ಜೀವನದ ಮಹತ್ವದ ನಿರ್ಧಾರ ಪ್ರಕಟಿಸಿದ ಮೇಘನಾ ರಾಜ್, ಕುಟುಂಬದ ಬೆಂಬಲ

ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿ ಮೇಘನಾ ರಾಜ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಅದಾಗಲೇ 10 ವರ್ಷ ಆಗುತ್ತಿದ್ದು ಇಷ್ಟು ವರ್ಷಗಳಲ್ಲಿ ಕನ್ನಡ ಹಾಗೂ ಬೇರೆ ಭಾಷೆಗಳಲ್ಲಿ ಅಭಿನಯಿಸಿ ಯಶಸ್ಸು ಪಡೆದಿದ್ದಾರೆ ಮೇಘನಾ ರಾಜ್ ರವರು. ಹೌದು ಕನ್ನಡದಲ್ಲಿ ಒಂದು ರೀತಿಯ ಯಶಸ್ಸು ಪಡೆದರೆ ಮಲಯಾಳಂ ಚಿತ್ರರಂಗದಲ್ಲಿಯೂ ಕೂಡ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡರು ಮೇಘನಾ ರಾಜ್.

ಇನ್ನು ಇಂದಿಗೂ ಕೂಡ ಮೇಘನಾ ರಾಜ್ ಅವರಿಗೆ ಕೇರಳದಲ್ಲಿ ದೊಡ್ಡ ಅಭಿಮಾನಿ ಬಳಗವಿದ್ದು ನಟಿ ಮೇಘನಾ ರಾಜ್ ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ಕಲಾವಿದ ದಂಪತಿಗಳಾದ ಸುಂದರ್ ರಾಜ್ ಮತ್ತು ಪ್ರಮೀಳಾ ಸುಂದರ್ ದಂಪತಿಯ ಮಗಳು. ಸದ್ಯ ಇದೀಗ ಮೇಘನಾ ಅವರು ಹೊಸ ಉದ್ಯಮ ಒಂದನ್ನು ಪ್ರಾರಂಭ ಮಾಡಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದ್ದು ಅದೇನು ಗೊತ್ತಾ? ಮೇಘನಾ ಅವರ ತಾಯಿ ಪ್ರಮೀಳಾ ಕನ್ನಡ ಮಾತ್ರವಲ್ಲದೆ ತಮಿಳು ಭಾಷೆಯಲ್ಲಿ ಕೂಡ ಒಳ್ಳೆಯ ನಟಿ ಎಂದು ಹೆಸರು ಮಾಡಿದ್ದಾರೆ.

ಹೌದು ಚಿಕ್ಕ ವಯಸ್ಸಿನಿಂದಲೂ ಮೇಘನಾ ರಾಜ್ ರವರು ಕನ್ನಡ ಚಿತ್ರರಂದದ ಕಲಾವಿದರ ಜೊತೆಯಲ್ಲೇ ಆಡಿ ಬೆಳೆದವರಾಗಿದ್ದು ಹಾಗಾಗಿ ಚಿತ್ರರಂಗ ಅವರಿಗೆ ಹೊಸದಾಗಿರಲಿಲ್ಲ. ಹೌದು ಬಾಲನಟಿಯಾಗಿ ಒಂದು ಸಿನಿಮಾದಲ್ಲಿ ಅಭಿನಯಿಸಿದ್ದರು ಮೇಘನಾ. ಸದ್ಯ ಪ್ರಸ್ತುತ ಮೇಘನಾ ಅವರು ಒಂದು ಮಗುವಿನ ತಾಯಿಯಾಗಿ ಸಂತೋಷದ ಜೀವನ ಸಾಗಿಸುತ್ತಿದ್ದು ನಾಯಕಿಯಾಗಿ ಕನ್ನಡ ತಮಿಳು ಮಲಯಾಳಂ ಭಾಷೆಗಳಲ್ಲಿ ನಟಿಸಿ ಯಶಸ್ಸು ಪಡೆದ ಮೇಘನಾ ರಾಜ್ ಕನ್ನಡದ ಹುಡುಗ ಸರ್ಜಾ ಕುಟುಂಬದ ಕುಡಿ ಚಿರಂಜೀವಿ ಅವರನ್ನು 8 ವರ್ಷಗಳ ಕಾಲ ಪ್ರೀತಿಸಿದರು. ಇವರಿಬ್ಬರು ಜೊತೆಯಾಗಿ ಎರಡು ಮೂರು ಸಿನಿಮಾಗಳಲ್ಲಿ ನಟಿಸಿದ್ದು ಚಂದನವನದ ಕ್ಯೂಟ್ ಜೋಡಿ ಎನ್ನಿಸಿಕೊಂಡಿದ್ದರು.

ಇನ್ನು 2018ರಲ್ಲಿ ಈ ಜೋಡಿ ಅದ್ಧೂರಿಯಾಗಿ ಮದುವೆಯಾಗಿದ್ದು ಆದರೆ ಮದುವೆಯಾದ ಕೇವಲ ಎರಡೇ ವರ್ಷಕ್ಕೆ ದಿಢೀರ್ ಎಂದು ಇನ್ನಿಲ್ಲವಾದರು ಚಿರು. ಇದು ಮೇಘನಾ ರಾಜ್ ರವರಿಗೆ ಸಹಿಸಲಾಗದ ನೋವಾಗಿದ್ದು ಆ ಸಮಯದಲ್ಲಿ ಮೇಘನಾ ಅವರಿಗೆ ತಂದೆ ತಾಯಿ ಸರ್ಜಾ ಕುಟುಂಬ ಹೊಟ್ಟೆಯಲ್ಲಿದ್ದ ಮಗು ಹಾಗೂ ಸ್ನೇಹಿತರು ಜೊತೆಯಾಗಿದ್ದು ಚಿರು ಇರುವ ಹಾಗೆಯೇ ನೋಡಿಕೊಂಡರು. ಇನ್ನು ಮೇಘನಾ ಅವರು ಇಂದು ನಗುನಗುತ್ತಾ ಇದ್ದಾರೆ ಎಂದರೆ ಅದಕ್ಕೆ ಕಾರಣ ಈ ವ್ಯಕ್ತಿಗಳು.

ಹೌದು ಇಂದು ಮೇಘನಾ ಅವರು ಮತ್ತೆ ನಟನೆ ಶುರು ಮಾಡಿದ್ದು ಕಲರ್ಸ್ ಕನ್ನಡ ವಾಹಿನಿಯ ಡ್ಯಾನ್ಸಿಂಗ್ ಚಾಂಪಿಯನ್ಸ್ ಶೋ ಮೂಲಕ ಜಡ್ಜ್ ಆಗಿ ಕಿರುತೆರೆಗೆ ಎಂಟ್ರಿ ಕೊಟ್ಟರು. ಸದ್ಯ ರಿಯಾಲಿಟಿ ಶೋ ಜಡ್ಜ್ ಆಗಿ ಮೇಘನಾ ರಾಜ್ ಅವರನ್ನು ಜನರು ತುಂಬಾ ಇಷ್ಟಪಟ್ಟಿದ್ದು ಇತ್ತೀಚೆಗಷ್ಟೇ ಮೇಘನಾ ರಾಜ್ ಅವರು ರಿಯಾಲಿಟಿ ಶೋ ಕೆಲಸ ಸಹ ಮುಗಿಸಿ ಸಿನಿಮಾ ನಟನೆಯಲ್ಲಿ ನಿರತರಾಗಿದ್ದಾರೆ. ಹಾಗೆಯೇ ಹೆಚ್ಚಿನ ಸಮಯವನ್ನು ಮಗ ರಾಯನ್ ಜೊತೆಗೆ ಕಳೆಯುತ್ತಾರೆ. ಅಲ್ಲದೇ ಆಗಾಗ ರಾಯನ್ ಜೊತೆಗಿನ ಫೋಟೋಗಳು ಮತ್ತು ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಾರೆ.

Join Nadunudi News WhatsApp Group

ಇನ್ನು ಕೊನೆಯವರೆಗೂ ನಟನೆ ಬಿಡುವುದಿಲ್ಲ ಎಂದು ಮೇಘನಾ ರಾಜ್ ಅನೇಕ ಬಾರಿ ಹೇಳಿದ್ದರು. ಅದೇ ರೀತಿ ಕಳೆದ ವರ್ಷ ಮೇಘನಾ ರಾಜ್ ಅವರು ಹೊಸ ಸಿನಿಮಾಗಳಿಗೆ ಸೈನ್ ಮಾಡಿದ್ದಾರೆ. ಹೌದು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇರುವ ಮೇಘನಾ ರಾಜ್ ಅವರು ಇದೀಗ ಹೊಸದೊಂದು ಕೆಲಸವನ್ನು ಕೂಡ ಶುರು ಮಾಡಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದ್ದು ಮೇಘನಾ ರಾಜ್ ಅವರು ಹೊಸದಾಗಿ ಫೋಟೋಶೂಟ್ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ . ಈ ಮೂಲಕ ಮತ್ತೆ ಜಾಹೀರಾತುಗಳಲ್ಲಿ ಹಾಗು ಸಿನೆಮಾಗಳಲ್ಲಿ ಸಕ್ರಿಯವಾಗಿ ನಟಿಸುತ್ತೇನೆ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ. ಮಗ ರಾಯಣ್ ಭವಿಷ್ಯಕ್ಕಾಗಿ ಮೇಘನಾ ಇನ್ನು ಕೂಡ ಬಿಡುವಿಲ್ಲದೆ ಕೆಲಸ ಮಾಡುತ್ತಿದ್ದಾರೆ. ನಿಜಕ್ಕೂ ಇದು ಹೆಮ್ಮೆಯ ವಿಷಯ.

Join Nadunudi News WhatsApp Group