WHO ವರದಿಯ ಪ್ರಕಾರ ಈ ರಕ್ತದ ಗುಂಪಿನವರಿಗೆ ಹೆಚ್ಚಾಗಿ ಮದುಮೇಹ ರೋಗ ಕಾಣಿಸಿಕೊಳ್ಳುತ್ತದೆ, ಯಾವ ಗುಂಪು ನೋಡಿ.

ಜನರಿಗೆ ಬರುವ ಭಯಾನಕ ಸಮಸ್ಯೆಯಲ್ಲಿ ಈ ಮದುಮೇಹ ಕೂಡ ಒಂದು ಎಂದು ಹೇಳಿದರೆ ತಪ್ಪಾಗಲ್ಲ. ಹೌದು ದೇಶದಲ್ಲಿ ಮಾತ್ರವಲ್ಲದೆ ವಿಶ್ವದಲ್ಲಿ ಕೋಟಿಗಟ್ಟಲೆ ಜನರು ಈ ಮದುಮೇಹ ಖಾಯಿಲೆಯನ್ನು ಬಳಲುತ್ತಿದ್ದಾರೆ ಎಂದು ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಈ ರೋಗ ಬಹಳ ಕೆಟ್ಟ ರೋಗಗಳಲ್ಲಿ ಒಂದಾಗಿದ್ದು ಈ ರೋಗಕ್ಕೆ ತುತ್ತಾದವರು ಬಹಳ ಕಷ್ಟಪಡುತ್ತಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಈ ಖಾಯಿಲೆ ನಮ್ಮ ಜೀವನ ಶೈಲಿಗೆ ಸಂಬಂಧಿಸಿದ ಖಾಯಿಲೆಯಾಗಿದ್ದು ಈ ಖಾಯಿಲೆ ನಾವು ಮಾಡುವ ಕೆಲವು ತಪ್ಪುಗಳಿಂದ ಆಗುತ್ತದೆ ಎಂದು ಹೇಳಬಹುದು. ನಮ್ಮ ಜೀವನ ಶೈಲಿಯನ್ನ ಬದಲಾಯಿಸಿಕೊಳ್ಳುವುದರ ಮೂಲಕ ನಾವು ಈ ರೋಗವನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.

ಇನ್ನು ಈಗ ವಿಶ್ವ ಆರೋಗ್ಯ ಸಂಸ್ಥೆ ಒಂದು ದೊಡ್ಡ ಶಾಕಿಂಗ್ ಸುದ್ದಿಯನ್ನ ನೀಡಿದ್ದು ಈ ರಕ್ತದ ಗುಂಪಿನವರಿಗೆ ಹೆಚ್ಚಾಗಿ ಮದುಮೇಹ ಖಾಯಿಲೆ ಬರುತ್ತದೆ ಎಂದು ಹೇಳಿದ್ದಾರೆ. ಹಾಗಾದರೆ ವಿಶ್ವ ಆರೋಗ್ಯ ಸಂಸ್ಥೆ ಹೇಳುವ ಪ್ರಕಾರ ಯಾವ ರಕ್ತದ ಗುಂಪಿನವರಿಗೆ ಹೆಚ್ಚಾಗಿ ಮದುಮೇಹ ಖಾಯಿಲೆ ಬರುತ್ತದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಸ್ನೇಹಿತರೆ ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಅಂಕಿ ಅಂಶಗಳ ಪ್ರಕಾರ ಈ ಭೂಮಿಯ ಮೇಲೆ ಸುಮಾರು 43 ಕೋಟಿಗೂ ಹೆಚ್ಚಿನ ಜನರು ಈ ಮದುಮೇಹ ರೋಗದಿಂದ ಬಳಲುತ್ತಿದ್ದಾರೆ ಎಂದು ತಿಳಿದು ಬಂದಿದೆ.

News of Suger

ಇನ್ನು ನಮ್ಮ ದೇಶದಲ್ಲಿ ಸುಮಾರು 8 ಕೋಟಿ ಜನರು ಈ ಮದುಮೇಹ ರೋಗದಿಂದ ಬಳಲುತ್ತಿದ್ದಾರೆ ಎದು ತಿಳಿದು ಬಂದಿದೆ. ಇದು ನಮ್ಮ ಜೀವನ ಶೈಲಿಗೆ ಸಂಬಂಧಿಸಿದ ಖಾಯಿಲೆಯಾಗಿದ್ದು ಈ ರೋಗ ಒಮ್ಮೆ ಬಂದರೆ ಇದನ್ನ ಗುಣಪಡಿಸಲು ಸಾಧ್ಯವಿಲ್ಲ. ಇನ್ನು ನಮ್ಮ ಜೀವನ ಶೈಲಿಯ ಜೊತೆಗೆ ರಕ್ತದ ಗುಂಪು ಕೂಡ ಮಧುಮೇಹಕ್ಕೆ ಕಾರಣವಾಗಿದೆ ಎಂದು ಸಂಶೋಧನೆಯಿಂದ ತಳಿದು ಬಂದಿದೆ. ಇನ್ನು ಯುರೋಪಿಯನ್ ಅಸೋಸಿಯೇಷನ್‌ನ ಡಯಾಬಿಟಾಲಜಿ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ A ಅಥವಾ B ರಕ್ತದ ಗುಂಪು ಹೊಂದಿರುವವರಿಗೆ ಟೈಪ್ 2 ಮಧುಮೇಹದ ಅಪಾಯ ಹೆಚ್ಚು ಮತ್ತು ರಕ್ತದ ಗುಂಪು O ಆಗಿದ್ದರೆ ಅಪಾಯ ಕಡಿಮೆ.

ಇನ್ನು ಈ ಅಧ್ಯಯನ 80 ಸಾವಿರ ಮಹಿಳೆಯರ ಮೇಲೆ ನಡೆದಿದೆ, ಈ ಅಧ್ಯಯನದಲ್ಲಿ ರಕ್ತದ ಗುಂಪು ಮತ್ತು ಟೈಪ್ 2 ಮಧುಮೇಹದ ನಡುವಿನ ಸಂಬಂಧವೇನು ಎಂದು ತಿಳಿಯಲು ಪ್ರಯತ್ನಿಸಲಾಗಿದೆ ಮತ್ತು ಅಧ್ಯಯನದಲ್ಲಿ ಪಾಲ್ಗೊಂಡಿದ್ದ 3,553 ಮಹಿಳೆಯರಲ್ಲಿ ಟೈಪ್ 2 ಡಯಾಬಿಟಿಸ್ ಪತ್ತೆಯಾಗಿತ್ತು. ಇನ್ನು O ರಕ್ತದ ಗುಂಪಿನವರಿಗಿಂತ A ರಕ್ತದ ಗುಂಪಿನವರಿಗೆ ಟೈಪ್ 2 ಮಧುಮೇಹದ ಅಪಾಯ 10 ರಷ್ಟು ಹೆಚ್ಚಿತ್ತು, O ರಕ್ತದ ಗುಂಪು ಹೊಂದಿರುವ ಜನರಿಗಿಂತ ಬಿ ರಕ್ತದ ಗುಂಪು ಹೊಂದಿರುವ ಮಹಿಳೆಯರಲ್ಲಿ ಟೈಪ್ 2 ಮಧುಮೇಹದ ಅಪಾಯ ಶೇಕಡಾ 21ರಷ್ಟಿತ್ತು. O ನೆಗೆಟಿವ್ ರಕ್ತದ ಗುಂಪು ಹೊಂದಿರುವವರಲ್ಲಿ ಇದರ ಅಪಾಯ ಅತ್ಯಂತ ಕಡಿಮೆ ಮತ್ತು B ಪಾಸಿಟಿವ್ ಹೊಂದಿರುವವರಲ್ಲಿ ಇದರ ಅಪಾಯ ಹೆಚ್ಚು. ಸ್ನೇಹಿತರೆ ಈ ಸಂಶೋಧನೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

News of Suger

Join Nadunudi News WhatsApp Group