ಪ್ರತಿ ತಿಂಗಳು ಸಂಬಳ ಪಡೆದುಕೊಳ್ಳುವ ಎಲ್ಲರಿಗೂ ಏಪ್ರಿಲ್ 1 ರಿಂದ ಹೊಸ ನಿಯಮ ಜಾರಿಗೆ, ಕೇಂದ್ರದ ಆದೇಶ.

ದೇಶದಲ್ಲಿ ಇರುವ ಹೆಚ್ಚಿನ ಜನರು ಪ್ರತಿ ತಿಂಗಳು ಸಂಬಳವನ್ನ ಪಡೆದುಕೊಳ್ಳುತ್ತಾರೆ ಎಂದು ಹೇಳಬಹುದು. ಹೌದು ಜನರು ತಾವು ಕೆಲಸ ಮಾಡುವ ಸಂಸ್ಥೆಯಿಂದ ಪ್ರತಿ ತಿಂಗಳು ಇಂತಿಷ್ಟು ಪ್ರಮಾಣದಲ್ಲಿ ಸಂಬಳವನ್ನ ಪಡೆದುಕೊಳ್ಳುತ್ತಾರೆ. ಇನ್ನು ಕೆಲವು ಜನರು ಬಹಳ ಹೆಚ್ಚಿನ ಸಂಬಳವನ್ನ ಪಡೆದುಕೊಂಡರೆ ಇನ್ನೂ ಕೆಲವರು ಕಡಿಮೆ ಸಂಬಳವನ್ನ ಪಡೆದುಕೊಳ್ಳುತ್ತಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ವಿಷಯಕ್ಕೆ ಬರುವುದಾದರೆ ಇದೆ ತಿಂಗಳ 31 ನೇ ತಾರೀಕಿನಿಂದ ಈ ವರ್ಷದ ಆರ್ಥಿಕ ವರ್ಷ ಮುಗಿಯಲಿದ್ದು ನಾವು ಹೊಸ ಆರ್ಥಿಕ ವರ್ಷಕ್ಕೆ ಕಾಲಿಡುತ್ತೇವೆ ಎಂದು ಹೇಳಬಹುದು. ಇನ್ನು ಹೊಸ ಆರ್ಥಿಕ ವರ್ಷದಲ್ಲಿ ಅನೇಕ ಬದಲಾವಣೆಗಳು ಆಗಲಿದ್ದು ಜನರು ಈ ಬದಲಾವಣೆಗಳಿಗೆ ಹೊಂದಿಕೊಂಡು ಜೀವನವನ್ನ ಮಾಡಬೇಕು ಎಂದು ಹೇಳಬಹುದು.

ಇನ್ನು ಪ್ರತಿ ತಿಂಗಳು ಸಂಬಳವನ್ನ ಪಡೆದುಕೊಳ್ಳವನ್ನ ತೆಗೆದುಕೊಳ್ಳುವ ನಿಯಮದಲ್ಲಿ ದೊಡ್ಡ ಬದಲವೇ ಆಗಲಿದೆ ಎಂದು ಹೇಳಬಹುದು. ಹಾಗಾದರೆ ಏನದು ಬದಲಾವಣೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ ನಿಮ್ಮ ವೇತನ ರಚನೆ, ಇಪಿಎಫ್ ಕೊಡುಗೆ, LTC ಯಿಂದ ಹಿಡಿದು ಐಟಿಆರ್ ಫೈಲಿಂಗ್ ವರೆಗಿನ ಬಹುತೇಕ ನಿಯಮಗಳು ಏಪ್ರಿಲ್ 1ರಿಂದ ಬದಲಾಗಲಿದೆ.

New Financial year

ಏಪ್ರಿಲ್ 1ರಿಂದ ಹೊಸ ವೇತನ ಸಂಹಿತೆ ಮಸೂದೆ 2021 ಜಾರಿಗೆ ತರಲು ಸರ್ಕಾರ ಯೋಜನೆ ರೂಪಿಸಿರುವುದರಿಂದ ವೇತನದಲ್ಲಿ ಭಾರಿ ಬದಲಾವಣೆಯಾಗಲಿದೆ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಪಿಎಫ್ಒ ಕೊಡುಗೆ ಮತ್ತು ಆದಾಯ ತೆರಿಗೆ ಸಲ್ಲಿಕೆ ನಿಯಮಗಳಲ್ಲಿ ಬದಲಾವಣೆಯಾಗಲಿದೆ ಎಂದು ತಿಳಿಸಿದ್ದಾರೆ. ಇನ್ನು ನ್ಯೂ ವೇಜ್ ಕೋಡ್ ಪ್ರಕಾರ ಒಂದು ವೇಳೆ ಇದನ್ನು ಅನುಷ್ಠಾನಗೊಳಿಸಿದರೆ ನಿಮ್ಮ CTCಯಲ್ಲಿ ಮೂಲ ವೇತನದ ಪಾಲು ಶೇಕಡಾ 50 ಅಥವಾ ಅದಕ್ಕಿಂತ ಹೆಚ್ಚು ಇರಬೇಕು.ನಿಮ್ಮ ಸಂಬಳದ ವಿವರಗಳಲ್ಲಿ ಮೂಲ ವೇತನವು ಶೇಕಡಾ 50ಕ್ಕಿಂತ ಕಡಿಮೆ ಇದ್ದರೆ ಅದು ಶೀಘ್ರದಲ್ಲೇ ಬದಲಾಗಲಿದೆ.

ಹೊಸ ನಿಯಮಗಳನ್ನು ಜಾರಿಗೆ ತಂದಾಗ ನಿಮ್ಮ ಮೂಲ ವೇತನದ ಜೊತೆಗೆ ನಿಮ್ಮ CTC ಕೂಡ ಹೆಚ್ಚಾಗಬಹುದು. ಉದ್ಯೋಗಿಗಳು ರಜೆ, ಪ್ರಯಾಣ, ಮನೆ ಬಾಡಿಗೆ, ಓವರ್ ಟೈಮ್ ಮತ್ತು ಸಾಗಣೆ ಯಂತಹ ಭತ್ಯೆಗಳನ್ನು ಉಳಿದ ಶೇ.50ರಷ್ಟು ಸಿಟಿಸಿಗೆ ನೀಡಬೇಕು. ಸದ್ಯ ನಿಮ್ಮ ಮೂಲ ವೇತನದ ಶೇ.12ರಷ್ಟು ಪಿಎಫ್ ಗೆ ಹೋಗುತ್ತದೆ. ಮೂಲ ವೇತನವು ಸಿಟಿಸಿಯ ಶೇ.50ರಷ್ಟು ಆದಾಗ, ಪಿಎಫ್ ನ ವಂತಿಗೆಯೂ ಹೆಚ್ಚುತ್ತದೆ. ಉದಾಹರಣೆಗೆ ಮಾಸಿಕ ಸಿಟಿಸಿ 20,000 ರೂ., 10,000 ರೂ ಮೂಲ ವೇತನ ಆಗಿದ್ದರೆ, 1,200 ರೂ ಪಿಎಫ್ ಖಾತೆಗೆ ಹೋಗುತ್ತದೆ. ಗ್ರಾಚ್ಯುಟಿ ನಿಯಮದಲ್ಲಿ ಬದಲಾವಣೆ : ಹೊಸ ಕಾರ್ಮಿಕ ಕಾನೂನುಗಳಲ್ಲಿ ಗ್ರಾಚ್ಯುಯಿಟಿಯ ಹೊಸ ನಿಯಮಗಳನ್ನು ಮಾಡಲಾಗಿದೆ.

Join Nadunudi News WhatsApp Group

New Financial year

ಈಗ, ಒಂದೇ ಕಂಪನಿಯಲ್ಲಿ 5 ವರ್ಷಗಳ ನಿರಂತರ ಕೆಲಸದ ನಂತರ ನೌಕರರು ಗ್ರಾಚ್ಯುಟಿ ಪಡೆಯಲು ಅರ್ಹರಾಗಿರುತ್ತಾರೆ, ಆದರೆ ಹೊಸ ಕಾನೂನಿನಲ್ಲಿ, ನೌಕರರು ಒಂದು ವರ್ಷ ಕೆಲಸ ಮಾಡಿದ್ದರೂ ಸಹ ಗ್ರಾಚ್ಯುಟಿ ಪಡೆಯಲು ಅರ್ಹರಾಗಿರುತ್ತಾರೆ. 2021ರ ಏಪ್ರಿಲ್ 1ರಿಂದ ಭವಿಷ್ಯ ನಿಧಿಗೆ ವಾರ್ಷಿಕ 2.5 ಲಕ್ಷ ರೂ ಗಿಂತ ಹೆಚ್ಚಿನ ಮೊತ್ತದ ಉದ್ಯೋಗಿಗಳ ವಂತಿಗೆಗಳ ಮೇಲಿನ ಬಡ್ಡಿಗೆ ತೆರಿಗೆ ಕಟ್ಟಲಾಗುವುದು. ಹಿರಿಯ ನಾಗರಿಕರಿಗೆ ಆದಾಯ ತೆರಿಗೆ ನಿಯಮದ ಪ್ರಕಾರ ವಯಸ್ಸು 75 ಕ್ಕಿಂತ ಮೇಲ್ಪಟ್ಟು ಇರುವವರು ಮತ್ತು ನಿಶ್ಚಿತ ಠೇವಣಿಯಿಂದ ಪಿಂಚಣಿ ಆದಾಯ ಮತ್ತು ಬಡ್ಡಿ ಹೊಂದಿರುವ ವ್ಯಕ್ತಿಗಳು ಒಂದೇ ಬ್ಯಾಂಕಿನಲ್ಲಿ ಬಡ್ಡಿ ಆದಾಯ ವನ್ನು ಮಾತ್ರ ಹೊಂದಿರುವ ವ್ಯಕ್ತಿಗಳು ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡುವ ಅಗತ್ಯವಿಲ್ಲ. ಬ್ಯಾಂಕ್ ತಾನು ಪಾವತಿಸಬೇಕಿರುವ ಆದಾಯ ತೆರಿಗೆಯನ್ನು ಕಡಿತಗೊಳಿಸಿ ಸರ್ಕಾರಕ್ಕೆ ಠೇವಣಿ ಇಡುತ್ತದೆ.

New Financial year

Join Nadunudi News WhatsApp Group