ಎರಡು ವರ್ಷದ ಬಳಿಕ ಚಿರು ಕುರಿತು ಮೇಘನಾ ಬರೆದ ಭಾವನಾತ್ಮಕ ಸಾಲು ನೋಡಿ, ಕಣ್ಣೀರು ಬರುತ್ತೆ

ಚಿರಂಜೀವಿ ಸರ್ಜಾ, ಸ್ಯಾಂಡಲ್​ವುಡ್​ನ ಯೂತ್​ಸ್ಟಾರ್​, ಚಿರು ಅಗಲಿ ಆಗಲೇ ಎರಡು ವರ್ಷಗಳೇ ಕಳೆದು ಹೋಗಿವೆ. ಆದರೆ ಇಂದಿಗೂ ಚಿರು ಇಲ್ಲಾ ಅನ್ನೊ ಸತ್ಯ ಅನೇಕರಿಗೆ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅದರಲ್ಲೂ ಪ್ರೀತಿಸಿ, ಜೀವನ ಸಂಗಾತಿಯಾಗಿ ಕೈ ಹಿಡಿದ ನಟಿ ಮೇಘನಾ ರಾಜ್​ಗಂತೂ, ಚಿರು ಸರ್ವಸ್ವವೇ ಆಗಿದ್ದರು.

ಚಿರು ಇಲ್ಲದ ಲೋಕದಲ್ಲಿ ಮೇಘನಾ, ಎರಡು ವರ್ಷವನ್ನ ಅವರ ನೆನಪುಗಳಲ್ಲೇ ಕಳೆದು ಬಿಟ್ಟರು. ಈಗ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಹಂಚಿಕೊಂಡಿರೋ ಮೇಘನಾರಾಜ್, ` ನೀವು ಮತ್ತು ನಾನು… ನಿಮ್ಮಂಥವರು ಯಾರೂ ಇರಲಿಲ್ಲ. ನಿಮ್ಮಂತೆ ಯಾರೂ ಇಲ್ಲ, ನೀವೊಬ್ಬರೇ … ಒಬ್ಬರು ಮಾತ್ರ, ಲವ್​ ಯೂ ಎಂದು ಭಾವನಾತ್ಮಕವಾಗಿ ನಟಿ ಮೇಘನಾ ರಾಜ್ ಬರೆದುಕೊಂಡಿದ್ದಾರೆ.Meghana Raj Bursts Into Tears as She Recalls Her Late Husband Chiranjeevi  Sarja's First Valentine's Day Gift to Her

ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ಜೋಡಿ ಹೇಳಿ ಮಾಡಿಸಿದಂತಿದ್ದ ಅಪರೂಪದ ಜೋಡಿ. ಮೊದಲು ಗೆಳೆಯರಾಗಿ, ನಂತರ 10 ವರ್ಷ ಪ್ರೀತಿಯಲ್ಲಿತ್ತು ಈ ಜೋಡಿ. 2018ರಲ್ಲಿ ಇವರು ಮದುವೆಯಾಗುವುದಾಗಿ ನಿರ್ಧರಿಸಿದಾಗಲೇ ಇವರಿಬ್ಬರು ಒಬ್ಬರನ್ನೊಬ್ಬರು ಇಷ್ಟಪಡ್ತಾರೆ ಅಂತ ಸ್ಯಾಂಡಲ್​ವುಡ್​ಗೆ ಗೊತ್ತಾಗಿದ್ದು. 2018ರಲ್ಲಿ ಈ ಜೋಡಿ ಹಿಂದೂ ಹಾಗೂ ಕ್ರಿಶ್ಚಿಯನ್ ಪದ್ಧತಿ ಪ್ರಕಾರ ಮದುವೆಯಾದರು.

ಜೀವನ ಯಾವ ಕ್ಷಣದಲ್ಲಿ ಎಂತೆಂಥ ಆಘಾತ ಕೊಡುತ್ತೆ ಅನ್ನೋದು ನೀರಿಕ್ಷೆಗೂ ಮೀರಿರೋದು. ಮೇಘನಾ ರಾಜ್ ಜೀವನದಲ್ಲೂ ಆಗಿದ್ದು ಅದೇ, ಮೇಘನಾ ರಾಜ್ ಹಾಗೂ ಚಿರು ಮಗುವಿನ ನಿರೀಕ್ಷೆಯಲ್ಲಿ ಇದ್ದರು. ಅದೇ ಸಮಯದಲ್ಲಿ ಚಿರು ಹೃದಯಾಘಾತದಿಂದ ಇಹಲೋಕ ತ್ಯಜಿಸಿದರು. 2020 ರಲ್ಲಿ ಅಕ್ಟೋಬರ್ ನಲ್ಲಿ ಮೇಘನಾ ರಾಜ್ ರಾಯನ್​ಗೆ ಜನ್ಮ ನೀಡಿದರು.Janmashtami 2021:नन्हा कान्हा बने दिवंंगत चिरंजीवी सर्जा के बेटे, जूनियर  चीरू की क्यूटनेस ने जीता फैंस का दिल meghana raj shares an adorable pic of  jr chiru as krishna bollywood ...

ರಾಯನ್ ಮೇಘನಾರಾಜ್ ಜೀವನದಲ್ಲಿ ಹೊಸತನ ತುಂಬಿದರು. ಅಮ್ಮನಿಗೆ ಮಗನೇ ಪ್ರಪಂಚವಾಗಿ ಬಿಟ್ಟ. ಪುತ್ರನ ಆರೈಕೆಯಲ್ಲೇ ಎಲ್ಲ ಕಷ್ಟ ನೋವನ್ನ ಮೇಘನಾ ಮರೆತು ಬಿಟ್ಟರು. ಇಷ್ಟು ದಿನ ಮಗನ ಆರೈಕೆಯಲ್ಲಿ ಬ್ಯುಸಿಯಾಗಿದ್ದ ನಟಿ ಮೇಘನಾ ರಾಜ್ ಈಗ ಮತ್ತೆ ಚಿತ್ರರಂಗಕ್ಕೆ ಕಮ್​ಬ್ಯಾಕ್​ ಮಾಡಲಿದ್ದಾರೆ.

Join Nadunudi News WhatsApp Group

ಇತ್ತೀಚೆಗೆ ಇವರು ನಟಿಸಿದ್ದ `ಸೆಲ್ಫಿ ಮಮ್ಮಿ, ಗೂಗಲ್ ಡ್ಯಾಡಿ’ ಭಾರೀ ಜನಮೆಚ್ಚುಗೆ ಪಡೆದಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಚಿತ್ರಗಳಲ್ಲಿ ಮೇಘನಾ ಕಾಣಿಸಿಕೊಳ್ಳಲಿದ್ದಾರೆ.
ಚಿರಂಜೀವಿ ಸರ್ಜಾ ನಟಿಸಿರುವ ಕೊನೆಯ ಚಿತ್ರ `ರಾಜಮಾರ್ತಾಂಡ’ ಶೀಘ್ರದಲ್ಲೇ ರಿಲೀಸ್ ಆಗಲಿದೆ. ಆ ಚಿತ್ರದ ಮೂಲಕ ಮತ್ತೆ ಚಿರುವನ್ನು ಕಣ್ತುಂಬಿಸಿಕೊಳ್ಳಲು ಅಭಿಮಾನಿಗಳು ಕಾದಿದ್ದಾರೆ.Chiranjeevi Sarja बनने वाले थे पिता, नहीं देख पाएंगे पहले बच्चे का मुँह !

Join Nadunudi News WhatsApp Group