Narendra Modi: ಫಲಿತಾಂಶದ ಬಳಿಕ ಭಾವುಕದ ಪೋಸ್ಟ್ ಮಾಡಿದ ನರೇಂದ್ರ ಮೋದಿ, ಮೋದಿ ಹೇಳಿದ್ದೇನು ನೋಡಿ.

ಫಲಿತಾಂಶದ ಬಳಿಕ ಭಾವುಕದ ಪೋಸ್ಟ್ ಮಾಡಿದ ನರೇಂದ್ರ ಮೋದಿ

Narendra Modi Shared A Post: ಸದ್ಯ 2024 ರ ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಈ ಬಾರಿಯ ಚುನಾವಣಾ ಫಲಿತಾಂಶ ಬಿಜೆಪಿ ಹಾಗೂ ಕಾಂಗ್ರೆಸ್ ಎರಡು ಸರ್ಕಾರಕ್ಕೂ ಅಚ್ಚರಿ ಮೂಡಿಸಿದೆ. ಇನ್ನು ವೋಟಿಂಗ್ ನಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದರು ಕೂಡ ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ನೀಡುವ ಮೂಲಕ ಬಿಜೆಪಿಗೆ ದೊಡ್ಡ ಸಂಕಷ್ಟವನ್ನು ನೀಡಿದೆ.

ಬಿಜೆಪಿ ನೇತೃತ್ವದ ಎನ್‌ಡಿಎ ಕೂಟದ ಸ್ಥಾನಗಳು 290ಕ್ಕೆ ಇಳಿದಿದ್ದು, ಆತಂಕಕಾರಿಯಾಗಿದೆ. ಅತ್ತ, INDIA ಒಕ್ಕೂಟ ನಿರೀಕ್ಷೆಗೂ ಮೀರಿ 230ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿಗೆ ಸ್ಪಷ್ಟ ಬಹುಮತ ಸಿಗದಿದ್ದರೂ ಎನ್‌ಡಿಎ ಸತತ ಮೂರನೇ ಬಾರಿಗೆ ಸರ್ಕಾರ ರಚಿಸುವುದು ಖಚಿತ ಎನ್ನಲಾಗಿದೆ. ಇದಾದ ನಂತರ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಫಲಿತಾಂಶಗಳ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಮೋದಿ ಅವರ ಭಾವುಕದ ಪೋಸ್ಟ್ ಇದೀಗ ಬರಿ ವೈರಲ್ ಆಗುತ್ತಿದೆ.

Narendra Modi Shared A Post
Image Credit: Business Today

ಫಲಿತಾಂಶದ ಬಳಿಕ ಭಾವುಕದ ಪೋಸ್ಟ್ ಮಾಡಿದ ನರೇಂದ್ರ ಮೋದಿ
ದೇಶದ ಜನತೆ ಎನ್ ಡಿಎ ಮೇಲೆ ವಿಶ್ವಾಸವಿಟ್ಟು ಮೂರನೇ ಬಾರಿಗೆ ಸರ್ಕಾರ ರಚಿಸಲು ಅವಕಾಶ ನೀಡಿರುವುದು ಐತಿಹಾಸಿಕ.”ದೇಶದ ಜನತೆ ಎನ್ ಡಿಎ ಮೈತ್ರಿಕೂಟದ ಮೇಲೆ ನಂಬಿಕೆ ಇಟ್ಟಿದ್ದಾರೆ, ಇದೇ ಕಾರಣಕ್ಕೆ ಸತತ ಮೂರನೇ ಬಾರಿಗೆ ಸರಕಾರ ರಚಿಸಲು ಅನುಮತಿ ನೀಡಿದ್ದಾರೆ. ಜನರು ನಮ್ಮ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ನಾನು ಆಭಾರಿಯಾಗಿದ್ದೇನೆ.

ಮುಂದಿನ ದಿನಗಳಲ್ಲಿ ಜನರ ಆಶೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ಉತ್ತಮ ಆಡಳಿತ ನೀಡುತ್ತೇವೆ. ಅಲ್ಲದೆ, ಚುನಾವಣೆಯಲ್ಲಿ ಶ್ರಮಿಸಿದ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಕಾರ್ಮಿಕರ ಶ್ರಮವನ್ನು ವರ್ಣಿಸಲು ನನ್ನ ಬಳಿ ಪದಗಳಿಲ್ಲ ಎಂದು ನರೇಂದ್ರ ಮೋದಿ ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

Narendra Modi Latest News
Image Credit: Business Today

ಮತ್ತೆ ಪ್ರಧಾನಿ ಆಗ್ತಾರಾ ನರೇಂದ್ರ ಮೋದಿ…?
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸಿಂಗಲ್ ಲಾರ್ಜೆಸ್ಟ್ ಪಕ್ಷವಾಗಿದೆ. ಆದರೆ ಒಂದೇ ಸರ್ಕಾರ ರಚಿಸಲು ಸಾಕಷ್ಟು ಬಹುಮತ ಪಡೆಯುವಲ್ಲಿ ಬಿಜೆಪಿ ವಿಫಲವಾಗಿದೆ. ಹೀಗಾಗಿ ಬಿಜೆಪಿ ತನ್ನ ಮೈತ್ರಿ ಪಕ್ಷಗಳನ್ನು ಒಗ್ಗೂಡಿಸಿ ಸರ್ಕಾರ ರಚಿಸುವ ಸಾಧ್ಯತೆ ಇದೆ. ಕಳೆದ ಹತ್ತು ವರ್ಷಗಳಿಂದ ಅಧಿಕಾರದಿಂದ ದೂರ ಉಳಿದಿದ್ದ ಕಾಂಗ್ರೆಸ್ ಗದ್ದುಗೆ ಏರಲು ಪ್ಲಾನ್ ಮಾಡಿದೆ. ಇದಕ್ಕಾಗಿ ಉತ್ತಮ ಯೋಜನೆ ರೂಪಿಸಲಾಗುವುದು.

Join Nadunudi News WhatsApp Group

ಚುನಾವಣಾ ಪೂರ್ವ ಮೈತ್ರಿಯಲ್ಲಿ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಮತ್ತು ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಮೇಲೆ ಎಲ್ಲರ ಕಣ್ಣು ನೆಟ್ಟಿತ್ತು. ಈಗಾಗಲೇ ಆಂಧ್ರದಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರಿಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದರು. ಇದರ ಬೆನ್ನಲ್ಲೇ INDIA ಮೈತ್ರಿಕೂಟವೂ ಚಂದ್ರಬಾಬು ಅವರನ್ನು ಸಂಪರ್ಕಿಸಿದೆ. ಅಲ್ಲದೆ ನಿತೀಶ್ ಕುಮಾರ್ ಅವರನ್ನು ಬಲೆಗೆ ಬೀಳಿಸಲು INDIA ಮೈತ್ರಿಕೂಟ ಯೋಜನೆ ರೂಪಿಸಿದೆ.

lok sabha election result 2024
Image Credit: Business-standard

Join Nadunudi News WhatsApp Group