Niveditha About Pregnant: ತಲೆ ಸುತ್ತುತ್ತಿದೆ, ವಾಂತಿಯಾಗುತ್ತಿದೆ, ಸ್ಪಷ್ಟನೆ ನೀಡಿದ ನಿವೇದಿತಾ ಗೌಡ.

Nivedita Gowda Clarify About Pregnant News: ನಿವೇದಿತಾ ಗೌಡ (Nivedita Gowda) ಹಾಗೂ ಚಂದನ್ ಶೆಟ್ಟಿ (Chandan Shetty) ಇದೀಗ ಬಾರಿ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಚಂದನ್ ಶೆಟ್ಟಿ Fat+Her ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದವು.

ಈ ವಿಡಿಯೋ ನೋಡಿದ ನೆಟ್ಟಿಗರು ಚಂದನ್ ಶೆಟ್ಟಿ ತಂದೆಯಾಗುತ್ತಿದ್ದಾರೆ ಎಂದು ಊಹಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದವು.

Dizziness, vomiting, explained Nivedita Gowda.
Image Credit: instagram

ನಂತರ ಸ್ವತಃ ಚಂದನ್ ಶೆಟ್ಟಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಇದೀಗ ನಿವೇದಿತಾ ಗೌಡ ಗಿಚ್ಚಿ ಗಿಲಿ\ಗಿಲಿ ಸೀಸನ್ 2 (Ghicchi Gili Gili Season 2) ವೇದಿಕೆಯಲ್ಲಿ ಈ ಬಗ್ಗೆ ಮಾತನಾಡಿದ್ದಾರೆ.

Fat+Her ವಿಡಿಯೋ ಬಗ್ಗೆ ಸ್ಪಷ್ಟನೆ ನೀಡಿದ ಚಂದನ್ ಶೆಟ್ಟಿ
ಸೋಶಿಯಲ್ ಮೀಡಿಯಾದಲ್ಲಿ ಚಂದನ್ ಶೆಟ್ಟಿ ವಿಡಿಯೋ ಶರ್ಟ್ ಮಾಡಿದ್ದರು. ಅದರಲ್ಲಿ ಚಂದನ್ ನಿವೇದಿತಾ ಅವರಿಗೆ Fat+Her ಅಂದರೆ ಏನು ಎಂದು ಕೇಳುತ್ತಾರೆ.

ಅದಕ್ಕೆ ನೀವಿ ಫ್ಯಾಟ್ ಹರ್ ಎನ್ನುತ್ತಾರೆ. ಆದರೆ ಅದು ಫಾದರ್ ಅನ್ನುವ ಅರ್ಥ ನೀಡುವುದರಿಂದ ನೆಟ್ಟಿಗರು ಚಂದನ್ ಶೆಟ್ಟಿ ತಂದೆಯಾಗುತ್ತಿದ್ದಾರೆ ಎಂದು ಊಹಿಸಿದ್ದರು. ನಂತರ ನಾವು ಇನ್ನು ಮಗುವಿಗೆ ಸಿದ್ಧರಾಗಿಲ್ಲ, ಸೋಶಿಯಲ್ ಮೀಡಿಯಾದಲ್ಲಿ ಮಾಡಿದ ವಿಡಿಯೋ ಕೇವಲ ತಮಾಷೆಗಾಗಿ ಎಂದು ಸ್ಪಷ್ಟನೆ ನೀಡಿದ್ದಾರೆ.

Join Nadunudi News WhatsApp Group

Nivedita Gowda clarified that I am not pregnant
Image Credit: instagram

ತಾಯಿಯಾಗುವ ಬಗ್ಗೆ ವೇದಿಕೆ ಮೇಲೆ ಮಾತನಾಡಿದ ನಿವೇದಿತಾ ಗೌಡ
ನಿವೇದಿತಾ ಗೌಡ ಕಲರ್ಸ್ ಕನ್ನಡ ವಾಹಿನಿ (Colors Kannada Channel) ಯಲ್ಲಿ ಪ್ರಸಾರವಾಗುವ ಗಿಚ್ಚಿ ಗಿಲಿ ಗಿಲಿ ಸೀಸನ್ 2 ರಲ್ಲಿ ಸ್ಪರ್ಧಿಸುತ್ತಿದ್ದಾರೆ. ಸ್ಕಿಟ್ ಮುಗಿದ ಬಳಿಕ ನೀವಿ ತಾವು ತಾಯಿಯಾಗುತ್ತಿರುದರ ಬಗ್ಗೆ ಮಾತನಾಡಿದ್ದಾರೆ.

ನನಗೀಗ ಎರಡು ತಿಂಗಳು, ನಾನು ಪ್ರೇಗ್ನೆಂಟ್ ಎಂದು ನೀವಿ ಹೇಳಿದ್ದಾರೆ. ಆಗ ನಿರೂಪಕ ನಿರಂಜನ್ ಹಾಗೂ ತೀರ್ಪುಗಾರರು ಒಂದು ಕ್ಷಣ ಶಾಕ್ ಆಗಿದ್ದಾರೆ. ನನಗೆ ತಲೆ ಸುತ್ತುತ್ತಿದೆ, ನನಗೆ ಬೆಳಿಗ್ಗೆ ಏಳಲು ಆಗುದಿಲ್ಲ. ನಾನೀಗ ಪ್ರೇಗ್ನೆಂಟ್ ನನಗೆ ಎರಡು ತಿಂಗಳು ಎಂದು ನೀವಿ ವೇದಿಕೆಯಲ್ಲಿ ಹೇಳಿಕೊಂಡಿದ್ದಾರೆ.

Nivedita Gowda talked about being pregnant on Gitchi Giligili show
Image Credit: instagram

ಅದಕ್ಕೆ ಶ್ರುತಿ ಅವರು ಸರಿಯಾಗಿ ಬಿಡಿಸಿ ಹೇಳು ಎಂದು ಹೇಳಿದ್ದಾರೆ. ಅದಕ್ಕೆ ನಿವೇದಿತಾ ನಾನು ತಾಯಿಯಾಗುತ್ತಿಲ್ಲ. ತಮಾಷೆಗಾಗಿ ಮಾಡಿದ ವಿಡಿಯೋನಿಂದಾಗಿ ನಾನು ತಾಯಿಯಾಗಿದ್ದೇನೆ ಎಂದು ಸಾಕಷ್ಟು ಸುದ್ದಿ ಹರಡಿದೆ. ಚಂದನ್ ಹಾಗೂ ನಾನು Fat+Her ವಿಡಿಯೋ ಮಾಡಿದ್ದೂ ಕೇವಲ ತಮಾಷೆಗಾಗಿ, ನಾನು ತಾಯಿಯಾಗುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Join Nadunudi News WhatsApp Group