ಪ್ರಧಾನಿ ನರೇಂದ್ರ ಮೋದಿಗೆ ಓಪನ್ ಸವಾಲ್ ಹಾಕಿದ ರಾಹುಲ್ ಗಾಂಧಿ, ಧೈರ್ಯವಿದ್ದರೆ ಈ ಕೆಲಸ ಮಾಡಿ.

ನಮ್ಮ ದೇಶದ ರಾಜಕೀಯ ಹೇಗಿದೆ ಅನ್ನುವುದು ನಿಮಗೆಲ್ಲ ತಿಳಿದಿರುವ ವಿಚಾರ ಆಗಿದೆ ಎಂದು ಹೇಳಬಹುದು. ಹೌದು ಒಮ್ಮೊಮ್ಮೆ ದೇಶದ ರಾಜಕೀಯ ಜನರ ನಗೆಪಾಟಿಕೆಗೆ ಕಾರಣವಾಗುತ್ತಿದೆ ಎಂದು ಹೇಳಬಹುದು. ನಮ್ಮ ದೇಶದ ರಾಜಕೀಯದಲ್ಲಿ ಬಹಳ ಪೈಪೋಟಿ ಇರುವುದು ನಿಮಗೆಲ್ಲ ತಿಳಿದಿರುವ ಆಗಿದೆ ಮತ್ತು ಈ ದೊಡ್ಡ ಪೈಪೋಟಿಯ ನಡುವೆ ನರೇಂದ್ರ ಮೋದಿಯವರು ಎರಡನೆಯ ಭಾರಿ ದೇಶದ ಪ್ರಧಾನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನು ರಾಹುಲ್ ಗಾಂಧಿ ಯಾರಿಗೆ ತಾನೇ ಗೊತ್ತಿಲ್ಲ, ಮೋದಿಗೆ ಇರುವ ಒಬ್ಬ ಪ್ರಭಲವಾದ ಎದುರಾಳಿ ಅಂದರೆ ಅದೂ ರಾಹುಲ್ ಗಾಂಧಿ ಎಂದು ಹೇಳಿದರೆ ತಪ್ಪಾಗಲ್ಲ. ರಾಹುಲ್ ಗಾಂಧಿ ಮತ್ತು ನರೇಂದ್ರ ಮೋದಿಯವರ ನಡುವೆ ಅನೇಕ ಭಾರಿ ಶೀತಲ ಸಮರ ನಡೆಯುತ್ತದೆ ಎಂದು ಹೇಳಬಹುದು.

ಇನ್ನು ರಾಹುಲ್ ಗಾಂಧಿ ನರೇಂದ್ರ ಮೋದಿಯವರಿಗೆ ಸವಾಲು ಹಾಕುವುದು ಮತ್ತು ನರೇಂದ್ರ ಮೋದಿಯವರು ರಾಹುಲ್ ಗಾಂಧಿಯವರಿಗೆ ಸವಾಲನ್ನ ಹಾಕುವುದು ನಾವು ಹಲವು ಭಾರಿ ನೋಡೇ ಇರುತ್ತೇವೆ ಎಂದು ಹೇಳಬಹುದು. ಇನ್ನು ಈಗ ವಿಷಯಕ್ಕೆ ಬರುವುದಾದರೆ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರು ಮತ್ತೆ ನರೇಂದ್ರ ಮೋದಿಯವರಿಗೆ ಸವಾಲನ್ನ ಹಾಕಿದ್ದು ಸದ್ಯ ಈಗ ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹಾಗಾದರೆ ರಾಹುಲ್ ಗಾಂಧಿಯವರು ನರೇಂದ್ರ ಮೋದಿಯವರಿಗೆ ಹಾಕಿದ ಸವಾಲು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Narendra modi and rahul gandhi

ಹೌದು ಸ್ನೇಹಿತರೆ ಪ್ರಧಾನಿ ನರೇಂದ್ರ ಮೋದಿಯವರು ಇಂದು ಮನ್​ ಕಿ ಬಾತ್​ ಕಾರ್ಯಕ್ರಮದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ, ಆದರೆ ಅವರ ಕಾರ್ಯಕ್ರಮಕ್ಕೂ ಕೆಲ ಹೊತ್ತು ಮೊದಲೇ ಟ್ವಿಟ್ಟರ್​ನಲ್ಲಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಪ್ರಧಾನಿಗೆ ಸವಾಲೊಂದನ್ನು ಹಾಕಿದ್ದಾರೆ. ರಾಹುಲ್ ಗಾಂಧಿಯವರು ನರೇಂದ್ರ ಮೋದಿಯವರಿಗೆ ಈ ಸಾಲವನ್ನ ಹಾಕಿದ್ದು ಧೈರ್ಯವಿದ್ದರೆ ಈ ಕೆಲಸವನ್ನ ಮಾಡಿ ಎಂದು ಹೇಳಿದ್ದಾರೆ. ನಿಮಗೆ ಧೈರ್ಯವಿದ್ದರೆ ಮನ್​ ಕಿ ಬಾತ್​ ಬದಲು ‘ಕಿಸಾನ್​ ಬಾತ್​ ಮತ್ತು ಜಾಬ್​ ಕಿ ಬಾತ್​’ ಕಾರ್ಯಕ್ರಮ ಮಾಡಿ ಅದರ ಬಗ್ಗೆ ಮಾತನಾಡಿ ಎಂದು ರಾಹುಲ್​ ಗಾಂಧಿ ಟ್ವಿಟ್ಟರ್​ನಲ್ಲಿ ಹೇಳಿದ್ದಾರೆ.

ಕೇಂದ್ರದಲ್ಲಿ ವಿರೋಧಿ ಪಕ್ಷದ ಸ್ಥಾನದಲ್ಲಿರುವ ಕಾಂಗ್ರೆಸ್​ ತನ್ನ ಸಾಮಾಜಿಕ ಜಾಲತಾಣಗಳ ಮೂಲಕ ಆಡಳಿತ ಪಕ್ಷವನ್ನು ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಲಾರಂಭಿಸಿದೆ. ದೇಶದಲ್ಲಿ ಅನೇಕ ಸಮಸ್ಯೆಗಳು ಇದ್ದು ಈ ಹಿಂದೆ ರೈತರ ಪ್ರಶ್ನೆಯನ್ನ ಕೇಳಿದ್ದ ರಾಹುಲ್ ಗಾಂಧಿಯವರು ಈಗ ಹೆಚ್ಚಾಗುತ್ತಿರುವ ಇಂಧನ ಬೆಲೆ, ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆಯ ಬಗ್ಗೆ ಪ್ರಶ್ನೆಯನ್ನ ಕೇಳಿದ್ದಾರೆ. ಸದ್ಯ ರಾಹುಲ್ ಗಾಂಧಿಯವರು ಕೇಳಿರುವ ಈ ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದ್ದು ಜನರು ಕೂಡ ರಾಹುಲ್ ಗಾಂಧಿಯವರ ಪ್ರಶ್ನೆಗೆ ಕಮೆಂಟ್ ಮಾಡಿದ್ದಾರೆ. ಸ್ನೇಹಿತರೆ ರಾಹುಲ್ ಗಾಂಧಿಯವರ ಈ ಪ್ರಶ್ನೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

Narendra modi and rahul gandhi

Join Nadunudi News WhatsApp Group