MG CT Electric Car: ಮಾರುಕಟ್ಟೆಗೆ ಬರಲಿದೆ MG ಕಂಪನಿಯ ಅಗ್ಗದ ಬೆಲೆಯ ಎಲೆಕ್ಟ್ರಿಕ್ ಕಾರ್, ಉತ್ತಮ ಮೈಲೇಜ್ ನೀಡುವ ಕಾರ್.

MG CT Electric Car: ದೇಶದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿರುವುದರ ಕಾರಣ ಜನರು ಹೆಚ್ಚು ಎಲೆಕ್ಟ್ರಿಕ್ (Electric) ವಾಹನಗಳನ್ನ ಖರೀದಿ ಮಾಡುತ್ತಿದ್ದಾರೆ. ಕಾರುಗಳನ್ನ ಖರೀದಿ ಮಾಡುವ ಮುನ್ನ ಯಾವ ಕಾರ್ ಹೆಚ್ಚು ಮೈಲೇಜ್ (Mileage) ನೀಡುತ್ತದೆ ಮತ್ತು ಕಾರ್ ಬೆಲೆ (Car Price) ಎಷ್ಟು ಅನ್ನುವುದರ ಬಗ್ಗೆ ಗ್ರಾಹಕರು ಗಮನ ಕೊಡುತ್ತಾರೆ.

ಸದ್ಯ ದೇಶದಲ್ಲಿ ಅನೇಕ ಕಾರ್ ಉತ್ಪಾದಕ ಕಂಪನಿಗಳು ಹಲವು ಬಗೆಯ ಕಾರುಗಳನ್ನ ಮಾರುಕಟ್ಟೆಗೆ ಪರಿಚಯ ಮಾಡಿದ್ದು ಒಂದರ ಮೇಲೊಂದರಂತೆ ಬಗೆ ಬಗೆಯ ಎಲೆಕ್ಟ್ರಿಕ್ ಕರುಗಳು (Electric Cars) ಮಾರುಕಟ್ಟೆಯಲ್ಲಿ ಮಾರಾಟ ಆಗುತ್ತಿದೆ.

The two-seater MG City car is all set to hit the market
Image Credit: indiatimes

ಮಾರುಕಟ್ಟೆಗೆ ಬಂತು ಇನ್ನೊಂದು ಎಲೆಕ್ಟ್ರಿಕ್ ಕಾರ್
ಮಾರುಕಟ್ಟೆಯಲ್ಲಿ ಹಲವು ಎಲೆಕ್ಟ್ರಿಕ್ ಕಾರುಗಳು ಮಾರಾಟ ಆಗುತ್ತಿರುವ ಈ ಸಮಯದಲ್ಲಿ ಇನ್ನೊಂದು ಎಲೆಕ್ಟ್ರಿಕ್ ಕಾರ್ ಭಾರತದ ಮಾರುಕಟ್ಟೆಗೆ ಬಂದಿದ್ದು ಜನರು ಈ ಕಾರಿಗೆ ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ. ಇತರೆ ಎಲೆಕ್ಟ್ರಿಕ್ ಕಾರುಗಳಿಗೆ ಪೈಪೋಟಿ ನೀಡಲು ಈಗ MG ಸಿಟಿ ಎಲೆಕ್ಟ್ರಿಕ್ ಕಾರ್ ಮಾರುಕಟ್ಟೆಗೆ ಬರಲು ರೆಡಿ ಆಗಿದೆ.

ಮಾರುಕಟ್ಟೆಗೆ ಬರಲಿದೆ ಅಗ್ಗದ ಬೆಲೆಯ MG CT EV
ಮಾರುಕಟ್ಟೆಯಲ್ಲಿ ಟಾಟಾ, ಹುಂಡೈ, ಮಾರುತಿ ಮತ್ತು ಮಹಿಂದ್ರಾ ಕಂಪನಿಗಳು ಈಗಾಗಲೇ ಹಲವು ಬಗೆ EV ಕಾರುಗಳನ್ನ ಮಾರುಕಟ್ಟೆಗೆ ಪರಿಚಯ ಮಾಡಿದೆ. ಸದ್ಯ ಈ ಎಲ್ಲಾ ಕಾರುಗಳಿಗೆ ಪೈಪೋಟಿ ನೀಡಲು MG ಕಾರ್ಸ್ ಈಗ MG ಸಿಟಿ ಕಾರನ್ನ ಮಾರುಕಟ್ಟೆಗೆ ತರಲು ಸಿದ್ಧತೆಯನ್ನ ಮಾಡಿಕೊಂಡಿದೆ.

MG Electric will enter the market to compete with Tata Company
Image Credit: economictimes.indiatimes

ಅಗ್ಗದ ಬೆಲೆಯಲ್ಲಿ ಸಿಗಲಿದೆ MG ಸಿಟಿ
ಇತರೆ ಎಲೆಕ್ಟ್ರಿಕ್ ಕಾರುಗಳಿಗೆ ಹೋಲಿಕೆ ಮಾಡಿದರೆ ಈ MG ಸಿಟಿ ಎಲೆಕ್ಟ್ರಿಕ್ ಕಾರು ಗ್ರಾಹಕರಿಗೆ ಬಹಳ ಅಗ್ಗದ ಬೆಲೆಯಲ್ಲಿ ಸಿಗಲಿದೆ ಎಂದು ಕಂಪನಿ ಹೇಳಿದೆ, ಆದರೆ ಅದರ ಬೆಲೆಯನ್ನ ಇನ್ನೂ ಕೂಡ ಪ್ರಸ್ತಾವನೆ ಮಾಡಲಾಗಿಲ್ಲ.

Join Nadunudi News WhatsApp Group

2023 ರಲ್ಲಿ ಜನರಿಗೆ ಸಿಗಲಿದೆ MG ಸಿಟಿ
ಸದ್ಯ ಕಾರಿನ ಲುಕ್ ಬಿಡುಗಡೆ ಮಾಡಲಾಗಿದೆ ಮತ್ತು 2023 ರಲ್ಲಿ ಜನರಿಗೆ ಖರೀದಿ ಮಾಡಲು ಈ ಕಾರ್ ಸಿಗಲಿದೆ. ಟಾಟಾ ಟಿಯಾಗೋ ಕಾರಿಗೆ ಪೈಪೋಟಿ ನೀಡಲು ಈ ಕಾರನ್ನ ಸಿದ್ದಪಡಿಸಲಾಗಿದೆ ಮತ್ತು ಈ ಕಾರಿನಲ್ಲಿ ಎರಡು ಆಸನಗಳು ಇರಲಿದೆ.

ಉತ್ತಮ ಬೆಲೆಯ ಜೊತೆಗೆ ಉತ್ತಮವಾದ ಬ್ಯಾಟರಿ
ಕಡಿಮೆ ಬೆಲೆಗೆ ಕಾರನ್ನ ಮಾರುಕಟ್ಟೆಗೆ ಪರಿಚಯ ಮಾಡುವ ಗುರಿಯನ್ನ ಹೊಂದಿರುವ MG ಕಾರಿನ ಬ್ಯಾಟರಿ ಸಾಮರ್ಥ್ಯವನ್ನ ಕೂಡ ಉತ್ತಮಗೊಳಿಸಲು ತೀರ್ಮಾನವನ್ನ ಮಾಡಿದೆ ಮತ್ತು ಈ ಕಾರಿನಲ್ಲಿ ಉತ್ತಮವಾದ ಬ್ಯಾಟರಿ ಅಳವಡಿಸಲು MG ಮುಂದಾಗಿದ್ದು ಈ ಕಾರ್ ಉತ್ತಮವಾದ ಮೈಲೇಜ್ ನೀಡಲಿದೆ ಮತ್ತು ಈ ಕಾರಿನಲ್ಲಿ 20kWh ಮತ್ತು 25kWh ಬ್ಯಾಟರಿ ಇರಲಿದೆ ಎಂದು ಹೇಳಲಾಗುತ್ತಿದೆ.

Low-cost MG City electric car is coming to the market
Image Credit: businessinsider

ಕಾರಿನಲ್ಲಿ ಇದೆ ಹಲವು ವಿಶೇಷತೆ
ಈ ಎಂಜಿ ಸಿಟಿ ಕಾರಿನಲ್ಲಿ ದೊಡ್ಡ ಟಚ್ ಸ್ಕ್ರೀನ್, ಡಿಜಿಟಲ್ ಇನ್ಸ್ಟ್ರುಮೆಂಟ್, ವೈರ್ ಲೆಸ್ ಸಂಪರ್ಕ ಸೇರಿದಂತೆ ಹಲವು ವಿಶೇಷತೆಗಳು ಈ ಕಾರಿನಲ್ಲಿ ಇರಲಿದೆ. ಅದರ ಜೊತೆಗೆ ಉತ್ತಮವಾದ ಹೆಡ್ ಲೈಟ್, ವೀಲ್ ಬೇಸ್ ಈ ಕಾರ್ ಹೊಂದಿರಲಿದೆ.

ಕಾರಿನ ಬಹಳ ಚಿಕ್ಕ
ಈ ಎಂಜಿ ಸಿಟಿ ಕಾರಿನ ಗಾತ್ರ ಬಹಳ ಕಡಿಮೆಯಾದ ಕಾರಣ ಟ್ರಾಫಿಕ್ ಮತ್ತು ಪಾರ್ಕ್ ಮಾಡಲು ಸಹಕಾರಿ ಆಗಲಿದೆ ಮತ್ತು ಕಾರಿನ ಗಾತ್ರ ಸಣ್ಣದಾದ ಕಾರಣ ಕಾರು ಕಲಿಯುವವರಿಗೆ ಕೂಡ ಈ ಕಾರ್ ಉತ್ತಮವಾದ ಕಾರ್ ಆಗಿದೆ.

Join Nadunudi News WhatsApp Group