೆ ಆಗಿತ್ತು, ಆದರೆ ಈಗ ಮತ್ತೆ ಗ್ಯಾಸ್ ಬೆಲೆಯಲ್ಲಿ 25 ರೂಪಾಯಿ ಏರಿಕೆ ಆಗಿದ್ದು ಕಳೆದ ಒಂದು ವಾರದ ಅವಧಿಯಲ್ಲಿ 50 ರೂಪಾಯಿ ಏರಿಕೆ ಕಂಡಂತೆ ಆಗಿದೆ ಎಂದು ಹೇಳಬಹುದು. ಇನ್ನು ದೇಶದಲ್ಲಿ ವ್ಯಾವಹಾರಿಕವಾಗಿ ಬಳಸುವ ಗ್ಯಾಸ್ ಬೆಲೆಯಲ್ಲಿ ಕೂಡ 96 ರೂಪಾಯಿ ಏರಿಕೆ ಆಗಿದ್ದು ಇಂದು ಕರ್ಮರ್ಷಿಯಲ್ ಗ್ಯಾಸ್ ನ ಬೆಲೆ 1666 ರೂಪಾಯಿ ಆಗಿದೆ ಎಂದು ಹೇಳಬಹುದು. ಇನ್ನು ನಾವು ದಿನನಿತ್ಯ ಗ್ರಹ ಬಳಕೆಗೆ ಬಳಸುವ ಗ್ಯಾಸ್ ನ ಬೆಲೆ 819 ರೂಪಾಯಿ ಆಗಿದೆ. ಮಾಹಿತಿಗಳಿಂದ ಬಂದಿರುವ ಮಾಹಿತಿಯ ಪ್ರಕಾರ ಮುಂದಿನ ದಿನಗಳಲ್ಲಿ ಗ್ಯಾಸ್ ಬೆಲೆ ಇನ್ನಷ್ಟು ಏರಿಕೆ ಆಗುವ ಸಾಧ್ಯತೆ ಜಾಸ್ತಿ ಇದೆ ಎಂದು ಹೇಳಲಾಗುತ್ತಿದೆ.

Join Nadunudi News WhatsApp Group

march gas rate

Join Nadunudi News WhatsApp Group