18 ವರ್ಷ ಮೇಲ್ಪಟ್ಟವರಿಗೆ ಇತಿಹಾಸದ ತೀರ್ಪು ನೀಡಿದ ಸುಪ್ರೀಮ್ ಕೋರ್ಟ್, ಮಹತ್ವದ ತೀರ್ಪು.

ದೇಶದಲ್ಲಿ ಹೆಚ್ಚಿನ ನಿರ್ಧಾರವನ್ನ ತೆಗೆದುಕೊಳ್ಳುವ ಅಧಿಕಾರ ಇರುವುದು ಅಂದರೆ ಸುಪ್ರೀಂ ಕೋರ್ಟ್ ಗೆ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಸುಪ್ರೀಂ ಕೋರ್ಟ್ ನೀಡುವ ತೀರ್ಪಿಗೆ ನಾವೆಲ್ಲರೂ ಅವಶ್ಯಕವಾಗಿ ತಲೆ ಭಾಗಲೇಬೇಕು ಎಂದು ಹೇಳಬಹದು. ಇನ್ನು ನಿಮಗೆಲ್ಲ ತಿಳಿರುವ ಹಾಗೆ ದೇಶದಲ್ಲಿ ಒಬ್ಬ ಹುಡುಗ ಅಥವಾ ಹುಡುಗಿ ವಯಸ್ಕರು ಎಂದು ಕರೆಯಲ್ಪಡುವುದು ಅವರಿಗೆ 18 ವರ್ಷ ವಯಸ್ಸು ತುಂಬಿದ ನಂತರ ಎಂದು ಹೇಳಬಹುದು. ಹೌದು 18 ವರ್ಷ ತುಂಬಿದ ನಂತರ ಹುಡುಗ ಅಥವಾ ಹುಡುಗಿ ಸಾಮಾನ್ಯವಾಗಿ ಎಲ್ಲಾ ಅಧಿಕಾರವನ್ನ ಪಡೆದುಕೊಳ್ಳುತ್ತಾರೆ ಎಂದು ಹೇಳಬಹುದು ಮತ್ತು ಆ ಸಮಯದಲ್ಲಿ ಬಹುತೇಕ ಎಲ್ಲ ದೊಡ್ಡ ನಿರ್ಧಾರವನ್ನತೆಗೆದುಕೊಳ್ಳುವ ಅಧಿಕಾರ ಕೂಡ ಇರುತ್ತದೆ ಎಂದು ಹೇಳಬಹುದು.

ಇನ್ನು ಈಗ ಸುಪ್ರೀಂ ಕೋರ್ಟ್ 18 ವರ್ಷ ಮೇಲ್ಪಟ್ಟವರ ಪರವಾಗಿ ದೊಡ್ಡ ತೀರ್ಪನ್ನ ನೀಡಿದ್ದು ಈ ತೀರ್ಪನ್ನ ಕೇಳಿ ಇಡೀ ದೇಶವೇ ಶಾಕ್ ಆಗಿದೆ ಎಂದು ಹೇಳಬಹುದು. ಹಾಗಾದರೆ ಆ ತೀರ್ಪು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಸುಪ್ರೀಂ ಕೋರ್ಟಿನ ಈ ತೀರ್ಪಿನ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ 18 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನವರು ತಮ್ಮ ಧರ್ಮವನ್ನ ತಾವೇ ಆಯ್ಕೆ ಮಾಡಿಕೊಳ್ಳಲು ಅರ್ಹರು ಎಂದು ಸುಪ್ರೀಂ ಕೋರ್ಟ್ ನಿನ್ನೆ ಮಹತ್ವದ ಆದೇಶವನ್ನ ಹೊರಡಿಸಿದೆ.

news of supreme court

ಮಾಟ, ಮಂತ್ರ ಮತ್ತು ಬಲವತವಾಗಿ ಮತಾಂತರ ಮಾಡುವುದನ್ನ ನಿಯಂತ್ರಣ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಆದೇಶವನ್ನ ನೀಡಬೇಕೆಂದು ಸಲ್ಲಿಸಲಾಗಿದ್ದ ಅರ್ಜಿಯನ್ನ ಸುಪ್ರೀಂ ಕೋರ್ಟ್ ವಜಾ ಮಾಡಿ ಈ ಅಭಿಪ್ರಾಯವನ್ನ ವ್ಯಕ್ತಪಡಿಸಿದೆ. ದೇಶದ ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳಾದ ಆರ್.ಎಫ್ ನಾರಿಮನ್, ಬಿ ಆರ್ ಗವಾಯಿ ಮತ್ತು ಹೃಷಿಕೇಶ್ ರಾಯ್ ನೇತೃತ್ವದ ನ್ಯಾಯಪೀಠವು ಅರ್ಜಿದಾರರಾದ ವಕೀಲ ಅಶ್ವಿನ್ ಉಪಾಧ್ಯಾಯ್ ಅವರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲರಾದ ಗೋಪಾಲ್ ಶಂಕರನಾರಾಯಣ ಅವರೊಂದಿಗೆ, ಸಂವಿಧಾನ ವಿಧಿ 32ರ ಅಡಿಯಲ್ಲಿ ಯಾವ ರೀತಿಯ ರಿಟ್ ಅರ್ಜಿಯನ್ನು ಹಾಕಿದ್ದೀರಿ, ನೀವು ಇದಕ್ಕೆ ಭಾರೀ ಬೆಲೆ ತೆರಬೇಕಾಗುತ್ತದೆ ನೀವು ಹೀಗೆ ಅರ್ಜಿ ಹಾಕಿ ವಾದ ಮಾಡುವುದಕ್ಕೆ ನೀವೇ ಹೊಣೆಗಾರರು ಎಂದು ಹೇಳಿ ತರಾಟೆಗೆ ತೆಗೆದುಕೊಂಡಿದೆ.

18 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿ ತನ್ನ ಧರ್ಮವನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಪೂರ್ಣ ಪ್ರಮಾಣದಲ್ಲಿ ಶಕ್ತನಾಗಿದ್ದು, ಆತನ ಇಚ್ಚೆಯಂತೆ ಧರ್ಮವನ್ನು ಆಯ್ಕೆ ಮಾಡಲು ಬಿಡದಿರಲು ಯಾವುದೇ ಕಾರಣವಿಲ್ಲ ಎಂದು ನ್ಯಾಯಪೀಠ ಹೇಳಿದೆ. ಅರ್ಜಿದಾರರಾದ ವಕೀಲ ಅಶ್ವಿನ್ ಉಪಾಧ್ಯಾಯ್ ಧರ್ಮವನ್ನು ಮತಾಂತರ ಮಾಡುವುದು ಧರ್ಮಕ್ಕೆ ಮಾಡುವ ಆಪಾದನೆ ಎಂದು ಪರಿಗಣಿಸಿ ಧರ್ಮ ಪರಿವರ್ತನೆ ಕಾಯ್ದೆಯನ್ನು ಜಾರಿಗೊಳಿಸಿಸಲು ಸಮಿತಿ ರಚಿಸಬೇಕೆಂಬ ಕೋರಿಕೆಯನ್ನು ಇಟ್ಟಿದ್ದರು. ಇದನ್ನೆಲ್ಲ ಪರಿಗಣಿಸದ ಕೋರ್ಟ್ ಧಾರ್ಮಿಕ ಮತಾಂತರ ತಡೆ ಸಂವಿಧಾನದ ವಿಧಿ 14, 21 ಮತ್ತು 25ಕ್ಕೆ ಅಪರಾಧ ಮಾಡಿದಂತೆ ಆಗುತ್ತದೆ. ಇದು ಜಾತ್ಯತೀತತೆಯ ತತ್ವಗಳಿಗೆ ವಿರುದ್ಧವಾಗಿದೆ. ಜಾತ್ಯತೀತತೆ ಸಂವಿಧಾನ ಪ್ರಮುಖ ಅಂಗವಾಗಿದೆ ಎಂದು ಅಭಿಪ್ರಾಯಪಟ್ಟು ಅರ್ಜಿಯನ್ನು ವಜಾಗೊಳಿಸಿದೆ. ಸ್ನೇಹಿತರೆ ಇದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

news of supreme court

Join Nadunudi News WhatsApp Group