ಇಂದಿನಿಂದ ರಾತ್ರಿ ಸಂಪೂರ್ಣ ಲಾಕ್ ಡೌನ್, ಶನಿವಾರ ಭಾನುವಾರ ಏನಿರುತ್ತೆ ಏನಿರಲ್ಲ ಗೊತ್ತಾ.

ಕರೋನ ಮಹಾಮಾರಿ ದೇಶದಲ್ಲಿ ಯಾವ ರೀತಿಯಲ್ಲಿ ಹರಡುತ್ತಿದೆ ಅನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರ ಆಗಿದೆ. ಹೌದು ದೇಶದಲ್ಲಿ ಕರೋನ ಮಹಾಮಾರಿಯ ಆರ್ಭಟ ಬಹಳ ಜಾಸ್ತಿ ಆಗುತ್ತಿದ್ದು ಸಾಯುವವರ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಬಹಳ ಜಾಸ್ತಿ ಆಗುತ್ತಿದೆ ಎಂದು ಹೇಳಿದರೆ ತಪ್ಪಾಗಲ್ಲ. ದೇಶದಲ್ಲಿ ಕರೋನ ಮಹಾಮಾರಿ ನಿಯಂತ್ರಣ ಮಾಡಲು ಎಷ್ಟೇ ಕ್ರಮವನ್ನ ಕೈಗೊಂಡರು ಕೂಡ ದೇಶದಲ್ಲಿ ಕರೋನ ಮಹಾಮಾರಿ ಹರಡುತ್ತಿರುವುದನ್ನ ಕಡಿಮೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಬಹುದು. ಜನರು ಸರ್ಕಾರ ನೀಡಿದ ಕೆಲವು ಮಾರ್ಗ ಸೂಚಿಯನ್ನ ಪಾಲನೆ ಮಾಡದೆ ಇರುವ ಹಿನ್ನಲೆಯಲ್ಲಿ ದೇಶದಲ್ಲಿ ಕರೋನ ಮಹಾಮಾರಿಯ ಸೋಂಕು ದಿನದಿಂದ ದಿನಕ್ಕೆ ಬಹಳ ವೇಗವಾಗಿ ಹರಡುತ್ತಿದ್ದು ಜನರು ಮತ್ತೆ ಶಾಕ್ ಆಗಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ.

ಇನ್ನು ಕರ್ನಾಟಕದಲ್ಲಿ ಕೂಡ ಕರೋನ ಮಹಾಮಾರಿಯ ಸೋಂಕು ಬಹಳ ವೇಗವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಕರ್ನಾಟಕದಲ್ಲಿ ಬಹಳ ಕ್ರಮವನ್ನ ಜಾರಿಗೆ ತರಲಾಗಿದ್ದು ಜನರು ಇದಕ್ಕೆ ತಲೆಬಾಗಬೇಕಾಗಿದೆ ಎಂದು ಹೇಳಬಹುದು. ಇನ್ನು ಇಂದಿನಿಂದ ಕರ್ನಾಟಕದಲ್ಲಿ ರಾತ್ರಿ ಲಾಕ್ ಡೌನ್ ಘೋಷಣೆ ಮಾಡಲಾಗಿದ್ದು ಜನರು ರಾತ್ರಿ ಸಮಯದಲ್ಲಿ ಮನೆಯಲ್ಲಿಯೇ ಇರಬೇಕು ಎಂದು ಸರ್ಕಾರ ಆದೇಶವನ್ನ ಕೂಡ ನೀಡಿದೆ. ಹಾಗಾದರೆ ಇಂದಿನಿಂದ ಲಾಕ್ ಡೌನ್ ಹೇಗಿರಲಿದೆ ಮತ್ತು ಲಾಕ್ ಡೌನ್ ನಲ್ಲಿ ಏನು ಸಿಗಲಿದೆ ಮತ್ತು ಏನು ಸಿಗಲ್ಲ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಲಾಕ್ ಡೌನ್ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

News of Carona lockdown

ಹೌದು ಸ್ನೇಹಿತರೆ ರಾಜ್ಯದಲ್ಲಿ ರಾತ್ರಿ ಮತ್ತು ವೀಕೆಂಡ್ ಲಾಕ್ ಡೌನ್ ಅನ್ನು ಜಾರಿಗೆ ತರಲಾಗಿದೆ, ಇಂದಿನಿಂದ ಮೇ 4ರ ತನಕ ‘ವೀಕ್‌ ಎಂಡ್‌ ಕರ್ಫ್ಯೂ’ ಜಾರಿಗೊಳಿಸಲಾಗುವುದರ ಬಗ್ಗೆ ತೀರ್ಮಾನ ಮಾಡಲಾಗಿದೆ. ರಾತ್ರಿ 9 ಘಂಟೆಯಿಂದ ಬೆಳಿಗ್ಗೆ 6 ಘಂಟೆಯ ತನಕ ಈ ಕರ್ಪ್ಯೂ ಜಾರಿಯಲ್ಲಿ ಇರಲಿದೆ ಮತ್ತು ಶುಕ್ರವಾರ ರಾತ್ರಿ 9 ಘಂಟೆಯಿಂದ ಸೋಮವಾರ ಬೆಳಿಗ್ಗೆ 6 ಘಂಟೆಯ ತನಕ ಈ ಕರ್ಪ್ಯೂ ಜಾರಿಯಲ್ಲಿ ಇರಲಿದೆ. ಈ ಬಗ್ಗೆ ನಿನ್ನೆ ಮುಕ್ತಾಯವಾದ ರಾಜ್ಯಪಾಲರ ನೇತೃತ್ವದಲ್ಲಿ ಸರ್ವಪಕ್ಷ ಸಭೆ ಯಲ್ಲಿ ರಾಜ್ಯದಲ್ಲಿ ಪ್ರಸ್ತುತ ಕರೋನ ಸ್ಥಿತಿಗತಿಗಳ ಬಗ್ಗೆ ಸಚಿವರು ರಾಜ್ಯಪಾಲರಿಗೆ ಮಾಹಿತಿ ನೀಡಿದರು. ನಿನ್ನೆ ಸಭೆಯಲ್ಲಿ ಭಾಗವಹಿಸಿದ್ದ ಎಲ್ಲರ ಒಮ್ಮತದ ತೀರ್ಮಾನದ ಮೇರೆಗೆ ಹಲವು ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ.

ಇನ್ನು ಈ ಕರ್ಪ್ಯೂ ಬಗ್ಗೆ ಮಾಧ್ಯಮಗಳಿಗೆ ಮಾಹಿತಿಯನ್ನ ನೀಡಿದ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌ ಅವರು ಸಿನಿಮಾ ಹಾಲ್‌ಗಳು ಸ್ವೀಮಿಂಗ್‌ ಪೂಲ್‌ಗಳನ್ನು ಬಂದ್ ಮಾಡಲಾಗಿದೆ ಮತ್ತು ಬಾರ್ ಅಂಡ್ ರೆಸ್ಟೋರೆಂಟ್ ಗಳಲ್ಲಿ ಪಾರ್ಸೆಲ್ ನೀಡಲು ಆದೇಶವನ್ನ ನೀಡಲಾಗಿದೆ ಎಂದು ಹೇಳಿದರು. ಇನ್ನು ಕಟಿಂಗ್‌ ಶಾಪ್‌, ಸಲೂನ್‌, ಬ್ಯೂಟಿ ಪಾಲರ್ಸ್‌ ತೆಗೆಯಲು ಅವಕಾಶ. ಮದುವೆಯಲ್ಲಿ 50 ಮಂದಿ ಭಾಗವಹಿಸಲು ಮಾತ್ರ ಅವಕಾಶ ಕೊಡಲಾಗಿದೆ. ಏಪ್ರಿಲ್‌ 23ರ ನಂತರ ಮಾರುಕಟ್ಟೆಗಳನ್ನು ಸ್ಥಳಾಂತರ ಮಾಡಲಾಗುವುದು, ಇದಲ್ಲದೇ ಶಾಲಾ ಕಾಲೇಜುಗಳನ್ನು ಬಂದ್‌ ಮಾಡಲಾಗಿದೆ. ಇನ್ನು ಅಂತ್ಯಸಂಸ್ಕಾರಕ್ಕೆ 20 ಜನರಿಗೆ ಮಾತ್ರ ಅವಕಾಶವನ್ನ ಕೊಡಲಾಗಿದೆ.

Join Nadunudi News WhatsApp Group

News of Carona lockdown

ಮಂದಿರ ಮಸೀದಿ, ಚರ್ಚ್‌ಗಳಲ್ಲಿ ಪೂಜೆ ಮಾಡುವವರಿಗೆ ಕೂಡ ಅವಕಾಶವಿದ್ದು, ಭಕ್ತರಿಗೆ ಅವಕಾಶ ಇರೋದಿಲ್ಲ ಅಂತ ಹೇಳಿದರು. ಇನ್ನೂ ಸರ್ವಪಕ್ಷ ಸಭೆಯಲ್ಲಿ ಸಿಎಂ ಬಿಎಸ್‌ವೈ ಲಾಕ್‌ಡೌನ್‌ ಬಗ್ಗೆ ಸುಳಿವು ನೀಡಿದ್ದರು. ಸಿಎಂ ಸಭೆಯಲ್ಲಿ ಮಾಜಿ ಸಿಎಂ ಸಭೆಯಲ್ಲಿ ನೀಡಿರುವ ಸಲಹೆಗಳನ್ನು ಒಪ್ಪಿಕೊಳ್ಳುವುದಾಗಿ ತಿಳಿಸಿದ್ದು, ರಾಜ್ಯದಲ್ಲಿ ಲಾಕ್‌ಡೌನ್‌ ಮಾಡುವ ಬಗ್ಗೆ ಚರ್ಚಿಸುತ್ತೇವೆ ಅಂತ ಹೇಳಿದ್ದಾರೆ. ಜನತೆಗೆ ಕಷ್ಟವಾದ್ರೂ ಸರಿ ಲಾಕ್‌ಡೌನ್‌ ಬಗ್ಗೆ ಸಚಿವರ ಜೊತೆಗೆ ಚರ್ಚಿಸಿ ಮುಂದಿನ ಕ್ರಮವನ್ನು ಕೈಗೊಳ್ಳಲಾಗುವುದು ಅಂತ ಹೇಳಿದ್ದಾರೆ. ಇನ್ನು ಸಭೆಯಲ್ಲಿ ಅಂತಿಮ ಅಸ್ತ್ರವಾಗಿ ಸಂಪೂರ್ಣ ಲಾಕ್ ಮಾಡಲಾಗುವುದು ಎಂದು ತೀರ್ಮಾನವನ್ನ ಮಾಡಲಾಗಿದೆ.

Join Nadunudi News WhatsApp Group