ಎಲ್ಲರಿಗೂ ಸಿಗಲಿದೆ ಉಚಿತವಾಗಿ ಗ್ಯಾಸ್ ಸಿಲಿಂಡರ್, ಬಿಪಿಎಲ್ ಕಾರ್ಡ್ ಇದ್ದವರಿಗೆ ಬಂಪರ್ ಆಫರ್.

ದೇಶದಲ್ಲಿ ದಿನದಿಂದ ದಿನಕ್ಕೆ ಹೊಸ ಹೊಸ ಯೋಜನೆಯನ್ನ ಜಾರಿಗೆ ತರಲಾಗುತ್ತಿದೆ ಎಂದು ಹೇಳಬಹುದು. ದೇಶದಲ್ಲಿ ಇರುವ ಬಡಜನರ ಅನುಕೂಲದ ದೃಷ್ಟಿಯಿಂದ ದೇಶದಲ್ಲಿ ಹಲವು ಯೋಜನನೆಯನ್ನ ಜಾರಿಗೆ ತರಲಾಗಿದ್ದು ಹಲವು ಯೋಜನೆಗಳ ಲಾಭವನ್ನ ಜನರು ಪಡೆದುಕೊಳ್ಳುತ್ತಾರೆ ಅನ್ನುವುದು ಬಹಳ ಸಂತಸದ ವಿಷಯವಾಗಿದೆ ಎಂದು ಹೇಳಬಹುದು. ಇನ್ನು ನಿಮಗೆಲ್ಲ ತಿಳಿದಿರುವ ಹಾಗೆ ದೇಶದಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಮುಖವಾದ ಯೋಜನೆಯಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನೆ ಕೂಡ ಒಂದು ಎಂದು ಹೇಳಬಹುದು.

ಈ ಯೋಜನೆಯಲ್ಲಿ ಅಡಿಯಲ್ಲಿ ದೇಶದಲ್ಲಿ ಬಡತನ ರೇಖೆಗಿಂತ ಕೆಳಗೆ ಇರುವ ಜನರಿಗೆ ಉಚಿತವಾಗಿ ಗ್ಯಾಸ್ ಸಿಲಿಂಡರ್ ಗಳನ್ನ ನೀಡಲಾಗುತ್ತದೆ ಮತ್ತು ಈ ಯೋಜನೆಯ ಅಡಿಯಲ್ಲಿ ದೇಶದಲ್ಲಿ ಕೋಟ್ಯಂತರ ಜನರು ಉಚಿತ ಗ್ಯಾಸ್ ಸಿಲಿಂಡರ್ ಪಡೆದುಕೊಂಡಿದ್ದಾರೆ ಎಂದು ಹೇಳಬಹುದು. ಇನ್ನು ಈಗ ಮತ್ತೆ ದೇಶದಲ್ಲಿ ಬಿಪಿಎಲ್ ಕಾರ್ಡುಗಳನ್ನ ಹೊಂದಿರುವ ಜನರಿಗೆ ಕೇಂದ್ರ ಸರ್ಕಾರ ಬಂಪರ್ ಸಿಹಿ ಸುದ್ದಿಯನ್ನ ನೀಡಿದ್ದು ಜನರು ಈಗ ಅರ್ಜಿ ತುಂಬಿಸಿ ಈ ಯೋಜನೆಯ ಲಾಭವನ್ನ ಪಡೆದುಕೊಳ್ಳಬಹುದಾಗಿದೆ. ಹಾಗಾದರೆ ಏನದು ಬಂಪರ್ ಸಿಹಿ ಸುದ್ದಿ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಮಾಹಿತಿಯನ್ನ ದೇಶದಲ್ಲಿ ಬಿಪಿಎಲ್ ಕಾರ್ಡುಗಳನ್ನ ಹೊಂದಿರುವ ಎಲ್ಲರಿಗೂ ತಲುಪಿಸಿ.

New application of Ujwala scheme

ಹೌದು ಸ್ನೇಹಿತರೆ 2021 ರ ಬಜೆಟ್ ನಲ್ಲಿ ದೇಶದ ಹಣಕಾಸು ಸಚಿವೆ ಆಗಿರುವ ನಿರ್ಮಲ ಸೀತಾರಾಮನ್ ಅವರು ದೇಶದಲ್ಲಿ ಪ್ರಸ್ತುತ ವರ್ಷದಲ್ಲಿ ಬಡತನ ರೇಖೆಗಿಂತ ಕೆಳಗೆ ಇರುವ ಜನರಿಗೆ ಮತ್ತೆ ಉಚಿತವಾಗಿ ಗ್ಯಾಸ್ ಸಿಲಿಂಡರ್ ಸಂಪರ್ಕ ಕಲ್ಪಿಸಿಕೊಡಲಾಗುತ್ತದೆ ಎಂದು ಹೇಳಿದ್ದಾರೆ. ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ 2021 ಜನವರಿ 31 ರವರೆಗೆ ಈ ಯೋಜನೆಯಡಿ 83 ಮಿಲಿಯನ್ ಎಲ್ಪಿಜಿ ಸಂಪರ್ಕಗಳನ್ನು ವಿತರಿಸಲಾಗಿದೆ.

ಬಜೆಟ್ ಪ್ರಕಟಣೆಯ ಪ್ರಕಾರ ಪ್ರಸಕ್ತ ಹಣಕಾಸು ವರ್ಷದಲ್ಲಿ ಆ ರಾಜ್ಯಗಳು ಮತ್ತು ಪ್ರದೇಶಗಳಲ್ಲಿ ಹೊಸ ಅನಿಲ ಸಂಪರ್ಕಗಳನ್ನು ವಿತರಿಸಲಾಗುವುದು. ಉಜ್ವಾಲಾ ಯೋಜನೆಯಡಿ ನೀವು ಎಲ್‌ಪಿಜಿ ಸಂಪರ್ಕವನ್ನು ತೆಗೆದುಕೊಂಡಾಗ ಒಲೆಯೊಂದಿಗಿನ ಒಟ್ಟು ವೆಚ್ಚ 3,200 ರೂ. ಇದರಲ್ಲಿ 1,600 ರೂ.ಗಳ ಸಬ್ಸಿಡಿಯನ್ನು ಸರ್ಕಾರ ನೇರವಾಗಿ ನೀಡುತ್ತದೆ ಮತ್ತು ತೈಲ ಕಂಪನಿಗಳು ಉಳಿದ 1,600 ರೂ.ಗಳನ್ನು ನೀಡುತ್ತವೆ, ಆದರೆ ಗ್ರಾಹಕರು ತೈಲ ಕಂಪನಿಗಳಿಗೆ 1,600 ರೂಗಳನ್ನು ಇಎಂಐ ರೂಪದಲ್ಲಿ ಪಾವತಿಸಬೇಕಾಗುತ್ತದೆ.

Join Nadunudi News WhatsApp Group

New application of Ujwala scheme

ಇನ್ನು ಈ ಯೋಜನೆಯ ಲಾಭವನ್ನ ಪಡೆದುಕೊಳ್ಳಲು ಮುಖ್ಯವಾಗಿ ಬಿಪಿಎಲ್ ಕಾರ್ಡ್ ಬೇಕು ಮತ್ತು ಮಹಿಳೆಯ ಹೆಸರಿನಲ್ಲಿ ಮಾತ್ರ ಈ ಯೋಜನೆಯ ಲಾಭವನ್ನ ಪಡೆದುಕೊಳ್ಳಬಹುದಾಗಿದೆ. ಇದಕ್ಕಾಗಿ ನೀವು ಕೆವೈಸಿ ಫಾರ್ಮ್ ಅನ್ನು ಭರ್ತಿ ಮಾಡಿ ಹತ್ತಿರದ ಎಲ್ಪಿಜಿ ಕೇಂದ್ರಕ್ಕೆ ಸಲ್ಲಿಸಬೇಕು. ಉಜ್ವಾಲಾ ಯೋಜನೆಯಲ್ಲಿ ಅರ್ಜಿ ಸಲ್ಲಿಸಲು 2 ಪುಟಗಳ ಫಾರ್ಮ್, ಅಗತ್ಯ ದಾಖಲೆಗಳು, ಹೆಸರು, ವಿಳಾಸ, ಜನ ಧನ್ ಬ್ಯಾಂಕ್ ಖಾತೆ ಸಂಖ್ಯೆ, ಆಧಾರ್ ಸಂಖ್ಯೆ ಇತ್ಯಾದಿ ಅಗತ್ಯವಿದೆ. ಸ್ನೇಹಿತರೆ ಈ ಮಾಹಿತಿಯನ್ನ ದೇಶದಲ್ಲಿ ಬಿಪಿಎಲ್ ಕಾರ್ಡುಗಳನ್ನ ಹೊಂದಿರುವ ಎಲ್ಲರಿಗೂ ತಲುಪಿಸಿ ಮತ್ತು ಈ ಉಜ್ವಲ ಯೋಜನೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group