ಡೆಲಿವರಿ ಬಾಯ್ ಕಾಮರಾಜ್ ಎಫ್‌ಐಆರ್ ದಾಖಲಿಸುತ್ತಿದ್ದಂತೆಯೇ ಈ ಮಹಿಳೆ ಮಾಡಿದ್ದೇನು ಗೊತ್ತಾ, ಶಾಕ್ ಆಗುತ್ತದೆ ನೋಡಿ.

ಸದ್ಯ ಕೆಲವು ದಿನಗಳಿಂದ ಎಲ್ಲಾ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತಿರುವ ವಿಷಯ ಏನು ಅಂದರೆ ಅದೂ ಜೊಮ್ಯಾಟೋ ಬಾಯ್ ಮತ್ತು ಮಹಿಳೆಯ ನಡುವೆ ನಡೆದ ಗಲಾಟೆಯ ವಿಷಯ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಜೊಮ್ಯಾಟೋ ಫುಡ್ ಡೆಲಿವರಿ ಮಾಡುವ ಪುರುಷ ನನ್ನಜೊತೆ ಗಲಾಟೆ ಮಾಡಿ ನನ್ನ ಮೂಗಿಗೆ ಹೊಡೆದು ಗಾಯ ಮಾಡಿದ್ದಾನೆ ಎಂದು ಒಬ್ಬ ಮಹಿಳೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಳು ಮತ್ತು ಪೊಲೀಸ್ ಠಾಣೆಯ ಮೆಟ್ಟಿಲನ್ನ ಕೂಡ ಏರಿದ್ದಳು. ಸದ್ಯ ಕೆಲವು ದಿನಗಳಿಂದ ಈ ಸುದ್ದಿ ಬಹುತೇಕ ಎಲ್ಲಾ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದ್ದವು ಎಂದು ಹೇಳಬಹುದು.

ಇನ್ನು ಈ ವಿಷಯದ ಸತ್ಯ ಸತ್ಯತೆಯನ್ನ ತಿಳಿದುಕೊಳ್ಳಲು ಅನೇಕ ಮುಂದಾಗಿದ್ದು ಕೆಲವು ಜೊಮ್ಯಾಟೋ ಡೆಲಿವರಿ ಮಾಡುವ ಯುವಕನ ಪರ ಮಾತನಾಡಿದರೆ ಇನ್ನು ಕೆಲವು ಕೆಲವು ಯುವತಿಯ ಪರವಾಗಿ ಮಾತನಾಡಿದರು. ಇನ್ನು ಈ ವಿಷಯ ಸುಳ್ಳು ಅಲ್ಲಿ ನಡೆದಿದ್ದೇ ಬೇರೆ ಎಂದು ಜನರಿಗೆ ತಿಳಿದ ನಂತರ ಇಡೀ ರಾಜ್ಯಕ್ಕೆ ರಾಜ್ಯವೇ ಜೊಮ್ಯಾಟೋ ಮಾಡುವ ಯುವಕನ ಪರವಾಗಿ ನಿಂತಿತು ಎಂದು ಹೇಳಬಹುದು ಮತ್ತು ಜೊಮ್ಯಾಟೋ ಕಂಪನಿ ಕೂಡ ತಮ್ಮ ಸದಸ್ಯರ ಪರವಾಗಿ ನಿಂತು ಆತನಿಗೆ ಧೈರ್ಯ ತುಂಬಿತು ಎಂದು ಹೇಳಬಹುದು.

news of Kamaraj

ಆಹಾರ ಡೆಲಿವರಿ ವಿಳಂಬವನ್ನು ಪ್ರಶ್ನಿಸಿದ್ದ ಯುವತಿ ಹಿತೇಶಾ ಚಂದ್ರಾನಿ ಮೇಲೆ ಜೊಮ್ಯಾಟೋ ಡೆಲಿವರಿ ಬಾಯ್ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಮರಾಜ್ ಎಲೆಕ್ಟ್ರಾನಿಕ್ಸ್ ಸಿಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇನ್ನು ಸದ್ಯ ಈ ವಿಷಯಕ್ಕೆ ಸಂಬಂಧಿಸಿದಂತೆ ಈಗ ದೊಡ್ಡ ಶಾಕಿಂಗ್ ಸುದ್ದಿ ಬಂದಿದ್ದು ದೂರು ನೀಡಿದ ಮಹಿಳೆ ಏನು ಮಾಡಿದ್ದಾಳೆ ಎಂದು ತಿಳಿದರೆ ನಿಮಗೆ ಶಾಕ್ ಆಗುವುದು ಗ್ಯಾರೆಂಟಿ ಎಂದು ಹೇಳಬಹುದು. ಹಾಗಾದರೆ ದೂರು ನೀಡಿದ ಮಹಿಳೆ ಮಾಡಿದ್ದೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಹೌದು ಈ ವಿಷಯಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನ ನಡೆಸುತ್ತಿದ್ದು ಇದರ ಇನ್ನಲೆಯಲ್ಲಿ ಪೊಲೀಸರು ಜೊಮ್ಯಾಟೋ ಡೆಲಿವರಿ ಬಾಯ್ ದೂರು ನೀಡಿದ ಮಹಿಳೆಯನ್ನ ಸಂಪರ್ಕ ಮಾಡಲು ಪ್ರಯತ್ನ ಮಾಡಿದ್ದಾರೆ, ಆದರೆ ಈಗ ಆ ಮಹಿಳೆ ಬೆಂಗಳೂರಿನಿಂದ ಕಾಲ್ಕಿತ್ತಿರುವುದು ಅಂದರೆ ಓಡಿಹೋಗಿರುವ ವಿಷಯ ಬೆಳಕಿಗೆ ಬಂದಿದೆ. ದೂರಿನ ಹಿನ್ನಲೆಯಲ್ಲಿ ಹಿತೇಶ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲು ಸಂಪರ್ಕಿಸಲು ಯತ್ನಿಸಿದ್ದೆವು, ಆದರೆ ಮಹಿಳೆ ನಗರದಿಂದ ಹೊರಹೋಗಿದ್ದು, ಮಹಾರಾಷ್ಟ್ರದಲ್ಲಿ ಸಂಬಂಧಿಕರೊಬ್ಬರ ಮನೆಯಲ್ಲಿ ಇದ್ದಾರೆಂದು ತಿಳಿದುಬಂದಿದೆ ಎಂದು ಎಲೆಕ್ಟ್ರಾನಿಕ್ಸ್ ಸಿಟಿ ಪೊಲೀಸರು ಮಾಹಿತಿ ನೀಡಿದ್ದಾರೆ.

Join Nadunudi News WhatsApp Group

news of Kamaraj

ಇನ್ನು ಮಹಿಳೆ ಹೇಳಿಕೆ ನೀಡಲು ಬರದೇ ಹೋದರೆ ಆಕೆಯನ್ನ ಬಂಧಿಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ. ಹೌದು ಜೊಮ್ಯಾಟೋ ಡೆಲಿವರಿ ಬಾಯ್ ಕಾಮರಾಜ್ ಎಫ್‌ಐಆರ್ ದಾಖಲಿಸುತ್ತಿದ್ದಂತೆಯೇ ಆರೋಪ ಮಾಡಿದ್ದ ಮಹಿಳೆ ನಾಪತ್ತೆಯಾಗಿದ್ದಾಳೆ. ಸ್ನೇಹಿತರೆ ಈ ಮಹಿಳೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group