MG Comet EV: ಭಾರತದ ಮಾರುಕಟ್ಟೆಗೆ ಬಂತು ಅತಿ ಸಣ್ಣ MG ಎಲೆಕ್ಟ್ರಿಕ್ ಕಾರ್, ಬೆಲೆ ಕೂಡ ಬಹಳ ಕಡಿಮೆ.

ಮರುಕತೆಗೆ ಬಂತು ಅತೀ ಕಡಿಮೆ ಬೆಲೆಯ MG ಎಲೆಕ್ಟ್ರಿಕ್ ಸಣ್ಣ ಕಾರ್, ಜನರ ಮೆಚ್ಚುಗೆಗೆ ಕಾರಣವಾದ MG

MG Comet EV Electric Car: ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ (Electric Vehicle) ಹಾವಳಿ ಹೆಚ್ಚಾಗಿದೆ. ಇನ್ನು ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಕೂಡ ಹೆಚ್ಚಾಗಿದೆ. ಈಗಾಗಲೇ ಅನೇಕ ಪ್ರತಿಷ್ಠಿತ ಕಂಪನಿಗಳು ಸಾಕಷ್ಟು ರೀತಿಯ ಎಲೆಕ್ಟ್ರಿಕ್ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ.

ಎಲೆಕ್ಟ್ರಿಕ್ ಕಾರುಗಳ ಜೊತೆಗೆ ಎಲೆಕ್ಟ್ರಿಕ್ ಸ್ಕೂಟರ್ ಗಳ ಮೇಲಿನ ಬೇಡಿಕೆ ಕೂಡ ಹೆಚ್ಚಾಗಿದೆ. ಇನ್ನು ಇದೀಗ ಮಾರುಕಟ್ಟೆಗೆ ವಾಹನ ಪ್ರಿಯರನ್ನು ಆಕರ್ಷಿಸಲು ಅತಿ ಸಣ್ಣ MG ಎಲೆಕ್ಟ್ರಿಕ್ (MG Electric) ಕಾರು ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಇನ್ನು ಈ ಹೊಸ ಎಲೆಕ್ಟ್ರಿಕ್ ಕಾರುಗಳ ಬಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

MG Comet EV Electric Car
Image Source: Autocar India

MG ಕಾಮೆಟ್ EV
ಇದೀಗ ಏಪ್ರಿಲ್ ತಿಂಗಳಲ್ಲಿ ಬ್ರಿಟನ್ ಮೂಲದ MG ಮೋಟರ್ಸ್ ತನ್ನ ಕಾಮೆಟ್ ಹೆಸರಿನ ಸಣ್ಣ ಕಾರನ್ನು ಬಿಡುಗಡೆ ಮಾಡಲಿದೆ ಎನ್ನುವ ವರದಿಯಾಗಿದೆ. MG ಕಾಮೆಟ್ EV ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಸಿಗಲಿದೆ. MG ಕಾಮೆಟ್ EV ಕಾರಿನ ದರದ ಬಗ್ಗೆ ಇನ್ನು ಮಾಹಿತಿ ಹೊರಬಂದಿಲ್ಲ. ಆದರೆ 10 ಲಕ್ಷಕ್ಕೂ ಕಡಿಮೆ ಬೆಲೆಯಲ್ಲಿ ಈ ಕಾರ್ ಸಿಗಲಿದೆ ಎನ್ನುವ ವರದಿಯಾಗಿದೆ.

MG Comet EV Electric Car
Image Source: India Today

MG ಕಾಮೆಟ್ EV ಬ್ಯಾಟರಿ ಸಾಮರ್ಥ್ಯ
MG ಕಾಮೆಟ್ EV ಯನ್ನು ಗ್ಲೋಬಲ್ ಸ್ಮಾಲ್ ಎಲೆಕ್ಟ್ರಿಕ್ ವೆಹಿಕಲ್ಸ್ ಪ್ಲೇಟ್ ಫಾರ್ಮ್ ಅಡಿ ತಯಾರಿಸಲಾಗಿದ್ದು, ಚೀನಾ ಮಾರುಕಟ್ಟೆಯಲ್ಲಿ ಈ ಕಾರು ಬಹು ಬೇಡಿಕೆಯನ್ನು ಹೊಂದಿದೆ. ಮೂಲಗಳ ಪ್ರಕಾರ, ಈ ಎಲೆಕ್ಟ್ರಿಕ್ ಕಾರ್ ಅನ್ನು ಎರಡು ಬ್ಯಾಟರಿ ಪಿಕ್ ಆಯ್ಕೆಯಲ್ಲಿ ಖರೀದಿ ಮಾಡಬಹುದು. 20 kWh ಹಾಗೂ 25 kWh ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್. ಕ್ರಮವಾಗಿ 150 km ಹಾಗು 200 km ರೇಂಜ್ ನೀಡಬಹುದು.

MG Comet EV Electric Car
Image Source: Autocar India

MG ಕಾಮೆಟ್ EV ವಿಶೇಷತೆ
ಈ ಎಲೆಕ್ಟ್ರಿಕ್ ಕಾರಿನ ಕಾರ್ಯಕ್ಷಮತೆ ಹಾಗೂ ಚಾರ್ಜಿಂಗ್ ಸ್ಪೀಡ್ ಬಗ್ಗೆ ಯಾವುದೇ ಮಾಹಿತಿ ಲಭಿಸಿಲ್ಲ. ಆಟೋಮೆಟಿಕ್ ಎಸಿ, ಕೀಲೆಸ್ ಎಂಟ್ರಿ, ಸ್ಟೀರಿಂಗ್ ಮೌಟೆಡ್ ಕಂಟ್ರೋಲ್ ಹಾಗು LED ಹೆಡ್ ಲ್ಯಾಂಪ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಈ ಕಾಮೆಟ್ EV ಕಾರ್ ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ.

Join Nadunudi News WhatsApp Group

MG Comet EV Electric Car
Image Source: CarTrade

Join Nadunudi News WhatsApp Group