ಕೇವಲ 4 ತಾಸು ಬೆಂಗಳೂರಲ್ಲಿದ್ದ ಮೋದಿಗೆ ಸರ್ಕಾರ ಖರ್ಚು ಮಾಡಿದ ಹಣ ಎಷ್ಟು ಗೊತ್ತಾ, ಇಷ್ಟೊಂದಾ ನೋಡಿ

ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಆಗಮಿಸಿದ್ದು, ಇಂದು ಯೋಗಾಭ್ಯಾಸದ ಬಳಿಕ ಮೈಸೂರು ರಾಜಮನೆತನದ ಜೊತೆ ಪ್ರಧಾನಿ ಮೋದಿ ಅರಮನೆಯಲ್ಲಿ ಉಪಹಾರ ಸೇವನೆ ಮಾಡಿ ಮೈಸೂರಿನಿಂದ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.ಮೈಸೂರಿನ ರಾಜವಶಂಸ್ಥರ ಜೊತೆಗೆ ಉಪಾಹಾರ ಸೇವನೆಗೆ ಪ್ರಧಾನಿ ಮೋದಿಗೆ ಆಹ್ವಾನ ನೀಡಗಿತ್ತು. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಉಪಾಹಾರ ಸೇವನೆ ಮಾಡಿ ಮೈಸೂರಿನ ಮಂಡಕಳ್ಳಿ ಏರ್ ಪೋರ್ಟ್ ಗೆ ತೆರಳಿ ಅಲ್ಲಿಂದ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.

ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರು ಅರಮನೆ ಮೈದಾನದಲ್ಲಿ 8 ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗಿಯಾಗಿ ಯೋಗಾಭ್ಯಾಸ ಮಾಡಿದ್ದಾರೆ. ಬಳಿಕ ಮೈಸೂರಿನ ವಸ್ತು ಸಂಗ್ರಹಾಲ ಕೇಂದ್ರ ಉದ್ಘಾಟನೆ ಮಾಡಿದ್ದಾರೆ. ಬಳಿಕ ಅರಮನೆಯಲ್ಲಿ ಉಪಾಹಾರ ಸೇವನೆ ಮಾಡಿ ಏರ್ ಪೋರ್ಟ್ ಗೆ ತೆರಳಿ ವಿಶೇಷ ವಿಮಾನದ ಮೂಲಕ ದೆಹಲಿಗೆ ಪ್ರಯಾಣ ಬೆಳಸಿದ್ದಾರೆ.

WATCH: PM Modi stops car on Bengaluru street to greet cheering crowd waving  BJP flags, raising 'Modi, Modi' slogans

ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು 20 ಗಂಟೆಗಳ ಕರ್ನಾಟಕ ಪ್ರವಾಸ ಅಂತ್ಯವಾಗಿದೆ.ರಾಜ್ಯ ರಾಜಧಾನಿ ಬೆಂಗಳೂರಿಗೆ ಎರಡು ದಿನಗಳ ಕಾಲ ಪ್ರಧಾನಿ ಮೋದಿ ಆಗಮಿಸಿ ತೆರಳುತ್ತಿದ್ದ ಬೆನ್ನಲ್ಲೇ ಕಾರ್ಯಕ್ರಮಕ್ಕೆ ಎಷ್ಟು ಖರ್ಚು ಮಾಡಲಾಗಿದೆ ಎಂಬ ಬಗ್ಗೆ ಲೆಕ್ಕಾಚಾರ ಮಾಡುವುದು ಸಹಜ. ಈ ಕುರಿತ ಮಾಹಿತಿ ಇಲ್ಲಿದೆ ನೋಡಿ .ಕೇವಲ 4 ಗಂಟೆ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸುವುದಕ್ಕೆ ಈಗಾಗಲೇ ಭರ್ಜರಿ ಸಿದ್ದತೆ ನಡೆಸಲಾಗಿತ್ತು. ಸಿಟಿಯ ಪ್ರತಿ ರಸ್ತೆ ರಸ್ತೆಗಳನ್ನು ರಿಪೇರಿ ಮಾಡಿ ಲಕಲಕನೆ ಹೊಳೆಯುವಂತೆ ಮಾಡಲಾಗಿದೆ. ಪ್ರಧಾನಿಗಾಗಿ ಬಿಬಿಎಂಪಿ ಕೋಟಿ ಕೋಟಿ ಖರ್ಚು ಮಾಡಿದ್ದಾರೆ.

ಈ ಬಗ್ಗೆ ಖುದ್ದಾಗಿ ಬಿಬಿಎಂಪಿ ಆಯುಕ್ತರ ತುಷಾರ್‌ ಗಿರಿನಾಥ್‌ ಮಾತನಾಡಿ ಪ್ರಧಾನಿ ರಾಜ್ಯಕ್ಕೆ ಬರುತ್ತಿರೋದೆ ನಮಗೆಲ್ಲ ಸಂತೋಷದ ವಿಚಾರವಾಗಿದೆ ಆ ನಿಟ್ಟಿನಲ್ಲಿ ತುರ್ತು ಸಂದರ್ಭದಲ್ಲಿ ಅನುದಾನ ಬಳಸಬಹುದಾದ ʻವಿವೇಚನ ಅನುದಾನದಡಿʼ ಫುಟ್‌ಫಾಥ್‌ ರಸ್ತೆ, ಕಾಮಗಾರಿ, ಡಾಂಬರೀಕರಣ, ಚರಂಡಿ, ಊಟ, ವಸತಿ ಕಲ್ಪಿಸಲು ನಿಟ್ಟಿನಲ್ಲಿ ಬರೊಬ್ಬರಿ 14 ಕೋಟಿ ಖರ್ಚು ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.From thunderous roadshow to Ganga Aarti, an insight into PM Modi's  power-packed Varanasi blitz | Lok News – India TV

Join Nadunudi News WhatsApp Group

ಇನ್ನೂ ಮೈಸೂರಿನಲ್ಲೂ ರಸ್ತೆಗಳಿಗೆ ಹೊಸ ರೂಪವನ್ನೆ ನೀಡಲಾಗಿತ್ತು. ವಸತಿ, ಯೋಗ ಕಾರ್ಯಕ್ರಮಗಳ ಸಿದ್ಧತೆ ಉಪಹಾರ ಸೇರಿದಂತೆ ಬರೊಬ್ಬರಿ 20 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Join Nadunudi News WhatsApp Group