ಮದುವೆಯಾದ 6 ವರ್ಷದ ಬಳಿಕ ಸಿಹಿಸುದ್ದಿ ಹಂಚಿಕೊಂಡ ಶ್ರೇಯ ಘೋಷಾಲ್, ಶುಭಾಶಯ ಹೇಳಿ.

ಗಾಯಕಿ ಶ್ರೇಯ ಗೋಷನ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ದೇಶದಲ್ಲಿ ಅಪ್ರತಿಮ ಗಾಯಕರಲ್ಲಿ ಗಾಯಕಿ ಶ್ರೇಯ ಘೋಷಾಲ್ ಅವರು ಕೂಡ ಒಬ್ಬರು ಎಂದು ಹೇಳಬಹುದು. ಅದೆಷ್ಟೋ ಹಾಡುಗಳನ್ನ ಹಿಟ್ ಚಿತ್ರಗಳಿಗೆ ಹಾಡನ್ನ ಹಾಡಿರುವ ಶ್ರೇಯ ಘೋಷಾಲ್ ಅವರು ದೇಶದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿ ಕೂಡ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನ ಹೊಂದಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಕನ್ನಡ, ಹಿಂದಿ, ಮಲಯಾಳಂ, ತೆಲುಗು, ತಮಿಳು ಸೇರಿದಂತೆ ಹಲವು ಭಾಷೆಗಳ ಚಿತ್ರಗಳಿಗೆ ಹಾಡನ್ನ ಹಾಡಿರುವ ಗಾಯಕಿ ಶ್ರೇಯ ಘೋಷಾಲ್ ಅವರ ಧ್ವನಿಗೆ ಇಡೀ ಸಂಗೀತ ಲೋಕವೇ ಫಿದಾ ಆಗಿದೆ ಎಂದು ಹೇಳಿದರೆ ತಪ್ಪಾಗಲ್ಲ.

ಒಂದು ಚಿತ್ರದಲ್ಲಿ ಶ್ರೇಯ ಘೋಷಾಲ್ ಅವರು ಹಾಡಿದರು ಅಂದರೆ ಚಿತ್ರಕ್ಕಿಂತ ಹೆಚ್ಚಾಗಿ ಅವರ ಹಾಡನ್ನ ಕೇಳುವವರ ಸಂಖ್ಯೆನೇ ಜಾಸ್ತಿ ಎಂದು ಹೇಳಬಹುದು. ಇನ್ನು ಶ್ರೇಯ ಘೋಷಣಾ ಅವರು ಫೆಬ್ರವರಿ 15 2015 ರಲ್ಲಿ ಸಾಂಪ್ರದಾಯಿಕ ಬಂಗಾಳಿ ಶೈಲಿಯಲ್ಲಿ ಶ್ರೇಯಾ ಮತ್ತು ಶಿಲಾದಿತ್ಯ ವಿವಾಹ ಮಾಡಿಕೊಂಡಿದ್ದರು. ಇನ್ನು ಸ್ರೇಯ ಘೋಷಾಲ್ ಅವರು ಈಗ ಮದುವೆಯಾದ ಆರು ವರ್ಷದ ಬಳಿಕ ಅಭಿಮಾನಿಗಳಿಗೆ ಬಂಪರ್ ಸಿಹಿ ಸುದ್ದಿಯನ್ನ ನೀಡಿದ್ದಾರೆ ಎಂದು ಹೇಳಬಹುದು. ಹಾಗಾದರೆ ಏನದು ಸಿಹಿಸುದ್ದಿ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

News of Shreya Goshal

ಹೌದು ತಮ್ಮ ಸುಮಧುರವಾದ ಕಂಠದಿಂದ ಎಲ್ಲರ ಮನವನ್ನು ಗೆದ್ದಿರುವ ಬಾಲಿವುಡ್‍ನ ಅತ್ಯಂತ ಜನಪ್ರಿಯ ಗಾಯಕಿ ಶ್ರೇಯಾ ಘೋಷಾಲ್ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ. ಶ್ರೇಯಾ ಘೋಷಾಲ್ ತಮ್ಮ ಮೊದಲ ಮಗುವನ್ನು ನಿರೀಕ್ಷೆಯಲ್ಲಿದ್ದಾರೆ ಮತ್ತು ಶ್ರೇಯಾ ತಾವು ತಾಯಿ ಆಗುತ್ತಿರುವ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಬೇಬಿ ಶ್ರೇಯಾದಿತ್ಯ ನಿರೀಕ್ಷೆಯಲ್ಲಿದ್ದೇವೆ. ಶಿಲಾದಿತ್ಯ ಮತ್ತು ನಾನು ಈ ಸುದ್ದಿಯನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ನಾನು ರೋಮಾಂಚನಗೊಂಡಿದ್ದೇವೆ. ನಮ್ಮ ಜೀವನದಲ್ಲಿ ಹೊಸ ಅಧ್ಯಾಯಕ್ಕೆ ನಾವು ಸಿದ್ಧರಾಗಿರುವಾಗ ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದಗಳು ಬೇಕು ಎಂದು ಬರೆದುಕೊಂಡು ಬೇಬಿ ಬಂಪ್ ಫೋಟೋವನ್ನು ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಕನ್ನಡ ಸೇರಿದಂತೆ ಹಲವು ಭಾಷೆಯಲ್ಲಿ ಹಾಡನ್ನ ಹಾಡಿರುವ ಶ್ರೇಯ ಘೋಷಾಲ್ ಈಗ ಗರ್ಭಿಣಿಯಾಗಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಶ್ರೇಯಾ ಘೋಷಾಲ್ ಶಿಲಾದಿತ್ಯ ದಂಪತಿ ಎಷ್ಟು ತಿಂಗಳ ಗರ್ಭಿಣಿ ಎಂಬುದನ್ನು ಬಹಿರಂಗಪಡಿಸಿಲ್ಲ. ಶ್ರೇಯಾ ಘೋಷಾಲ್ ಅವರು ಶಿಲಾದಿತ್ಯ ಅವರನ್ನ ಲವ್ ಕಮ್ ಅರೆಂಜ್ ಮ್ಯಾರೇಜ್ ಆಗಿದ್ದರು, ಮದುವೆಗೂ ಮುನ್ನ ಹತ್ತು ವರ್ಷಗಳ ಕಾಲ ಶ್ರೇಯಾ ಮತ್ತು ಶಿಲಾದಿತ್ಯ ಪ್ರೀತಿಸಿದ್ದರು. ಇದೀಗ ಮದುವೆಯಾಗಿ 6 ವರ್ಷಗಳ ಬಳಿಕ ತಾಯಿ ಆಗುವ ಮೂಲಕ ಶ್ರೇಯಾ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಸ್ನೇಹಿತರೆ ನೀವು ಕೂಡ ಶ್ರೇಯ ಘೋಷಾಲ್ ಅವರ ಅಭಿಮಾನಿಯಾಗಿದ್ದಾರೆ ಅವರಿಗೆ ಶುಭಾಶಯವನ್ನ ಹೇಳಿ.

Join Nadunudi News WhatsApp Group

News of Shreya Goshal

Join Nadunudi News WhatsApp Group