ಆಟೋ ಡ್ರೈವರ್ ಮಗನಾಗಿ ಹುಟ್ಟಿದ ಮಹಮದ್ ಸಿರಾಜ್ ನ ಈಗಿನ ಸಂಬಳ ಎಷ್ಟು ಗೊತ್ತಾ, ನಿಜಕ್ಕೂ ಗ್ರೇಟ್ ನೋಡಿ.

ಐಪಿಎಲ್ ಯಾರು ತಾನೇ ನೋಡುವುದಿಲ್ಲ ಹೇಳಿ. ಹೌದು ದೇಶದಲ್ಲಿ ಮಾತ್ರವಲ್ಲದೆ ಇಡೀ ವಿಶ್ವದಲ್ಲಿ ಐಪಿಎಲ್ ವೀಕ್ಷಣೆ ಮಾಡುವವರ ಸಮಸ್ಯೆ ಬಹಳ ಜಾಸ್ತಿ ಇದೆ ಎಂದು ಹೇಳಬಹುದು. ಐಪಿಎಲ್ ಅನ್ನುವುದು ಇಪ್ಪತ್ತು ಓವರ್ ಪಂದ್ಯವಾದ ಕಾರಣ ಜನರು ಹೆಚ್ಚಿನ ಪ್ರಮಾಣದಲ್ಲಿ ಐಪಿಎಲ್ ನೋಡುತ್ತಾರೆ ಎಂದು ಹೇಳಬಹುದು. ಇನ್ನು ಯುವ ಪ್ರತಿಭೆಗಳಿಗೆ ಉತ್ತಮವಾದ ವೇದಿಕೆ ಅಂದರೆ ಅದೂ ಐಪಿಎಲ್ ಎಂದು ಹೇಳಬಹುದು. ಅದೆಷ್ಟೋ ಪ್ರತಿಭೆಗಳು ತಮ್ಮ ಅಮೋಘವಾದ ಆಟದ ಮೂಲಕ ಭಾರತೀಯ ತಂಡದಲ್ಲಿ ಸ್ಥಾನವನ್ನ ಗಿಟ್ಟಿಸಿಕೊಂಡಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ದೇಶದಲ್ಲಿ ಅತೀ ಹೆಚ್ಚಿನ ಅಭಿಮಾನಿಗಳನ್ನ ಹೊಂದಿರುವ ತಂಡ ಅಂದರೆ ಅದೂ ನಮ್ಮ ಬೆಂಗಳೂರು ತಂಡವೆಂದು ಹೇಳಿದರೆ ತಪ್ಪಾಗಲ್ಲ.

ಬರಿ ಅಭಿಮಾನಿಗಳು ಮಾತ್ರವಲ್ಲದೆ ಅತೀ ಹೆಚ್ಚಿನ ರೆಕಾರ್ಡ್ ಇರುವುದು ಕೂಡ ಬೆಂಗಳೂರು ತಂಡದ್ದೇ ಅನ್ನುವುದು ನಮ್ಮ ಹೆಮ್ಮೆಯ ವಿಚಾರ ಆಗಿದೆ ಎಂದು ಹೇಳಬಹುದು. ಇನ್ನು ಬೆಂಗಳೂರು ತಂಡದಲ್ಲಿ ಈ ಐಪಿಎಲ್ ನಲ್ಲಿ ಅಮೋಘವಾದ ಆಟವನ್ನ ಆಡುತ್ತಿರುವ ಪ್ರತಿಭೆ ಅಂದರೆ ಅದೂ ಮಹಮದ್ ಸಿರಾಜ್ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಮಹಮದ್ ಸಿರಾಜ್ ಅವರು ಬೆಂಗಳೂರು ತಂಡದಲ್ಲಿ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದು ತಂಡದ ಗೆಲುವಿನಲ್ಲಿ ಪ್ರಮುಖವಾದ ಪಾತ್ರವನ್ನ ವಹಿಸಿಕೊಂಡಿದ್ದಾರೆ ಎಂದು ಹೇಳಬಹುದು. ತೀರಾ ಬಡ ಕುಟುಂಬದ ಹುಟ್ಟಿದ ಪ್ರತಿಭೆ ಅಂದರೆ ಅದೂ ಮಹಮದ್ ಸಿರಾಜ್ ಮತ್ತು ಮಹಮದ್ ಸಿರಾಜ್ ಅವರ ತಂದೆ ಒಬ್ಬ ಆಟೋ ಡ್ರೈವರ್ ಆಗಿದ್ದಾರೆ.

Mohammad Siraj

ತಮ್ಮ ಕಠಿಣವಾದ ಪರಿಶ್ರಮದ ಮೂಲಕ ಈಗ ಬಹಳ ಉನ್ನತವಾದ ಸ್ಥಾನದಲ್ಲಿ ಮಹಮದ್ ಸಿರಾಜ್ ಅವರು ಇದ್ದಾರೆ ಎಂದು ಹೇಳಬಹುದು. ಇನ್ನು ವಿಷಯಕ್ಕೆ ಬರುವುದಾದರೆ ಬೆಂಗಳೂರು ತಂಡದಲ್ಲಿ ಪ್ರಮುಖ ಬೌಲರ್ ಆಗಿ ಮಿಂಚುತ್ತಿರುವ ಮಹಮದ್ ಸಿರಾಜ್ ಅವರ ಈಗ ಸಂಬಳ ಎಷ್ಟು ಎಂದು ತಿಳಿದರೆ ನೀವು ಒಮ್ಮೆ ಶಾಕ್ ಆಗುವುದು ಗ್ಯಾರೆಂಟಿ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಐಪಿಎಲ್ ನಲ್ಲಿ ಮಿಂಚುತ್ತಿರುವ ಮಹಮದ್ ಸಿರಾಜ್ ಅವರು ಭಾರತದ ಸಿ ತಂಡದಲ್ಲಿ ಸ್ಥಾನವನ್ನ ಗಿಟ್ಟಿಸಿಕೊಂಡಿದ್ದಾರೆ. ನಮ್ಮ ಭಾರತ ತಂಡದಲ್ಲಿ ಮೂರೂ ವಿಭಾಗಗಳು ಇದ್ದು ಅದನ್ನ ಎ ಬಿ ಸಿ ಎಂದು ವಿಂಗಡಣೆ ಮಾಡಲಾಗಿದೆ ಮತ್ತು ಅವರ ಸಂಬಳದದಲ್ಲಿ ಕೂಡ ವ್ಯತ್ಯಾಸ ಇರುತ್ತದೆ.

ಇನ್ನು ಎ ವಿಭಾಗದಲ್ಲಿ ಆಡುವವರಿಗೆ ವಾರ್ಷಿಕವಾಗಿ 7 ಕೋಟಿ ರೂಪಾಯಿಯನ್ನ ಸಂಬಳದ ರೂಪದಲ್ಲಿ ನೀಡಿದರೆ ಬಿ ವಿಭಾಗದಲ್ಲಿ ಆಡುವವರಿಗೆ ವಾರ್ಷಿಕವಾಗಿ 5 ಕೋಟಿ ರೂಪಾಯಿ ಸಂಬಳವನ್ನ ನೀಡಲಾಗುತ್ತದೆ ಮತ್ತು ಅದೇ ರೀತಿಯಲ್ಲಿ ಸಿ ವಿಭಾಗದಲ್ಲಿ ಆಡುವವರಿಗೆ ವಾರ್ಷಿಕವಾಗಿ 1 ಕೋಟಿ ರೂಪಾಯಿಯನ್ನ ಸಂಭಾವನೆಯ ರೂಪದಲ್ಲಿ ನೀಡಲಾಗುತ್ತದೆ ಮತ್ತು ಅದೇ ರೀತಿಯಲ್ಲಿ ಮಹಮದ್ ಸಿರಾಜ್ ಅವರಿಗೆ ವಾರ್ಷಿಕವಾಗಿ 1 ಕೋಟಿ ರೂಪಾಯಿಯನ್ನ ಸಂಬಳದ ರೂಪದಲ್ಲಿ ನೀಡಲಾಗುತ್ತದೆ. ಇನ್ನು ಅದೇ ರೀತಿಯಾಗಿ ಐಪಿಎಲ್ ನಲ್ಲಿ ಕೂಡ ಮಹಮದ್ ಸಿರಾಜ್ ಅವರಿಗೆ ಸಾಕಷ್ಟು ದೊಡ್ಡ ಸಂಭಳವನ್ನ ನೀಡಲಾಗುತ್ತದೆ.

Join Nadunudi News WhatsApp Group

Mohammad Siraj

Join Nadunudi News WhatsApp Group