2ನೇ ಮದುವೆ ಆಗುವ ಬಗ್ಗೆ ಮನದಾಳದ ಮಾತು ತಿಳಿಸಿದ ಮೇಘನಾ ರಾಜ್, ಅಂತಿಮ ನಿರ್ಧಾರ ಪ್ರಕಟ

ಸದ್ಯ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಮೇಘನಾ ರಾಜ್ ಉತ್ತಮ ನಟಿಯಾಗಿ ಗುರುತಿಸಿಕೊಂಡಿದ್ದು ಆದರೆ ಮೇಘನಾ ರಾಜ್ ಅವರನ್ನು ಜನರು ಇನ್ನಷ್ಟು ಹೆಚ್ಚು ಇಷ್ಟಪಟ್ಟಿದ್ದು ನಮ್ಮನ್ನ ಅಗಲಿದ ಚಿರಂಜೀವಿ ಸರ್ಜಾ ಅವರ ಪತ್ನಿಯಾಗಿ. ಹೌದು ಸಿನಿಮಾಗಳ ಮೂಲಕ ಜನರಿಗೆ ಬಹಳ ಹತ್ತಿರವಾಗಿದ್ದ ಚಿರು ಇಂದು ನಮ್ಮೊಂದಿಗಿಲ್ಲ. ಆದರೆ ಮಾತ್ರ ಚಿರು ಅವರ ಮಗನನ್ನ ಸಿಂಗಲ್ ಪೇರೆಂಟ್ ಆಗಿ ಸಾಕುತ್ತಿರುವ ಮೇಘನಾ ರಾಜ್ ನಿಜಕ್ಕೂ ಗ್ರೇಟ್ ಎನಿಸುತ್ತಾರೆ.

ಚಿರು ಹೃದಯಾಘಾತದಿಂದ ಅಗಲಿದ ಸಮಯದಲ್ಲಿ ಮೇಘನಾ ರಾಜ್ ರವರು ಗರ್ಭಿಣಿಯಾಗಿದ್ದು ಪತಿಯನ್ನು ಕಳೆದುಕೊಂಡ ನೋವು ಒಂದೆಡೆಯಾದರೆ ಹೊಟ್ಟೆಯಲ್ಲಿರುವ ಮಗುವನ್ನು ಸಾಕಬೇಕು ಎನ್ನುವ ಹಂಬಲವೂ ಅವರಲ್ಲಿ ಇತ್ತು. ಹೌದು ಚಿರುವೇ ಮತ್ತೆ ಹುಟ್ಟಿ ಬಂದಿದ್ದಾನೆ ಎನ್ನುವ ಹಾಗೆ ರಾಯನ್ ರಾಜ್ ಸರ್ಜಾ ಮೇಘನಾ ರಾಜ್ ಅವರ ಮಡಿಲು ತುಂಬಿದ್ದು ಮೇಘನಾ ರಾಜ್ ಅವರ ಮಗನಿಗೆ ಇದೀಗ ಸುಮಾರು ಎರಡು ವರ್ಷ ವಯಸ್ಸು.

ಮಗನನ್ನ ಒಂಟಿಯಾಗಿಯೇ ಬೆಳೆಸುತ್ತಿರುವ ಮೇಘನಾ ರಾಜ್ ರವರು ಕನ್ನಡಿಗರ ಪ್ರೀತಿ-ವಿಶ್ವಾಸವನ್ನ ಕೂಡ ಗಳಿಸಿಕೊಂಡಿದ್ದಾರೆ. ಕನ್ನಡಿಗರ ಮನೆಮಗಳೇ ಆಗಿ ಹೋಗಿರುವ ಮೇಘನಾ ರಾಜ್ ಮತ್ತೊಂದು ಮದುವೆಯಾಗುತ್ತಾರೆ ಎನ್ನುವ ವಿಷಯ ಇದೀಗ ಸ್ಯಾಂಡಲ್ವುಡ್ ತುಂಬಾ ಹರಿದಾಡುತ್ತಿದ್ದು ಗಾಂಧಿನಗರದಲ್ಲಿ ಈ ಸುದ್ದಿ ಹೆಚ್ಚಾಗಿ ಕೇಳಿಬರುತ್ತಿದೆ.

ಮೇಘನಾ ರಾಜ್ ಇನ್ನೊಂದು ಮದುವೆಗೆ ಒಪ್ಪಿದ್ದಾರೆ ಅಂತ ಗಾಸಿಪ್ ಹರಡಿದ್ದು ಆದರೆ ಇದು ಕೇವಲ ವದಂತಿನ? ನಿಜಾನಾ ಅನ್ನುವುದರ ಬಗ್ಗೆ ಮೇಘನಾ ರಾಜ್ ರವರು ಸಂದರ್ಶನ ಒಂದರಲ್ಲಿ ಸ್ಪಷ್ಟನೆ ನೀಡಿದ್ದಾರೆ. ಸಮಾಜ ಹೇಗಿದೆ ಅಂದರೆ ಕೆಲವರು ನೀನು ಇನ್ನೊಂದು ಮದುವೆಯಾಗು ಎಂದು ಸಲಹೆ ನೀಡುತ್ತಾರೆ ಇನ್ನು ಕೆಲವೊಂದಿಷ್ಟು ಜನ ಮಗನ ಜೊತೆಗೆ ಖುಷಿಯಾಗಿರು ಸಾಕು ಎಂದು ಹೇಳುತ್ತಾರೆ.

ನಾನು ಯಾರ ಮಾತನ್ನು ಕೇಳಬೇಕು? ನಾನು ನನ್ನ ಮನಸ್ಸಿನ ಮಾತನ್ನು ಕೇಳುತ್ತೇನೆ. ಹೌದು ನನ್ನ ಮನಸ್ಸು ಇದುವರೆಗೆ ಇನ್ನೊಂದು ಮದುವೆಯಾಗು ಅಂತ ಹೇಳಿಲ್ಲ ನಾನು ಆ ಬಗ್ಗೆ ಯೋಚನೆ ಮಾಡಿಲ್ಲ. ನಾಳೆಯ ಬಗ್ಗೆ ಅಥವಾ ಮುಂದಿನ ದಿನಗಳ ಬಗ್ಗೆ ಯೋಚನೆ ಮಾಡುವುದಿಲ್ಲ ಅದರಲ್ಲಿ ನನಗೆ ನಂಬಿಕೆ ಇಲ್ಲ. ಇವತ್ತಿನ ದಿನ ಈ ಕ್ಷಣವನ್ನು ಅನುಭವಿಸಬೇಕು ಎಂದು ನಂಬಿರುವವಳು ನಾನು.

Join Nadunudi News WhatsApp Group

ಹಾಗಾಗಿ ನನ್ನ ನಾಳೆ ಅಥವಾ ಮುಂದಿನ ಕೆಲವು ದಿನಗಳು ಹೇಗಿರುತ್ತೆ ಅನ್ನೋದು ನನಗೆ ಗೊತ್ತಿಲ್ಲ ನಾನು ಈ ಕ್ಷಣಕ್ಕೆ ಬದುಕುತ್ತಿದ್ದೇನೆ ಅಷ್ಟೇ ಎಂದು ಉತ್ತರ ನೀಡಿದ್ದಾರೆ. ಆದರೆ ಮೇಘನಾ ರಾಜ್ ರವರು ಮಾತನಾಡುವಾಗ ನಾನು ಮದುವೆ ಆಗುವುದೇ ಇಲ್ಲ ಎನ್ನುವಂತಹ ಗಟ್ಟಿ ನಿರ್ಧಾರವನ್ನು ಹೇಳಿಲ್ಲ ಹಾಗಾಗಿ ಮೇಘನಾ ರಾಜ್ ಮುಂದೆ ಮದುವೆಯಾದರೂ ಆಗಬಹುದು ಎನ್ನುವ ಅನುಮಾನ ಹುಟ್ಟಿಕೊಂಡಿದೆ.

ಇದು ಕೆಲವರಿಗೆ ಖುಷಿಯನ್ನು ಕೂಡ ನೀಡಿದು ಸಣ್ಣ ವಯಸ್ಸಿನಲ್ಲಿಯೇ ಗಂಡನನ್ನು ಕಳೆದುಕೊಂಡ ಮೇಘನಾ ರಾಜ್ ಇನ್ನೊಂದು ಮದುವೆಯಾಗಿ ಸುಖವಾಗಿ ಇರಲಿ ಎಂದು ಬಯಸುತ್ತಿದ್ದು ಇನ್ನು ಮೇಘನಾ ರಾಜ್ ಹಾಗೂ ಚಿರು ಪ್ರೀತಿಸಿ ಮದುವೆಯಾಗಿದ್ದರು. ಅತಿಯಾಗಿ ಪ್ರೀತಿಸಿದ ಪತಿಯನ್ನು ಕಳೆದುಕೊಂಡ ಮೇಘನಾ ರಾಜ್ ಎಲ್ಲರ ಸಹಾಯದಿಂದ ಇತ್ತಿಚಿಗೆ ಸ್ವಲ್ಪ ಚೇತರಿಸಿಕೊಳ್ಳುತ್ತಿದ್ದು ಸದ್ಯ ಇದೀಗ ಸಿನಿಮಾ ರಿಯಾಲಿಟಿ ಶೋ ಎಲ್ಲದರಲ್ಲಿಯೂ ಮೇಘನಾ ಕಾಣಿಸಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಮೇಘನಾ ರಾಜ್ ಒಂದು ಸುಭದ್ರ ಜೀವನ ಕಟ್ಟಿಕೊಳ್ಳಬೇಕು ಎನ್ನುವುದೇ ಎಲ್ಲರ ಆಶಯವಾಗಿದೆ.

Join Nadunudi News WhatsApp Group