ಮದುವೆಯ ಮರುದಿನವೇ ತಿರುಪತಿಯಲ್ಲಿ ದೊಡ್ಡ ತಪ್ಪು ಮಾಡಿದ ನಯನತಾರ, ಕೋಪಗೊಂಡ ತಿಮ್ಮಪ್ಪ ನೋಡಿ.

ಸೆಲೆಬ್ರಿಟಿ ಅಂದಮೇಲೆ ಎಡವಟ್ಟು ಮಾಡಿಕೊಳ್ಳುವುದು ಸರ್ವೇ ಸಾಮಾನ್ಯ ಎಂದು ಹೇಳಬಹುದು. ಕೆಲವು ತಿಳಿದು ತಪ್ಪನ್ನ ಮಾಡಿದರೆ ಇನ್ನೂ ಕೆಲವರು ತಿಳಿಯದೆ ತಪ್ಪನ್ನ ಮಾಡುತ್ತಾರೆ. ಇನ್ನು ಅದೇ ರೀತಿಯಲ್ಲಿ ಮೊನ್ನೆತಾನೆ ಹಸೆಮಣೆಯನ್ನ ಏರಿದ್ದ ದೇಶದ ಚಿತ್ರರಂಗದ ಖ್ಯಾತ ನಟಿ ನಯನತಾರ ಈಗ ತಿರುಪತಿ ತಿಮ್ಮಪ್ಪನ್ನ ಸನ್ನಿಧಾನದಲ್ಲಿ ದೊಡ್ಡ ತಪ್ಪನ್ನ ಮಾಡಿದ್ದು ಇದು ಅಭಿಮಾನಿಗಳ ಮತ್ತು ಜನರ ಕೋಪಕ್ಕೆ ಕಾರಣವಾಗಿದೆ. ನಟಿ ನಯನತಾರ ಮಾಡಿದ ಈ ತಪ್ಪಿಗೆ ಬಹಳ ಟೀಕೆ ವ್ಯಕ್ತವಾಗಿದೆ. ಮದುವೆಯ ಮರುದಿನವೇ ನಟಿ ಈ ತಪ್ಪನ್ನ ಮಾಡಿದ್ದು ಇದನ್ನ ನೋಡಿದ ಅಭಿಮಾನಿಗಳಿಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ.

ಹಾಗಾದರೆ ಮದುವೆಯ ನಂತರ ತಿಮ್ಮಪ್ಪನ್ನ ದರ್ಶನ ಪಡೆಯಲು ಹೋದ ನಟಿ ನಯನತಾರ ಮಾಡಿದ ತಪ್ಪೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆನೋಡಿ. ಹೌದು ಮದುವೆಯಾದ ನಂತರ ದಂಪತಿಗಳು ದೇವರ ದರ್ಶನವನ್ನ ಮಾಡುವುದು ಸರ್ವೇ ಸಾಮಾನ್ಯ ಮತ್ತು ಅದೇ ರೀತಿಯಲ್ಲಿ ನಟಿ ನಯನತಾರ ದಂಪತಿಗಳು ಮದುವೆಯ ನಂತರ ತಿರುಪತಿ ತಿಮ್ಮಪ್ಪನ ದರ್ಶನವನ್ನ ಮಾಡಲು ಬಂದಿದ್ದಾರೆ. ಸಾಂಪ್ರದಾಯಕ ಉಡುಪಿನಲ್ಲಿಯೇ ದೇವಸ್ಥಾನಕ್ಕೆ ಪ್ರವೇಶವನ್ನ ಮಾಡಿದ ನಯನತಾರ ಮತ್ತು ವಿಘ್ನೇಶ್ ಧವನ್ ಅವರು ದೇವಸ್ಥಾನಕ್ಕೆ ಪ್ರವೇಶ ಮಾಡುವ ಸಮಯದಲ್ಲಿ ದೊಡ್ಡ ಎಡವಟ್ಟು ಮಾಡಿಕೊಂಡಿದ್ದಾರೆ.

Nayanatara in tirupati

ಹೌದು ನಟಿ ನಯನತಾರ ಅವರು ದೇವಸ್ಥಾನಕ್ಕೆ ಪ್ರವೇಶ ಮಾಡುವ ಸಮಯದಲ್ಲಿ ಚಪ್ಪಲಿಯನ್ನ ಧರಿಸಿಕೊಂಡು ಬಂದಿದ್ದು ಇದು ಜನರ ಕೋಪಕ್ಕೆ ದಾರಿಮಾಡಿಕೊಟ್ಟಿದೆ. ಹೌದು ನಟಿ ನಯನತಾರ ದೇವಸ್ಥಾನದ ಆವರಣದ ಒಳಗೆ ಚಪ್ಪಲಿಯನ್ನ ಹಾಕಿಕೊಂಡು ಬಂದು ದೊಡ್ಡ ಎಡವಟ್ಟು ಮಾಡಿಕೊಂಡಿದ್ದಾರೆ. ಪತಿ ವಿಘ್ನೇಶ್ ಅವರು ಬರಿ ಕಾಲಿನಲ್ಲಿ ಬಂದರೆ ನಯನತಾರ ಮಾತ್ರ ಚಪ್ಪಲಿ ಧರಿಸಿಕೊಂಡೇ ಬಂದಿದ್ದಾರಂತೆ.

ನಟಿ ನಯನತಾರ ಚಪ್ಪಲಿ ಧರಿಸಿಕೊಂಡು ಬಂದ ಫೋಟೋ ವೈರಲ್ ಆಗುತ್ತಿದ್ದಂತೆ ಭಕ್ತರು ಕೋಪಗೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ಸಕತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಇನ್ನು ದೇವಸ್ಥಾನದಲ್ಲಿ ಜನರು ಆಕ್ರೋಶಕ್ಕೆ ಒಳಗಾಗುತ್ತಿದಂತೆ ತಿರುಮಲ ಅಧಿಕಾರಿಗಳು ಮಧ್ಯೆ ಪ್ರವೇಶಿಸಿ, ನಯನತಾರಾ ಚಪ್ಪಲಿ ಧರಿಸಿ ಓಡಾಡಿದ ಸ್ಥಳದಲ್ಲಿ ಭಕ್ತರಿಗೆ ಪಾದರಕ್ಷೆಗಳನ್ನು ತೊಡಲು ಅವಕಾಶವಿದೆ ಎಂದು ಹೇಳಿದ್ದಾರೆ. ಸದ್ಯ ಇದನ್ನ ಕೇಳಿದ ಭಕ್ತರು ದಿನಕ್ಕೆ ಒಂದು ನಿಯಮ ಬರುತ್ತದೆ ಎಂದು ಹೇಳಿ ತಮ್ಮ ಕೋಪವನ್ನ ವ್ಯಕ್ತಪಡಿಸಿದ್ದಾರೆ. ಸ್ನೇಹಿತರೆ ನಯನತಾರ ಮಾಡಿದ ಈ ತಪ್ಪಿನ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.

Join Nadunudi News WhatsApp Group

Nayanatara in tirupati

Join Nadunudi News WhatsApp Group