Jiocinema: ಜಿಯೋ ಸಿನಿಮಾ ಮೂಲಕ ಫ್ರೀ IPL ತೋರಿಸಿದ ಅಂಬಾನಿಗೆ ಸಿಕ್ಕ ಲಾಭ ಎಷ್ಟು, 10 ಪಟ್ಟು ಲಾಭ.

ಪ್ರೇಕ್ಷಕರಿಗೆ ಫ್ರೀ ಕ್ರಿಕೆಟ್ ತೋರಿಸಿ ಮುಖೇಶ್ ಅಂಬಾನಿಯ IPL 2023 ರ ಆದಾಯದ ಬಗ್ಗೆ ತಿಳಿಯಿರಿ.

IPL 2023 In Jio Cinema: IPL ನ 16 ನೇ ಆವೃತ್ತಿ ಈಗಾಗಲೇ ಯಶಸ್ವಿಯಾಗಿ ಪೂರೈಸಿದೆ. ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಅವರು ಜಿಯೋ ಸಿನಿಮಾ ಡಿಜಿಟಲ್ ನಿಂದ ಪ್ರೇಕ್ಷಕರಿಗೆ ಉಚಿತವಾಗಿ ತೋರಿಸಿದರು. ಈ ವಿಚಾರ ಎಲ್ಲರಿಗೂ ತಿಳಿದಿದೆ.

ಜಿಯೋ ಸಿನಿಮಾ
ಜಿಯೋ ಸಿನಿಮಾ ಮೂಲಕ ಕ್ರಿಕೆಟ್ ಪ್ರೇಕ್ಷಕರಿಗೆ ಐಪಿಎಲ್ 2023 ರ ಪಂದ್ಯಗಳನ್ನು ಉಚಿತವಾಗಿ ಪ್ರಸಾರ ಮಾಡಲಾಯಿತು. ಎರಡು ತಿಂಗಳುಗಳ ಕಾಲ ಉಚಿತವಾಗಿ ಪಂದ್ಯಗಳನ್ನು ವೀಕ್ಷಿಸಲಾಯಿತು. ಆದರೆ ಪ್ರೇಕ್ಷಕರಿಗೆ ಉಚಿತವಾಗಿ ತೋರಿಸಿದರು ಮುಖೇಶ್ ಅಂಬಾನಿಗೆ ನಷ್ಟವೇನು ಆಗಿಲ್ಲ. ಇದರ ಬದಲಾಗಿ ಐಪಿಎಲ್ 2023 ರ ಆದಾಯದ ಬಗ್ಗೆ ಪ್ರಮುಖ ಅಂಶಗಳನ್ನು ಬಹಿರಂಗಡಿಸಿದೆ.

Mukesh Ambani's IPL 2023 Income
Image Credit: Hindustantimes

ಮುಖೇಶ್ ಅಂಬಾನಿಯ IPL 2023 ರ ಆದಾಯ
IPL 2023 ರ ಆವೃತ್ತಿಯ ಜಾಹಿರಾತು ಬರೋಬ್ಬರಿ 10120 ಕೋಟಿ ರೂಪಾಯಿ ಎಂದು ಮಾರುಕಟ್ಟೆ ಸಂಶೋಧನೆ ಮತ್ತು ವಿಶ್ಲೇಷಣಾ ಸಂಸ್ಥೆ ರೆಡ್ ಶೇರ್ ಸ್ಟ್ರಾಟಜಿ ಕನ್ಸಲೆಂಟ್ಸ್ ವರದಿಯಲ್ಲಿ ತಿಳಿಸಿದೆ. ಬಿಸಿಸಿಐ ಪ್ರಾಂಚೈಸಿ ಮಾಲೀಕರು ಮತ್ತು ಪ್ರಸಾರಕರು ನೇರವಾಗಿ 65% ಶೇಕಡಾದಷ್ಟು ಗಳಿಸಿದರೆ ಉಳಿದ 35 % ಆದಾಯ ಪರೋಕ್ಷವಾಗಿ ಬಂದಿತ್ತು.

ಈ ವರದಿಯ ಪ್ರಕಾರ ಮುಖೇಶ್ ಅಂಬಾನಿ ಅವರ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕು ಹೊಂದಿರುವ ಜಿಯೋ ಸಿನಿಮಾಸ್ ಮ್ಯಾಟ್ ಟಿವಿ ಬ್ರಾಡ್ ಕಾಸ್ಟರ್ ಸ್ಟಾರ್ ಸ್ಪೋರ್ಟ್ಸ್ ಒಟ್ಟಾಗಿ ಜಾಹಿರಾತುಗಳ ಮೂಲಕ 4,700 ಕೋಟಿ ರೂಪಾಯಿ ಗಳಿಸಿದೆ. ಮತ್ತೊಂದೆಡೆ ಫ್ರಾಂಚೈಸಿಗಳು 1,450 ಕೋಟಿ ರೂಪಾಯಿ ಪಡೆದರೆ ಬಿಸಿಸಿಐ 430 ಕೋಟಿ ರೂಪಾಯಿ ಪಡೆದಿವೆ.

Mukesh Ambani's IPL 2023 Income
Image Credit: BusinessToday

ಬಿಸಿಸಿಐ, ಬ್ರಾಡ್‌ಕಾಸ್ಟರ್‌ಗಳು, ಫ್ರಾಂಚೈಸಿಗಳು ಜಾಹೀರಾತುಗಳಿಂದ ಬರುವ ಒಟ್ಟು ಆದಾಯದ ಶೇ.65 ರಷ್ಟು ನೇರವಾಗಿ ಗಳಿಸಿದರೆ ಉಳಿದ ಶೇ.35 ರಷ್ಟು ಮಂದಿ ಪರೋಕ್ಷ ಆದಾಯ ಗಳಿಸಿದ್ದಾರೆ. ಉಳಿದ 35 ಪ್ರತಿಶತ ಆದಾಯವು ಸಾಮಾಜಿಕ ಮಾಧ್ಯಮ, ಸಾಂಪ್ರದಾಯಿಕ ಮಾಧ್ಯಮ ಮತ್ತು ಇತರ ಇಂಟರ್ನೆಟ್ ಪ್ಲಾಟ್‌ಫಾರ್ಮ್‌ಗಳಿಂದ ಬಂದಿದೆ ಎಂದು ವರದಿ ಹೇಳಿದೆ.

Join Nadunudi News WhatsApp Group

Join Nadunudi News WhatsApp Group