Ugadi Wish: ಕನ್ನಡದಲ್ಲಿ ಯುಗಾದಿ ವಿಶ್ ಮಾಡಿದ ನರೇಂದ್ರ ಮೋದಿ, ಮೋದಿ ವಿಶ್ ಮಾಡಿದ್ದು ಹೀಗೆ.

Narendra Modi Wish Ugadi Festival In Kannada Language

Narendra Modi Tweet About Ugadi: ಭಾರತದ ಜನರಿಗೆ ಯುಗಾದಿ ಎಂದರೆ ಹೊಸ ಯುಗದ ಸಂಭ್ರಮ. ಯುಗಾದಿ ಎಂದರೆ ಜೀವನದಲ್ಲಿ ಕಹಿ ಸಿಹಿ ಎರಡನ್ನು ಸಮನಾಗಿ ಹಂಚಿಕೊಳ್ಳುವುದು. ಬೇವು ಬೆಲ್ಲ ಜೊತೆ ಸೇರಿಸಿ ಯುಗಾದಿ ಹಬ್ಬವನ್ನು ಸಾಂಪ್ರದಾಯಿಕವಾಗಿ ಭಾರತದಲ್ಲಿ ಆಚರಿಸುತ್ತಾರೆ.

ಇದೀಗ ನಾಡಿನ ಜನತೆಗೆ ನರೇಂದ್ರ ಮೋದಿ (Narendra Modi) ಅವರ ಕಡೆಯಿಂದ ಯುಗಾದಿ ಹಬ್ಬದ ಶುಭಾಶಯ ಬಂದಿದೆ. ಅದು ನರೇಂದ್ರ ಮೋದಿ ಅವರು ಕನ್ನಡದಲ್ಲಿಯೇ ಶುಭಾಶಯ ತಿಳಿಸುವ ಮೂಲಕ ಕನ್ನಡ ಭಾಷೆಯ ಮಹತ್ವವನ್ನು ಸಾರಿದ್ದಾರೆ.

Narendra Modi wished the Kannadigas a happy Ugadi festival in Kannada
Image Credit: swarajyamag

ಯುಗಾದಿ ಹಬ್ಬದ ಶುಭಾಶಯವನ್ನು ನಾಡಿನ ಜನತೆಗೆ ಕನ್ನಡದಲ್ಲೇ ತಿಳಿಸಿದ ನರೇಂದ್ರ ಮೋದಿ
ಎಲ್ಲರಿಗು ಸಂತಸದ ಯುಗಾದಿಯ ಶುಭಾಶಯಗಳು. ಭರವಸೆ ಮತ್ತು ಹೊಸ ಆರಂಭಗಳನ್ನು ಹಬ್ಬವು ಮುಂಬರುವ ವರ್ಷದಲ್ಲಿ ಪ್ರತಿಯೊಬ್ಬರ ಜೀವನದಲ್ಲಿ ಅಪಾರ ಸಂತೋಷ ಮತ್ತು ಉತ್ತಮ ಆರೋಗ್ಯವನ್ನು ತರಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಬರೆದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಯುಗಾದಿ ಹಬ್ಬದ ಶುಭಾಶಯ ತಿಳಿಸಿದ್ದಾರೆ.

ಯುಗಾದಿ ಹಬ್ಬಕ್ಕೆ ಕನ್ನಡದಲ್ಲಿಯೇ ಟ್ವೀಟ್ ಮಾಡಿದ ನರೇಂದ್ರ ಮೋದಿ
ಇಂದು ಮಾರ್ಚ್ 22 ರಂದು ಭಾರತದಲ್ಲಿ ಎಲ್ಲೆಡೆ ಯುಗಾದಿ ಹಬ್ಬದ ಸಂಭ್ರಮ. ಮನೆ ಮನೆಯಲ್ಲಿ ಯುಗಾದಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ಸಂದರ್ಭ ಪ್ರಧಾನಿ ನರೇಂದ್ರ ಮೋದಿಯವರು ನಾಡಿನ ಜನತೆಗೆ ಕನ್ನಡದಲ್ಲೇ ಟ್ವೀಟ್ ಮಾಡಿ ಯುಗಾದಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.

Join Nadunudi News WhatsApp Group

Modi has wished the festival of Ugadi to bring great health and happiness to everyone
Image Credit: twitter

ಯುಗಾದಿ ಹಬ್ಬದ ಸಂಭ್ರಮ
ಜೀವನದಲ್ಲಿ ಕಷ್ಟ ಸುಖವನ್ನು ಸಮಾನಾಗಿ ಹಂಚಿಕೊಂಡು ಸಾಗಬೇಕು ಎಂದು ಬೇವು ಬೆಲ್ಲ ಎರಡನ್ನು ಸೇರಿಸಿ ತಿನ್ನುವ ಹಬ್ಬ ಎಂದರೆ ಅದು ಯುಗಾದಿ. ತುಳು ನಾಡಿನ ಜನರಿಗೆ ಇಂದು ಹೊಸ ವರ್ಷದ ಸಂಭ್ರಮ. ಯುಗಾದಿಯ ಹಬ್ಬದಂದು ಬೇವು ಬೆಲ್ಲ ಹಂಚುವ ಮೂಲಕ ಜನರು ಯುಗಾದಿಯನ್ನು ಸಂಭ್ರಮಿಸುತ್ತಿದ್ದಾರೆ.

Join Nadunudi News WhatsApp Group