Jio: ಜಿಯೋ ಗ್ರಾಹಕರಿಗೆ ಬಂಪರ್ ಗುಡ್ ನ್ಯೂಸ್, ಗಣೇಶ ಹಬ್ಬ ಬಂಪರ್ ಉಡುಗೊರೆ ನೀಡಿದ ಅಂಬಾನಿ.

ಮುಕೇಶ್ ಅಂಬಾನಿ ಜಿಯೋ ಗ್ರಾಹಕರಿಗೆ ಗಣೇಶ್ ಹಬ್ಬದ ಉಡುಗೊರೆ ನೀಡಿದ್ದಾರೆ.

Mukesh Ambani Ganesh Chaturthi Offer: ಜಿಯೋ ರಿಲಯನ್ಸ್ (Jio Reliance) ದೇಶದಾದ್ಯಂತ ತನ್ನ 5G ಸೇವೆಯ ಮೂಲಕ ಇನ್ನಷ್ಟು ಎತ್ತರಕ್ಕೆ ಬೆಳೆಯಲು ಸಿದ್ಧತೆ ನಡೆಸುತ್ತಿದೆ. ಸದ್ಯ ಜಿಯೋ ಬಳಕೆದಾರರು 4G ಸೇವೆಯನ್ನು ಆನಂದಿಸುತ್ತಿದ್ದಾರೆ. 4G ಸೇವೆಯು ಅತಿ ವೇಗವಾಗಿ ಓಡುತ್ತಿದೆ.

ಇನ್ನು ಕೆಲವು ನಗರ ಪ್ರದೇಶಗಲ್ಲಿ 5G ಸೇವೆಗಳು ಕೂಡ ಲಭ್ಯವಿದೆ. ಕೆಲ ಪ್ರದೇಶದಲ್ಲಿ ಮಾತ್ರ ಲಭ್ಯವಿರುವ 5G ಸೇವೆಗಳು ಎಲ್ಲಡೆ ನಿಡಲು ಜಿಯೋ ರಿಲಯನ್ಸ್ ಸಿದ್ಧತೆ ನಡೆಸುತ್ತಿದೆ. ಇದೀಗ ಜಿಯೋ ಕಂಪನಿಯ ಅಧ್ಯಕ್ಷ ಮುಖೇಶ್ ಅಂಬಾನಿ ದೇಶದಲ್ಲಿ 5G ಸೇವೆ ನೀಡುವ ಬಗ್ಗೆ ಬಿಗ್ ಅಪ್ಡೇಟ್ ನೀಡಿದ್ದಾರೆ.

Jio Air Fiber will also be launched on September 19
Image Credit: Economictimes

ಜಿಯೋ ರಿಲಯನ್ಸ್
ದೇಶದಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಹೊಂದಿರುವ ಟೆಲಿಕಾಂ ಕಂಪನಿ ಎಂದರೆ ಅದು ಜಿಯೋ ಎನ್ನಬಹುದು. ಜಿಯೋ ತನ್ನ ಉತ್ತಮ ಸೇವೆಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ. ಜಿಯೋ ಗ್ರಾಹಕರು ಅನಿಯಮಿತ ಡೇಟಾ ಪ್ರಯೋಜನಗಳನ್ನು ಅತಿ ಕಡಿಮೆ ಬೆಲೆಗೆ ಪಡೆಯುತ್ತಿದೆ. ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ, ವಾರ್ಷಿಕ ಯೋಜನೆಗಳು ಜಿಯೋ ಗ್ರಾಹಕರಿಗೆ ಕಡಿಮೆ ಬೆಲೆಗೆ ಸಿಗುತ್ತಿದೆ.

ದೇಶದಲ್ಲಿ ಜಿಯೋ ಬಳಕೆದಾರರ ಸಂಖ್ಯೆ 450 ಮಿಲಿಯನ್ ಗು ಮೀರಿದೆ. ಜಿಯೋ ಕಂಪನಿ ವರ್ಷದಿಂದ ವರ್ಷಕ್ಕೆ ಶೇ. 20 ರಷ್ಟು ಆದಾಯವನ್ನು ಹೆಚ್ಚಿಗೆ ಗಳಿಸುತ್ತಿದೆ. ಇನ್ನು 5G ನೆಟ್ವರ್ಕ್ ದೇಶದಲ್ಲೆಡೆ 96 ಪ್ರತಿಶತದಷ್ಟು ಹರಡಿದೆ. ಉಳಿದ ನಗರ ಪ್ರದೇಶಗಲ್ಲಿ ಕೂಡ 5G ಕ್ರಾಂತಿಗಾಗಿ ಜಿಯೋ ಸಿದ್ಧತೆ ನಡೆಸುತ್ತಿದೆ. ಈಗಾಗಲೇ ಜಿಯೋ 5G ಸೇವೆಯ ಬಗ್ಗೆ ಸಾಕಷ್ಟು ಅಪ್ಡೇಟ್ ಹೊರಬಿದ್ದಿವೆ. ಇದೀಗ ಮುಕೇಶ್ ಅಂಬಾನಿ ಅವರು ಸದ್ಯದಲ್ಲೇ ಉಳಿದ ಪ್ರದೇಶಗಳಿಗೆ 5G ಸೇವೆ ಲಾಭವಾಗುವುದಾಗಿ ಹೇಳಿಕೆ ನೀಡಿದ್ದಾರೆ.

Mukesh Ambani About Jio 5G Network
Image Credit: Economictimes

ಡಿಸೇಂಬರ್ ನಲ್ಲಿ ದೇಶದಾದ್ಯಂತ 5G ಸೇವೆ ಆರಂಭ
ಇನ್ನು 5G ಸೇವೆಯನ್ನು ದೇಶದಾದ್ಯಂತ ವಿಸ್ತರಿಸಲು ಜಿಯೋ ನಿರ್ಧರಿಸಿದೆ. ವರ್ಷಾಂತ್ಯದಲ್ಲಿ ಇಡೀ ದೇಶದ ಜಿಯೋ ಬಳಕೆದಾರರಿಗೆ 5G ಸೇವೆ ವಿಸ್ತರಿಸುವ ಬಗ್ಗೆ ಮಾಹಿತಿ ಲಭಿಸಿದೆ. ‘ಡಿಸೇಂಬರ್ ವೇಳೆಗೆ ದೇಶದಾದ್ಯಂತ 5G ಇಂಟರ್ನೆಟ್ ಲಭ್ಯವಾಗಲಿದೆ. ಗಣೇಶ ಚತುರ್ಥಿ ದಿನ ಜಿಯೋ ಏರ್ ಫೈಬರ್ ಆರಂಭಿಸಲಾಗುವುದು ಎಂದು ಮುಕೇಶ್ ಅಂಬಾನಿ ಅವರು ಮಾಹಿತಿ ನೀಡಿದ್ದಾರೆ.

Join Nadunudi News WhatsApp Group

ಜಿಯೋ 5G ಇಂಟರ್ನೆಟ್ ವಿಸ್ತರಿಸುವ ಕಾರ್ಯ ವೇಗವಾಗಿ ನಡೆಯುತ್ತಿದೆ. ಇನ್ನು ಸೆಪ್ಟೆಂಬರ್ 19 ರಂದು ಜಿಯೋ ಏರ್ ಫೈಬರ್ ಕೂಡ ಲಾಂಚ್ ಆಗಲಿದೆ ಎಂದು ಮಾಹಿತಿ ನೀಡಿದ್ದಾರೆ. ಈ ಮೂಲಕ ದೇಶದ ಜನತೆಗೆ ಗಣೇಶ ಹಬ್ಬದ ಉಡುಗೊರೆಯನ್ನು ಜಿಯೋ ಗ್ರಾಹಕರಿಗೆ ನೀಡಲಾಗಿದೆ. ಸದ್ಯದಲ್ಲೇ ದೇಶದಲ್ಲಿ ಜಿಯೋ 5G ಅನಾವರಣಗೊಳ್ಳಲಿದೆ.

Join Nadunudi News WhatsApp Group