ಎರಡನೆಯ ಮದುವೆಯ ವಿಚಾರವಾಗಿ ಚಿರು ಹೇಳಿದ ಮಾತನ್ನ ನೆನಪು ಮಾಡಿಕೊಂಡ ಮೇಘನಾ ರಾಜ್, ಹೃದಯದ ಮಾತು.

ಮೇಘನಾ ರಾಜ್ ಕನ್ನಡ ಚಿತ್ರರಂಗ ಖ್ಯಾತ ನಟಿಯರಲ್ಲಿ ಒಬ್ಬರು. ಕನ್ನಡದ ಹಲವು ಸ್ಟಾರ್ ನಟರ ಜೊತೆ ನಟನೆಯನ್ನ ಮಾಡಿರುವ ನಟಿ ಮೇಘನಾ ರಾಜ್ ಅವರು ಕರ್ನಾಟಕದಲ್ಲಿ ಮಾತ್ರವಲ್ಲದೆ ಬೇರೆಬೇರೆ ರಾಜ್ಯದಲ್ಲಿ ಅಪಾರವಾದ ಅಭಿಮಾನಿ ಬಳಗವನ್ನ ಹೊಂದಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ನಟ ಚಿರಂಜೀವಿ ಸರ್ಜಾ ಅವರನ್ನ ಬಹಳ ವರ್ಷಗಳ ಕಾಲ ಪ್ರೀತಿಮಾಡಿ ಮದುವೆಯನ್ನ ಮಾಡಿಕೊಂಡ ನಟಿ ಮೇಘನಾ ರಾಜ್ ಅವರು ಮದುವೆಯಾದ ಒಂದೂವರೆ ವರ್ಷದ ನಂತರ ಚಿರಂಜೀವಿ ಸರ್ಜಾ ಅವರನ್ನ ಕಳೆದುಕೊಂಡು ದೊಡ್ಡ ಆಘಾತದಲ್ಲಿ ಮುಳುಗಿದರು.

ಇನ್ನು ಚಿರು ಸಾಯುವ ಸಮಯದಲ್ಲಿ ನಟಿ ಮೇಘನಾ ರಾಜ್ ಅವರು ತುಂಬು ಗರ್ಭಿಣಿಯಾಗಿದ್ದು ಸದ್ಯ ರಾಯನ್ ರಾಜ್ ಸರ್ಜಾಗೆ ಜನ್ಮವನ್ನ ನೀಡಿರುವ ನಟಿ ಮೇಘನಾ ರಾಜ್ ಅವರು ಮಗನ ಆರೈಕೆಯ ಜೊತೆ ಮತ್ತೆ ಚಿತ್ರರಂಗಕ್ಕೆ ಬರುವ ತಯಾರಿಯನ್ನ ಮಾಡುತ್ತಿದ್ದಾರೆ. ಸದ್ಯ ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ನಟಿ ಮೇಘನಾ ರಾಜ್ ಅವರ ಎರಡನೆಯ ಮದುವೆಯ ವಿಚಾರ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಹೌದು ನಟಿ ಮೇಘನಾ ರಾಜ್ ಅವರು ನಿರೂಪಕರೊಬ್ಬರು ಎರಡನೆಯ ಮದುವೆ ಬಗ್ಗೆ ಪ್ರಶ್ನೆಯನ್ನ ಕೇಳಿದ ಸಮಯದಲ್ಲಿ ಬಹಳ ಚನ್ನಾಗಿ ಅದಕ್ಕೆ ಉತ್ತರವನ್ನ ಕೊಟ್ಟಿದ್ದು ಸದ್ಯ ಮೇಘನಾ ರಾಜ್ ಅವರ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಮತ್ತು ಮಾಧ್ಯಮಗಳಲ್ಲಿ ವೈರಲ್ ಆಗಿದೆ.

meghana raj second marriage news

ಹೌದು ನಿರೂಪಕರೊಬ್ಬರು ನಟಿ ಮೇಘನಾ ರಾಜ್ ಅವರ ಬಳಿ ಸಂದರ್ಶನದಲ್ಲಿ ನೀವು ಎರಡನೆಯ ಮದುವೆಯನ್ನ ಆಗುತ್ತೀರಾ ಅನ್ನುವ ಪ್ರಶ್ನೆಯನ್ನ ಕೇಳಿದ್ದಾರೆ. ಸದ್ಯ ನಿರೂಪಕರು ಕೇಳಿದ ಪ್ರಶ್ನೆಗೆ ಉತ್ತರವನ್ನ ನೀಡಿದ ನಟಿ ಮೇಘನಾ ರಾಜ್ ಅವರು, “ಕೆಲವರ ಎರಡನೆಯ ಮದುವೆಯನ್ನ ಮಾಡಿಕೊಳ್ಳಿ ಎಂದು ನನಗೆ ಸಲಹೆಯನ್ನ ನೀಡಿದರೆ ಇನ್ನೂ ಕೆಲವರು ಎರಡನೆಯ ಮದುವೆ ಮಾಡಿಕೊಳ್ಳಬೇಡಿ ಎಂದು ಸಲಹೆಯನ್ನ ನೀಡಿದ್ದಾರೆ, ಹಾಗೆ ಇನ್ನೂ ಕೆಲವರು ಮಗನನ್ನ ನೋಡಿಕೊಂಡು ಖುಷಿಯಿಂದ ಇರಿ” ಎಂದು ಹೇಳಿದ್ದಾರೆ ಅನ್ನುವುದರ ಮೂಲಕ ಉತ್ತರವನ್ನ ಕೊಟ್ಟರು.

ನಾನು ಎರಡನೆಯ ಮದುವೆಯ ಬಗ್ಗೆ ಯೋಚನೆ ಮಾಡಿಲ್ಲ ಎಂದು ಹೇಳಿದರೆ ನಟಿ ಮೇಘನಾ ರಾಜ್ ಅವರು ಚಿರು ಹೇಳಿದ ಮಾತನ್ನ ನೆನಪು ಮಾಡಿಕೊಂಡರು. “ಜಗತ್ತು ಏನೇ ಹೇಳಿದರು ನೀನು ನಿನ್ನ ಹೃದಯವನ್ನ ಆಲಿಸು” ಎಂದು ಚಿರು ಅಂದು ಮೇಘನಾ ರಾಜ್ ಅವರಿಗೆ ಹೇಳಿದ್ದರಂತೆ. “ನಾನು ಇನ್ನೂ ನನ್ನ ಹೃದಯದ ಬಳಿ ಎರಡನೆಯ ಮದುವೆ ಪ್ರಶ್ನೆಯನ್ನ ಕೇಳಿಲ್ಲ” ಎಂದು ಹೇಳುವ ಮೂಲಕ ಸಂದರ್ಶನದಲ್ಲಿ ಅಂದು ಪ್ರೀತಿಯ ಚಿರು ಹೇಳಿದ ಮಾತನ್ನ ನೆನಪು ಮಾಡಿಕೊಂಡರು ನಟಿ ಮೇಘನಾ ರಾಜ್. ಸದ್ಯ ಸಾಮಾಜಿಕ ಜಾಲತಾಣದಲ್ಲಿ ನಟಿ ಮೇಘನಾ ರಾಜ್ ಅವರ ಎರಡನೆಯ ಮದುವೆಯ ಬಗ್ಗೆ ಕೆಲವರು ಸುಳ್ಳು ಸುದ್ದಿಯನ್ನ ಕೂಡ ಹಬ್ಬಿಸುತ್ತಿದ್ದು ಅದಕ್ಕೆ ಉತ್ತರವನ್ನ ನೀಡಿದ ನಟಿ ಮೇಘನಾ ರಾಜ್ ನಾನು ಯಾರ ಬಳಿನೂ ಎರಡನೆಯ ಮದುವೆಯ ಸಲಹೆಯನ್ನ ಕೇಳಿಲ್ಲ ಎಂದು ಹೇಳಿದ್ದಾರೆ. ಸದ್ಯ ಮೇಘನಾ ರಾಜ್ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Join Nadunudi News WhatsApp Group

Join Nadunudi News WhatsApp Group