ಪೋಲೀಸರ ಮುಂದೆ ಕಥೆಯನ್ನ ಬಿಚ್ಚಿಟ್ಟ ಡೆಲಿವೆರಿ ಬಾಯ್, ಅಷ್ಟಕ್ಕೂ ಆದಿನ ಅಲ್ಲಿ ಆಗಿದ್ದೇನು ಗೊತ್ತಾ.

ಸದ್ಯ ಕಳೆದ ಎರಡು ದಿನದಿಂದ ಕೆಲವು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿರುವ ವಿಷಯ ಏನು ಅಂದರೆ ಅದೂ ಫುಡ್ ಕೊಡಲು ಬಂದ ವ್ಯಕ್ತಿ ಮಹಿಳೆಯ ಮೇಲೆ ಹಲ್ಲೆ ಮಾಡಿದ್ದು ಆಗಿದೆ. ಹೌದು ಜೊಮ್ಯಾಟೊ ಡೆಲಿವರಿ ಮಾಡುವ ಯುವಕನೊಬ್ಬ ನನ್ನ ಮೇಲೆ ಹಲ್ಲೆ ಮಾಡಿ ನನ್ನ ಮುಗಿದ ಮೇಲೆ ಹೊಡೆದಿದ್ದಾನೆ ಎಂದು ಹೇಳಿ ಒಬ್ಬ ಮಹಿಳೆ ತನ್ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದರ ಜೊತೆಗೆ ಪೊಲೀಸ್ ಠಾಣೆಯ ಮೆಟ್ಟಿಲನ್ನ ಕೂಡ ಏರಿದ್ದಳು. ಇನ್ನು ಈ ವಿಷಯದ ಕುರಿತಾಗಿ ವಿಚಾರಣೆಯನ್ನ ನಡೆಸಿದ ಪೊಲೀಸರು ಸದ್ಯ ಜೊಮ್ಯಾಟೊ ಡೆಲಿವರಿ ಮಾಡಿದ ಯುವನನ್ನ ತಮ್ಮ ವಶಕ್ಕೆ ಪಡೆದುಕೊಂಡಿದ್ದು ವಿಚಾರಣೆಯನ್ನ ಮಾಡುತ್ತಿದ್ದಾರೆ ಎಂದು ಹೇಳಬಹುದು.

ಸದ್ಯ ಪೋಲೀಸರ ವಿಚಾರಣೆಯಲ್ಲಿ ಇರುವ ಜೊಮ್ಯಾಟೊ ಡೆಲಿವರಿ ಮಾಡುವ ಯುವಕ ಕೆಲವು ಶಾಕಿಂಗ್ ವಿಷಯವನ್ನ ಪೋಲೀಸರ ಮುಂದೆ ಹೇಳಿದ್ದು ಈ ಸದ್ಯ ಪ್ರಕರಣದ ಇನ್ನೊಂದು ಮುಖ ಹೊರಬಿದ್ದಿದೆ ಎಂದು ಹೇಳಬಹುದು. ಹಾಗಾದರೆ ಪೋಲೀಸರ ವಿಚಾರಣೆಯಲ್ಲಿ ಜೊಮ್ಯಾಟೊ ಡೆಲಿವರಿ ಮಾಡುವ ಯುವಕ ಹೇಳಿದ್ದೇನು ಮತ್ತು ಆ ದಿನ ಅಲ್ಲಿ ನಿಜಕ್ಕೂ ನಡೆದಿದ್ದು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

news of zomato

ಹೌದು ಸ್ನೇಹಿತರೆ ಊಟವನ್ನು ಕೊಡಲು ಹೋದಾಗ ಯುವತಿ ಏನೇನು ಮಾಡಿದಳು ಎನ್ನುವುದನ್ನು ಆರೋಪಿ ಸ್ಥಾನದಲ್ಲಿರುವ ಡೆಲಿವರಿ ಬಾಯ್​ ವಿವರಿಸಿದ್ದಾನೆ. ಜೊಮ್ಯಾಟೋ ಡೆಲಿವರಿ ಬಾಯ್​ ಕಾಮರಾಜ್​ ಅವರ ಮೇಲೆ ಹಿತೇಶಾ ಚಂದ್ರಾಣಿ ಪೊಲೀಸರಿಗೆ ದೂರನ್ನ ನೀಡಿದ್ದರು. ಊಟ ತಂದು ಕೊಡುವುದು ಒಂದು ಗಂಟೆ ತಡವಾಗಿತ್ತು, ಅದಕ್ಕಾಗಿ ನಾನು ಸಿಬ್ಬಂದಿಯಿಂದ ಸ್ಪಷ್ಟನೆಗಾಗಿ ಕಾಯುತ್ತಿದ್ದೆ, ಆದರೆ ಅಷ್ಟರೊಳಗೆ ನನಗೆ ಬೈದು, ಮುಖಕ್ಕೆ ಪಂಚ್​ ಮಾಡಿ ಓಡಿ ಹೋಗಿದ್ದಾನೆ ಎಂದು ದೂರಿನಲ್ಲಿ ಹೇಳಿದ್ದರು ಮತ್ತು ಮೂಗಿನಲ್ಲಿ ರಕ್ತ ಸುರಿಯುತ್ತಿರುವ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.

ಇನ್ನು ಈಗ ಪೋಲೀಸರ ಮುಂದೆ ಇದರ ಬಗ್ಗೆ ಮಾತನಾಡಿರುವ ಕಾಮರಾಜ್ ಅವರು ಆ ಗಾಯ ಆಕೆಯೇ ಮಾಡಿಕೊಂಡಿದ್ದು ಎಂದು ಹೇಳಿದ್ದಾರೆ. ನಾನು 45-50 ನಿಮಿಷ ತಡವಾಗಿ ಹೋಗಿದ್ದು ನಿಜ ಮತ್ತು ಅದರ ಸಲುವಾಗಿ ಆಕೆಯ ಬಳಿ ನಾನು ಕ್ಷಮೆಯನ್ನ ಕೂಡ ಕೇಳಿದ್ದೆ, ಆದರೆ ಕ್ಷಮೆಯನ್ನ ಲೆಕ್ಕಿಸದ ಅವರು ನನಗೆ ಬೈಯ್ಯಲು ಆರಂಭಿಸಿದರು, ರಸ್ತೆಯಲ್ಲಿ ಕಾಮಗಾರಿಗಳು ಆಗುತ್ತಿದ್ದರಿಂದಾಗಿ ತಡವಾಯಿತೆಂದು ತಿಳಿಸಲು ಪ್ರಯತ್ನಿಸಿದೆ. ಅವರು ಊಟವನ್ನು ನನ್ನಿಂದ ಪಡೆದುಕೊಂಡರು. ಆದರೆ ಊಟದ ಹಣವನ್ನು ಕೊಡಲು ನಿರಾಕರಿಸಿದರು ಎಂದು ಕಾಮರಾಜ್ ಅವರು ಹೇಳಿದ್ದಾರೆ. ಜೊಮ್ಯಾಟೋದವರು ಕೊನೆ ಕ್ಷಣದಲ್ಲಿ ಆರ್ಡರ್​ ಕ್ಯಾನ್ಸಲ್​ ಮಾಡಿದ್ದಾಗಿ ಹೇಳಿದರು, ಹಾಗಾದರೆ ಊಟ ವಾಪಾಸು ಕೊಡಿ ಎಂದು ಕೇಳಿದೆ, ಆದರೆ ಅವರು ಅದಕ್ಕೂ ಒಪ್ಪಲಿಲ್ಲ. ಅದಾದ ಮೇಲೆ ಅವರು ನನ್ನನ್ನು ಆಳು ಎಂದು ಕರೆದರು.

Join Nadunudi News WhatsApp Group

news of zomato

ಹಿಂದಿಯಲ್ಲಿ ಬೈಯಲಾರಂಭಿಸಿದಳು. ಏನು ಬೇಕಾದರೂ ಮಾಡಿಕೋ ಹೋಗು ಎಂದು ಕೂಗಾಡಲಾರಂಭಿಸಿದರು ಎಂದು ಕಾಮರಾಜ್​ ಹೇಳಿದ್ದಾನೆ. ನಾನು ಎರಡು ವರ್ಷಗಳಿಂದ ಜೊಮ್ಯಾಟೋದಲ್ಲಿ ಕೆಲಸ ಮಾಡುತ್ತಿದ್ದೇನೆ, ಆದರೆ ಇಂತಹ ಗ್ರಾಹಕರನ್ನು ನಾನು ಹಿಂದೆಂದೂ ನೋಡಿರಲಿಲ್ಲ. ಇವರಿಂದ ನನಗೆ ದುಡ್ಡು ಸಿಗುವುದಿಲ್ಲ ಎನಿಸಿ ವಾಪಾಸು ಹೋಗಲೆಂದು ಲಿಫ್ಟ್​ ಬಳಿ ಹೊರಟೆ. ಆಗ ಆಕೆ ನನ್ನ ಮೇಲೆ ಚಪ್ಪಲಿ ಎಸೆದರು ಮತ್ತು ಅದರಿಂದ ತಪ್ಪಿಸಿಕೊಳ್ಳುವ ಸಲುವಾಗಿ ನಾನು ಕೈ ಅಡ್ಡ ಹಿಡಿದೆ. ನನ್ನ ಕೈ ತೆಗೆದು ಹೊಡೆಯಲು ಬಂದರು, ಆಗ ನಾನೂ ನನ್ನ ರಕ್ಷಣೆ ಮಾಡಿಕೊಳ್ಳಬೇಕಾಗಿ ಬಂತು ಮತ್ತು ಆಗ ಅವರದ್ದೇ ಕೈ ಬೆರಳಿನಲ್ಲಿದ್ದ ಉಂಗುರ ಅವರ ಮೂಗಿಗೆ ತಾಕಿತು ಮತ್ತು ಅದರಿಂದ ಗಾಯವಾಗಿ ರಕ್ತ ಸುರಿಯಿತು ಎಂದು ಕಾಮರಾಜ್ ಅವರು ಹೇಳಿದ್ದಾರೆ. ಸ್ನೇಹಿತರೆ ಈ ಘಟನೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group