TOD Rule: ಇನ್ನುಮುಂದೆ ಅತೀ ಅಗ್ಗದ ಬೆಲೆಯಲ್ಲಿ ಸಿಗಲಿದೆ ಕರೆಂಟ್, ಮೋದಿ ಸರ್ಕಾರದ ಹೊಸ ಯೋಜನೆ ಜಾರಿಗೆ.

ವಿದ್ಯುತ್ ದರ ಕಡಿಮೆ ಮಾಡಲು ಹೊಸ ನಿಯಮ ಜಾರಿಗೆ ತಂದ ಕೇಂದ್ರ ಸರ್ಕಾರ.

New Rule For Electricity Bill: ಇತ್ತೀಚಿನ ದಿನಗಳಲ್ಲಿ ಜನಸಾಮಾನ್ಯರು ವಿದ್ಯುತ್ ದರ (Electricity Bill) ಏರಿಕೆಯಿಂದ ಕಂಗಾಲಾಗಿದ್ದಾರೆ. ರಾಜ್ಯ ಸರ್ಕಾರ ಜನತೆಗೆ ಉಚಿತ ವಿದ್ಯುತ್ (Free Electricity) ನೀಡುವ ಕುರಿತು ಘೋಷಣೆ ಹೊರಡಿಸಿತ್ತು. ಯೋಜನೆ ಜಾರಿಯಾಗುವ ಮುನ್ನವೇ ರಾಜ್ಯದ ಜನತೆಗೆ ಬೆಲೆ ಏರಿಕೆಯ ಪರಿಣಾಮವನ್ನು ಎದುರಿಸಬೇಕಾಗಿದೆ.

ಇನ್ನು ರಾಜ್ಯದ ಜನತೆ ವಿದ್ಯುತ್ ದರ ಇಳಿಕೆ ಮಾಡುವಂತೆ ಈಗಾಗಲೇ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದಾರೆ. ಇದೀಗ ವಿದ್ಯುತ್ ದರ ಇಳಿಕೆಯ ಕುರಿತು ಸರ್ಕಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಈ ಕುರಿತು ಒಂದಿಷ್ಟು ವಿವರಗಳನ್ನು ತಿಳಿಯೋಣ.

Important decision of the government regarding reduction of electricity rates
Image Credit: Ilougemedia

ವಿದ್ಯುತ್ ದರ ಇಳಿಕೆಯ ಕುರಿತು ಸರ್ಕಾರ ಮಹತ್ವದ ನಿರ್ಧಾರ
ವಿದ್ಯುತ್ ದರದ ಸತತ ಏರಿಕೆಯ ಕಾರಣ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ವಿದ್ಯುತ್ ದರ ಇಳಿಕೆಯ ಕುರಿತಾಗಿ ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ಸಿಹಿ ಸುದ್ದಿ ನೀಡಿದೆ.

ವಿದ್ಯುತ್ ದರ ಕಡಿಮೆ ಮಾಡಲು ಕೇಂದ್ರ ಸರ್ಕಾರ ಹೊಸ ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಿದೆ. ಮೋದಿ ಸರ್ಕಾರದ ಈ ಹೊಸ ಯೋಜನೆಯಿಂದಾಗಿ ವಿದ್ಯುತ್ ಬಿಲ್ ನಲ್ಲಿ ಗಣನೀಯ ಇಳಿಕೆ ಕಾಣಬಹುದಾಗಿದೆ.

ಕೇಂದ್ರ ಸರ್ಕಾರದಿಂದ ‘ದಿನದ ಸಮಯ’ ನಿಯಮ ಜಾರಿ
ವಿದ್ಯುತ್ ದರ ಕಡಿಮೆ ಮಾಡಲು ಕೇಂದ್ರ ಸರ್ಕಾರ ದಿನದ ಸಮಯ (ಟಿಓಡಿ) ನಿಯಮವನ್ನು ಜಾರಿಗೊಳಿಸಿದೆ. ಈ ಹೊಸ ನಿಯಮ ಜಾರಿಯಾದರೆ ದೇಶದ ಪ್ರತಿ ಗ್ರಾಹಕರು ಹಗಲಿನ ಸಮಯದಲ್ಲಿ ವಿದ್ಯುತ್ ಬಳಕೆಯನ್ನು ನಿರ್ವಹಿಸುವ ಮೂಲಕ ತಮ್ಮ ವಿದ್ಯುತ್ ಬಿಲ್ ಗಳಲ್ಲಿ ಶೇ. 20 ರಷ್ಟು ಉಳಿಸಲು ಸಾಧ್ಯವಾಗುತ್ತದೆ. ಇನ್ನುಮುಂದೆ ದಿನದ ವಿವಿಧ ಸಮಯಗಳಿಗೆ ವಿವಿಧ ರೀತಿಯ ವಿದ್ಯುತ್ ದರಗಳು ಅನ್ವಯವಾಗಲಿದೆ.

Join Nadunudi News WhatsApp Group

Implementation of 'Time of Day' rule by Central Government
Image Credit: Whatshot

ಮುಂದಿನ ವರ್ಷದಲ್ಲಿ ಅಗ್ಗದ ಬೆಲೆಯಲ್ಲಿ ಸಿಗಲಿದೆ ವಿದ್ಯುತ್
ಏಪ್ರಿಲ್ 1 , 2024 ರಿಂದ ಟಿಓಡಿ ನಿಯಮ ಅನ್ವಯವಾಗಲಿದೆ. ಇನ್ನು 10kW ಮತ್ತು ಅದಕ್ಕಿಂತ ಹೆಚ್ಚಿನ ಬೇಡಿಕೆಯಿರುವ ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕರಿಗೆ ಈ ಹೊಸ ವ್ಯವಸ್ಥೆ ಅನ್ವಯಿಸಲಿದೆ.

ಏಪ್ರಿಲ್ 1 , 2025 ರಿಂದ ಕೃಷಿ ಹೊರತುಪಡಿಸಿ ಎಲ್ಲ ಇತರ ಗ್ರಾಹಕರಿಗೆ ಈ ನಿಯಮ ಅನ್ವಯಿಸಲಿದೆ. ಇನ್ನು ಸ್ಮಾರ್ಟ್ ಮೀಟರ್ ಹೊಂದಿರುವ ಗ್ರಾಹಕರಿಗೆ ಅಂತಹ ಮೀಟರ್ ಗಳನ್ನೂ ಸ್ಥಾಪಿಸಿದಾಗ ಮಾತ್ರ TOD ವ್ಯವಸ್ಥೆಯು ಅನ್ವಯಿಸುತ್ತದೆ.

Join Nadunudi News WhatsApp Group