Meghana raj: ಗಂಡ ಚಿರು ಸರ್ಜಾ ಹುಟ್ಟು ಹಬ್ಬಕ್ಕೆ ಭಾವನಾತ್ಮಕವಾಗಿ ವಿಶ್ ಮಾಡಿದ ಮೇಘನಾ ರಾಜ್, ನಾನು ನಗುತಿರಲು ಕಾರಣ ನೀನೇ.

Meghana raj: ಮೇಘನಾ ರಾಜ್ ಕನ್ನಡ ಚಿತ್ರರಂಗ (Kannada Film Industry) ಮತ್ತು ದೇಶದ ಚಿತ್ರರಂಗ ಕಂಡ ಟಾಪ್ ನಟಿಯರಲ್ಲಿ ಒಬ್ಬರು. ಕನ್ನಡ ಮತ್ತು ಮಲಯಾಳಂ (Malayalam) ಚಿತ್ರಗಳಲ್ಲಿ ಹೆಚ್ಚು ನಟನೆಯನ್ನ ಮಾಡಿದ ನಟಿ ಮೇಘನಾ ರಾಜ್ ಅವರು ಸುಮಾರು ಹತ್ತು ವರ್ಷಗಳ ಕಾಲ ಕನ್ನಡ ಟಾಪ್ ನಟ ಚಿರಂಜೀವಿ ಸರ್ಜಾ (Chiranjeevi Sarja) ಅವರನ್ನ ಪ್ರೀತಿಮಾಡಿ ಮದುವೆಯನ್ನ ಮಾಡಿಕೊಂಡರು.

ಮದುವೆಯನ್ನ ಮಾಡಿಕೊಂಡ ಸುಮಾರು ಒಂದೂವರೆ ವರ್ಷಗಳ ಕಾಲ ಬಹಳ ಸುಖಕರವಾಗಿ ಸಂಸಾರವನ್ನ ಮಾಡಿದ ಇವರಿಬ್ಬರ ಸುಂದರ ಸಂಸಾರದ ಮೇಲೆ ಯಾರ ಕೆಟ್ಟ ದೃಷ್ಟಿ ಬಿತ್ತೋ ಗೊತ್ತಿಲ್ಲ ನಟಿ ಮೇಘನಾ ರಾಜ್ ಅವರ ಗಂಡ ಚಿರಂಜೀವಿ ಸರ್ಜಾ ಅವರು ದಿಡೀರ್ ಎಂದು ಹೃದಯಾಘಾತದಿಂದ ಇಹಲೋಕವನ್ನ ತ್ಯಜಿಸಿದರು. Meghana Raj Wish Chiranjeevi Sarja Birthday. ಇಂದು ಚಿರು ಸರ್ಜಾ ಅವರ ಹುಟ್ಟಿದ ದಿನವಾಗಿದ್ದು, ಮುದ್ದಿನ ಗಂಡನಿಗೆ ಮೇಘನಾ ರಾಜ್ ಅವರು ಭಾವನಾತ್ಮಕವಾಗಿ ವಿಶ್ ಮಾಡಿದ್ದಾರೆ.

Meghana Raj wished Chiranjeevi Sarja on his birthday
Image Credit: zoomtventertainment

ಚಿರು ಅಗಲುವ ಸಮಯದಲ್ಲಿ ಮೇಘನಾ ರಾಜ್ ತುಂಬು ಗರ್ಭಿಣಿ
ಹೌದು ಚಿರು ಸರ್ಜಾ ಅವರು ಅಗಲುವ ಸಮಯದಲ್ಲಿ ಮೇಘನಾ ರಾಜ್ ಅವರು ತುಂಬು ಗರ್ಭಿಣಿಯಾಗಿದ್ದರು. ಒಂದು ಕಡೆ ಚಿರು ಅಗಲಿದ ನೋವು ಇನ್ನೊಂದು ತುಂಬು ಗರ್ಭಿಣಿಯಾಗಿದ್ದ ನಟಿ ಅವರು ಕಳೆದ ವರ್ಷ ಗಂಡು ಮಗುವಿಗೆ ಜನ್ಮ ನೀಡಿದರು.

ಮಗುವಿನ ಮುಖ ನೋಡಿಕೊಂಡು ನೋವು ಅರಗಿಸಿಕೊಂಡ ಮೇಘನಾ ರಾಜ್
ಚಿರು ಮತ್ತು ಮೇಘನಾ ರಾಜ್ ಅವರು ಬಹಳ ವರ್ಷಗಳ ಪ್ರೀತಿಮಾಡಿ ಮದುವೆಯನ್ನ ಮಾಡಿಕೊಂಡಿದ್ದರು. ಸಡನ್ ಆಗಿ ಚಿರು ಇಹಲೋಕವನ್ನ ತ್ಯಜಿಸಿದ್ದು ಮೇಘನಾ ರಾಜ್ ಜೀವನದಲ್ಲಿ ಬರಸಿಡಿಲು ಬಡಿದಂತೆ ಆಗಿತ್ತು, ಆದರೆ ಮಗನ ಜನ್ಮ ನೀಡಿ ಮಗನ ಮುಖದಲ್ಲಿ ಚಿರುವನ್ನ ನೋಡಿ ಎಲ್ಲಾ ನೋವನ್ನ ಅರಗಿಸಿಕೊಂಡರು ಮೇಘನಾ ರಾಜ್.

Meghana Raj made an emotional wish for her husband Chiranjeevi Sarja's birthday.
Image Credit: pinkvilla

ಚಿರು ಹುಟ್ಟು ಹಬ್ಬಕ್ಕೆ ಭಾವನಾತ್ಮಕವಾಗಿ ವಿಶ್ ಮಾಡಿದ ಮೇಘನಾ ರಾಜ್
ಚಿರು ಹುಟ್ಟಿದ ಹಬ್ಬಕ್ಕೆ ಭಾವನಾತ್ಮಕವಾಗಿ ಪೋಸ್ಟ್ ಮಾಡಿರುವ ನಟಿ ಮೇಘನಾ ರಾಜ್ ಅವರು, “ಏನೇ ಆಗಲಿ, ಯಾರೇ ಬರಲಿ, ಒಂದಲ್ಲ ಎರಡಲ್ಲ, ನಾನು ನಗಲು ಕಾರಣ ನಿನಗಾಗಿ ಮಾತ್ರ” ಎಂದು ಪೋಸ್ಟ್ ಮಾಡಿದ್ದಾರೆ ನಟಿ ಮೇಘನಾ ರಾಜ್.

Join Nadunudi News WhatsApp Group

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಮೇಘನಾ ರಾಜ್
ಮೇಘನಾ ರಾಜ್ ಅವರು ಸಾಮಾಜಿಕ ಜಾಲತಾಣದಲ್ಲಿ ಬಹಳ ಸಕ್ರಿಯರಾಗಿರುವ ನಟಿ ಆಗಿದ್ದಾರೆ ಮತ್ತು ಸಾಮಾಜಿಕ ಜಾಲತಾಣದಲ್ಲಿ ಹಲವು ವಿಷಯಗಳನ್ನ ಶೇರ್ ಮಾಡುತ್ತಾರೆ. ಅದೇ ರೀತಿಯಲ್ಲಿ ಅಗಲಿದ ಚೀರುವಿಗೆ ಸಾಮಾಜಿಕ ಜಾಲತಾಣದಲ್ಲಿ ವಿಶ್ ಮಾಡಿದ ನಟಿ ಮೇಘನಾ ರಾಜ್ ಅವರು ಭಾವುಕದ ಮಾತುಗಳನ್ನ ಮರೆದುಕೊಂಡಿದ್ದಾರೆ

Meghana Raj emotionally wished Chiranjeevi Sarja on his birthday.
Image Credit: timesnowhindi

ನಾನು ನಗಲು ಕಾರಣ ನಿನನಾಗಿ ಮಾತ್ರ ಎಂದ ಮೇಘನಾ ರಾಜ್
ಪ್ರೀತಿಮಾಡಿ ಚಿರುವನ್ನ ಮದುವೆ ಮಾಡಿಕೊಂಡ ಮೇಘನಾ ರಾಜ್ ಅವರು ದಿಡೀರ್ ಆಗಿ ಚಿರುವನ್ನ ಕಳೆದುಕೊಂಡ ನೋವಿನ ಸಾಗರದಲ್ಲಿ ಮುಳುಗಿದರು. ಚಿರು ಸದಾ ಮೇಘನಾ ರಾಜ್ ಅವರ ಖುಷಿಯನ್ನ ಬಯಸಿದ ವ್ಯಕ್ತಿ. ಮೇಘನಾ ರಾಜ್ ಮುಖದಲ್ಲಿ ಸದಾ ನಗುವನ್ನ ನೋಡಲು ಇಷ್ಟಪಡುತ್ತಿದ್ದ ಚೀರುವಿಗಾಗಿ ಮೇಘನಾ ರಾಜ್ ಅವರು ಸದಾ ನಗು ಮುಖದಲ್ಲಿ ಇರುತ್ತಾರೆ.

ತಾನು ಸಂತೋಷದಿಂದ ಇರಲು ಕಾರಣ ನೀನು ಮಾತ್ರ ಮತ್ತು ನಾನು ನೀನಾಗಿ ಸಂತೋಷದಿಂದ ಇದ್ದೇನೆ ಎಂದು ನಟಿ ಮೇಘನಾ ರಾಜ್ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

 

View this post on Instagram

 

A post shared by Meghana Raj Sarja (@megsraj)

Join Nadunudi News WhatsApp Group