ನಾಳೆಯಿಂದ ಈ ನಿಯಮಗಳಲ್ಲಿ ಆಗಲಿದೆ ದೊಡ್ಡ ಬದಲಾವಣೆ, ರೇಷನ್ ಕಾರ್ಡ್ ಇದ್ದವರು ತಪ್ಪದೆ ನೋಡಿ.

ದೇಶದಲ್ಲಿ ದಿನದಿಂದ ದಿನಕ್ಕೆ ಅನೇಕ ಬದಲಾವಣೆಗಳು ಆಗುತ್ತದೆ ಎಂದು ಹೇಳಬಹುದು ಮತ್ತು ಈ ಬದಲಾವಣೆಗಳಿಗೆ ಹೊಂದಿಕೊಂಡು ಹೋಗುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯ ಕೂಡ ಆಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ತಂತ್ರಜ್ಞಾನ ಬದಲಾದಂತೆ ನಾವು ಅದಕ್ಕೆ ಹೊಂದಿಕೊಂಡು ಹೋಗಬೇಕಾಗುತ್ತದೆ. ಇನ್ನು ದೇಶದಲ್ಲಿ ಕರೋನ ಮಹಾಮಾರಿ ಕಾಣಿಸಿಕೊಂಡಾಗಿನಿಂದ ಅನೇಕ ಬದಲಾವಣೆಗಳನ್ನ ಮಾಡಲಾಗಿದ್ದು ಜನರು ಕೂಡ ಈ ಬದಲಾವಣೆಗಳಿಗೆ ಹೊಂದಿಕೊಂಡು ಹೋಗುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ದೇಶದಲ್ಲಿ ಕಳೆದ ತಿಂಗಳು ಬ್ಯಾಂಕಿಂಗ್ ಕ್ಷೇತ್ರದಲ್ಲಿ, ಗ್ಯಾಸ್ ದರದಲ್ಲಿ ಮತ್ತು ಅನೇಕ ವಿಭಾಗಗಳಲ್ಲಿ ಅನೇಕ ಬದಲಾವಣೆಗಳು ಆಗಿದ್ದು ಮತ್ತು ಈ ತಿಂಗಳು ಕೂಡ ಅನೇಕ ಕ್ಷೇತ್ರದಲ್ಲಿ ಬದಲಾವಣೆ ಆಗಲಿದ್ದು ಜನರು ಅದಕ್ಕೆ ಹೊಂದಿಕೊಂಡು ಹೋಗಬೇಕಾಗಿದೆ.

ಇನ್ನು ಈಗ ಅದೇ ರೀತಿಯಲ್ಲಿ ಈಗ ಮತ್ತೆ ಮೇ ತಿಂಗಳ ಆರಂಭದಲ್ಲೇ ಅಂದರೆ ನಾಳೆಯಿಂದ ಈ ನಿಯಮಗಳಲ್ಲಿ ಅನೇಕ ಬದಲಾವಣೆಗಳು ಆಗಲಿದ್ದು ಜನರು ಅದಕ್ಕೆ ಹೊಂದಿಕೊಂಡು ಹೋಗಬೇಕಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಸ್ನೇಹಿತರೆ ಮೇ ಈ ಕ್ಷೇತ್ರದಲ್ಲಿ ಅನೇಕ ಬದಲಾವಣೆ ಆಗಲಿದ್ದು ಸಾರ್ವಜನಿಕರು ಅದಕ್ಕೆ ಹೊಂದಿಕೊಂಡು ಹೋಗಬೇಕಾಗಿದೆ. ಹಾಗಾದರೆ ಆ ಬದಲಾವಣೆಗಳು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಮೊದಲನೆಯದಾಗಿ ನಾಳೆಯಿಂದ 18 ವರ್ಷ ಮೇಲ್ಪಟ್ಟ ಎಲ್ಲಾ ಜನರಿಗೆ ಕರೋನ ಲಸಿಕೆಯನ್ನ ನೀಡಲಾಗುತ್ತದೆ. ಇಲ್ಲಿಯತನಕ 45 ವರ್ಷ ಮೇಲ್ಪಟ್ಟ ಜನರಿಗೆ ಮಾತ್ರ ಕರೋನ ಲಸಿಕೆಯನ್ನ ನೀಡಲಾಗುತ್ತಿತ್ತು, ಆದರೆ ನಾಳೆಯಿಂದ 18 ವರ್ಷ ಮೇಲ್ಪಟ್ಟ ಎಲ್ಲಾ ಜನರಿಗೆ ಕರೋನ ಲಸಿಕೆಯನ್ನ ನೀಡಲಾಗುತ್ತದೆ ಮತ್ತು ಲಸಿಕೆಗಾಗಿ ಕೋವಿನ್ ಪೋರ್ಟಲ್, ಆರೋಗ್ಯ ಸೇತು ಅಪ್ಲಿಕೇಶನ್ ಅಥವಾ ಉಮಾಂಗ್ ಆಯಪ್ ಮೂಲಕ ನೋಂದಣಿ ಅಗತ್ಯವಿದೆ.

News of May

ಇನ್ನು ಮೇ ತಿಂಗಳಲ್ಲಿ ಬ್ಯಾಂಕುಗಳಿಗೆ ಬರೋಬ್ಬರಿ 12 ದಿನ ರಜೆ ಇರುತ್ತದೆ. ಮೇ ತಿಂಗಳಲ್ಲಿ 12 ದಿನಗಳ ಕಾಲ ಎಲ್ಲಾ ಬ್ಯಾಂಕುಗಳು ಮುಚ್ಚಿರುವ ಕಾರಣ ಬ್ಯಾಂಕಿಂಗ್ ವ್ಯವಹಾರವನ್ನ ಮಾಡುವವರು ಈ ರಜಾ ದಿನಗಳನ್ನ ಗಮನದಲ್ಲಿ ಇರಿಸಿಕೊಂಡು ಬ್ಯಾಂಕಿಂಗ್ ವ್ಯವಹಾರವನ್ನ ಮಾಡುವುದು ಉತ್ತಮ ಎಂದು ಹೇಳಬಹುದು. ಇನ್ನು ವಾಸ್ತವವಾಗಿ ಸರ್ಕಾರಿ ತೈಲ ಕಂಪನಿಗಳು ಪ್ರತಿ ತಿಂಗಳ ಮೊದಲ ದಿನ ಅನಿಲ ಸಿಲಿಂಡರ್ ಗಳ ಬೆಲೆಯನ್ನು ಬದಲಾಯಿಸುತ್ತವೆ. ಮೇ 1 ರಂದು ಹೊಸ ಗ್ಯಾಸ್ ಸಿಲಿಂಡರ್ ಬೆಲೆಯೂ ಬಿಡುಗಡೆಯಾಗಲಿದೆ ಮತ್ತು ನಾಳೆ ಗ್ಯಾಸ್ ಸಿಲಿಂಡರ್ ಬೆಲೆಗಳು ಬದಲಾಗಬಹುದು ಎಂದು ನಿರೀಕ್ಷಿಸಲಾಗಿದೆ.

Join Nadunudi News WhatsApp Group

ಇನ್ನು ಕೋವಿಡ್ ಸಾಂಕ್ರಾಮಿಕ ರೋಗದಲ್ಲಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನಯೋಜನೆಯನ್ನು ಮರು ಪ್ರಾರಂಭಿಸಲಾಗಿದೆ ಮತ್ತು ಇದರ ಅಡಿಯಲ್ಲಿ ಜನರಿಗೆ ಮೇ ಮತ್ತು ಜೂನ್ ನಲ್ಲಿ ಮುಂದಿನ ಎರಡು ತಿಂಗಳಲ್ಲಿ 5 ಕೆಜಿ ಆಹಾರ ಧಾನ್ಯಗಳನ್ನು ಸರ್ಕಾರ ಉಚಿತವಾಗಿ ನೀಡುತ್ತದೆ. ಇನ್ನು ನೀವು ಆಕ್ಸಿಸ್ ಅಂಕಿನ ಗ್ರಾಹಕರು ಆಗಿದ್ದರೆ ನೀವು ಇದನ್ನ ತಪ್ಪದೆ ಓದುವುದು ಉತ್ತಮ ಎಂದು ಹೇಳಬಹುದು. ಹೌದು ಸ್ನೇಹಿತರೆ ಮೇ 1 ರಿಂದ ಉಚಿತ ಮಿತಿಯ ನಂತರ ಎಟಿಎಂಗಳಿಂದ ಹಣವನ್ನು ತೆಗೆದುಕೊಳ್ಳುವುದು ಈಗ ಪ್ರಸ್ತುತ ಸಮಯಕ್ಕೆ ಹೋಲಿಸಿದರೆ ದುಪ್ಪಟ್ಟು ಶುಲ್ಕವನ್ನು ಪಾವತಿಸಬೇಕಾಗುತ್ತದೆ ಮತ್ತು ಅಷ್ಟೇ ಅಲ್ಲದೆ ಬ್ಯಾಂಕ್ ಈಗಾಗಲೇ ಇತರ ಸೇವೆಗಳ ಶುಲ್ಕಗಳನ್ನು ಹೆಚ್ಚಿಸಿದೆ. ಸ್ನೇಹಿತರೆ ಈ ಬದಲಾವಣೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

News of May

Join Nadunudi News WhatsApp Group