Nita Ambani: ಈ ಒಂದು ಷರತ್ತಿನ ಮೇಲೆ ಮುಕೇಶ್ ಅಂಬಾನಿಯನ್ನ ಮದುವೆಯಾದ ನೀತಾ ಅಂಬಾನಿ, ಆ ಷರತ್ತು ಏನು ಗೊತ್ತಾ

ಮದುವೆಗೂ ಮುನ್ನ ಅಂಬಾನಿಗೆ ಷರತ್ತು ಹಾಕಿದ ನೀತಾ ಅಂಬಾನಿ

Nita Ambani Marriage Conditions: ದೇಶದ ಶ್ರೀಮಂತ ವ್ಯಕ್ತಿಯಾಗಿ ಗುರುತಿಸಿಕೊಂಡಿರುವ Mukesh Ambani ಅವರು ಆಗಾಗ ತಮ್ಮ ವ್ಯವಹಾರ ಹಾಗೂ ಐಷಾರಾಮಿ ಜೀವನದ ವಿಷಯವಾಗಿ ಸುದ್ದಿಯಾಗುತ್ತಾರೆ. ದೇಶದಲ್ಲಿ Free Internet ಮತ್ತು ಕರೆಯ ಸೌಲಭ್ಯವನ್ನ ನೀಡುವುದರ ಮೂಲಕ ದೇಶದ ಜನರಿಗೆ ಉತ್ತಮ Offer ನೀಡಿದ Mukesh Ambani ಅವರು ಈಗ ಎಲ್ಲಾ ಕ್ಷೇತ್ರದಲ್ಲಿ ತಮ್ಮನ್ನ ತಾವು ತೊಡಗಿಸಿಕೊಳ್ಳುತ್ತಿದ್ದಾರೆ.

ಅದೇ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಬಹಳ ಸುದ್ದಿಯಲ್ಲಿ ಇರುವ ಇನ್ನೊಬ್ಬ ವ್ಯಕ್ತಿ ಅಂದರೆ ಅದು ಮುಕೇಶ್ ಅಂಬಾನಿಯವರ ಪತ್ನಿ Nitha Ambani. ಇನ್ನು Nita Ambani ಅವರು ಹೆಚ್ಚಾಗಿ ತಮ್ಮ ದುಬಾರಿ ಉಡುಗೆ ತೊಡುಗೆಗಳ ಮೂಲಕ ಸುದ್ದಿಯಾಗುತ್ತಾರೆ. IPL ಸಮಯದಲ್ಲಿ ಹೆಚ್ಚು ಕಾಣಿಸಿಕೊಳ್ಳುವ ನೀತಾ ಅಂಬಾನಿಯವರು ಗಂಡನ ಹಾಗೆ ಐಷಾರಾಮಿ ಜೀವನವನ್ನ ಇಷ್ಟಪಡುವ ಮಹಿಳೆ ಆಗಿದ್ದಾರೆ.

Mukesh Ambani And Nita Ambani
Image Credit: India Today

ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ನೀತಾ ಅಂಬಾನಿ
ಮುಕೇಶ್ ಅಂಬಾನಿಯನ್ನು ಮದುವೆಯಾಗುವ ಮೊದಲು ನೀತಾ ಅಂಬಾನಿ ಅವರು ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ್ದರು. ಮದುವೆಗೂ ಮುನ್ನ ನೀತಾ ಅಂಬಾನಿ ಅವರ ಹೆಸರು ನೀತಾ ದಲಾಲ್. ಇವರು ಶಾಲಾ ಶಿಕ್ಷಕರಲ್ಲದೆ ಭರತನಾಟ್ಯ ಪ್ರವೇಣೆಯಾಗಿದ್ದರು.

ಕಾರ್ಯಕ್ರಮ ಒಂದರಲ್ಲಿ ಮುಕೇಶ್ ಅಂಬಾನಿ ಅವರ ತಂದೆ ಧೀರೂಬಾಯ್ ಅಂಬಾನಿ ಹಾಗೂ ಮುಕೇಶ್ ಅಂಬಾನಿ ತಾಯಿ ಕೋಕಿಲಾಬೆನ್ ಅಂಬಾನಿ ನೀತಾ ಅವರ ಭರತನಾಟ್ಯ ಪ್ರದರ್ಶನಕ್ಕೆ ಮನಸೋತು ಮುಕೇಶ್ ಅಂಬಾನಿ ಅವರ ತಂದೆ ನೀತಾ ಅವರ ತಂದೆಗೆ ಮದುವೆ ಪ್ರಸ್ತಾಪ ಮಾಡುವ ಸಲುವಾಗಿ ಕರೆ ಮಾಡುತ್ತಾರೆ.

ಮುಕೇಶ್ ಅಂಬಾನಿ ಜೊತೆಗಿನ ಮದುವೆ ಪ್ರಸ್ತಾಪ ಕಂಡು ನೀತಾ ಅವರ ಕುಟುಂಬಕ್ಕೆ ಶಾಕ್ ಆಗುತ್ತಾರೆ. ಆರಂಭದಲ್ಲಿ ಮದುವೆ ಪ್ರಸ್ತಾಪ ಕಂಡು ನೀತಾ ಅಂಬಾನಿ ಸಂಶಯ ವ್ಯಕ್ತ ಪಡಿಸುತ್ತಾರೆ. ತದ ನಂತರ ಮುಕೇಶ್ ಅಂಬಾನಿಗೆ ಒಂದು ಷರತ್ತನ್ನು ವಿಧಿಸಿ ಮದುವೆ ಪ್ರಸ್ತಾಪವನ್ನು ಒಪ್ಪಿಕೊಳ್ಳುತ್ತಾರೆ.

Join Nadunudi News WhatsApp Group

Mukesh Ambani And Nita Ambani Marriage Story
Image Credit: Business Today

ಮದುವೆಗೂ ಮುನ್ನ ಅಂಬಾನಿಗೆ ಷರತ್ತು ಹಾಕಿದ ನೀತಾ ಅಂಬಾನಿ
ಹೌದು ಅಂದು ಮುಕೇಶ್ ಅಂಬಾನಿ ಕುಟುಂಬ ನೀತಾ ಅವರ ಮುಂದೆ ಮದುವೆ ಪ್ರಸ್ತಾಪವಿಟ್ಟಾಗ ನೀತಾ ಅವರು ಮುಕೇಶ್ ಅಂಬಾನಿಗೆ ಒಂದು ಷರತ್ತನ್ನು ಹಾಕುತ್ತಾರೆ. ಅದೇನೆಂದರೆ ನೀತಾ ಅಂಬಾನಿ ಅವರು ಮದುವೆಯ ನಂತರ ಶಾಲಾ ಶಿಕ್ಷಕಿಯಾಗಿ ಕೆಲಸ ಮಾಡುದಾಗಿ ಬಯಸುತ್ತಾರೆ. ಇದಕ್ಕೆ ಮುಕೇಶ್ ಅಂಬಾನಿ ಒಪ್ಪಿಗೆ ನೀಡಿ ನೀತಾ ಅವರನ್ನು ಮದುವೆಯಾಗುತ್ತಾರೆ.

800 ರೂ. ಸಂಬಳದಲ್ಲಿ ಶಿಕ್ಷಕಿ ಕೆಲಸಕ್ಕೆ ಸೇರಿದ ನೀತಾ ಅಂಬಾನಿ
ಮದುವೆಯ ನಂತರ ನೀತಾ ಅಂಬಾನಿ ಮುಂಬೈ ನ ಧೀರೂಬಾಯ್ ಅಂಬಾನಿ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತಿದ್ದರು. ಆದರೆ ಅವರು ಆ ಶಾಲೆಯಲ್ಲಿ ತಿಂಗಳಿಗೆ 800 ರೂಪಾಯಿ ಸಂಬಳವನ್ನು ಪಡೆಯುತ್ತಿದ್ದರು.

Mukesh Ambani And Nita Ambani Latest News
Image Credit: Newsroompost

Join Nadunudi News WhatsApp Group