ರಾ ರಾ ರಕ್ಕಮ್ಮ ಹಾಡಿಗೆ ಡ್ಯಾನ್ಸ್ ಮಾಡಿದ ನಿವೇದಿತಾ ಗೌಡ , ನೋಡಿ ವಿಡಿಯೋ

ಮೊದಲಬಾರಿ ನಾಯಕನಾಗಿ ಚಿಕ್ಕಣ್ಣ ಹೊಸ ಸಿನೆಮಾ, ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ ಕಿಚ್ಚ ಸುದೀಪ್ ನಟನೆಯ `ವಿಕ್ರಾಂತ್ ರೋಣ’ ಚಿತ್ರದ ಫೀವರ್ ಜೋರಾಗಿದೆ. ಇತ್ತೀಚೆಗಷ್ಟೇ ರಿಲೀಸ್ ಆದ ʻರಾ ರಾ ರಕ್ಕಮ್ಮಾ ಸಾಂಗ್‌ʼ ಕ್ರೇಜ್ ಜೋರಾಗಿದೆ. ಸ್ಟಾರ್ ತಾರೆಯರು ಕೂಡ ಈ ಹಾಡಿಗೆ ಹೆಜ್ಜೆ ಹಾಕ್ತಿದ್ದಾರೆ. ಇದೀಗ ನಿವೇದಿತಾ ಮತ್ತು ಚಂದನ್ ಗೌಡ ದಂಪತಿಗೆ ರಕ್ಕಮ್ಮ ಸಾಂಗ್‌ಗೆ ಬೋಲ್ಡ್ ಆಗಿ ಹೆಜ್ಜೆ ಹಾಕಿದ್ದಾರೆ.

ನಿವೇದಿತಾ ಮತ್ತು ಚಂದನ್ ಒಂದಲ್ಲಾ ಒಂದು ವಿಚಾರವಾಗಿ ಗಾಂಧಿನಗರದಲ್ಲಿ ಸುದ್ದಿಯಲ್ಲಿರುತ್ತಾರೆ. ಈಗ ಸುದೀಪ್ ಮತ್ತು ಜಾಕ್ವೆಲೀನ್ ನಟನೆಯ ಸೂಪರ್ ಹಿಟ್ ಹಾಡು `ರಾ ರಾ ರಕ್ಕಮ್ಮ’ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಸಿನಿರಸಿಕರ ಗಮನ ಸೆಳೆದಿದ್ದಾರೆ. ಅದರಲ್ಲೂ ನಿವಿ ಮತ್ತು ಚಂದನ್ ಬೋಲ್ಡ್ ಆಗಿ ಹೆಜ್ಜೆ ಹಾಕಿದ್ದು, ಫ್ಯಾನ್ಸ್ ಫಿದಾ ಆಗಿದ್ದಾರೆ.

ನಿವೇದಿತಾ ಮತ್ತು ಚಂದನ್ ಹೆಜ್ಜೆ ಹಾಕಿರುವ ʻರಾ ರಾ ರಕ್ಕಮ್ಮʼ ಸಾಂಗ್ ಸಖತ್ ವೈರಲ್ ಆಗುತ್ತಿದೆ. ಈ ಸಾಂಗ್‌ಗೆ ಹೆಜ್ಜೆ ಹಾಕಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ, ಅಭಿಮಾನಿಗಳಿಗೆ ನೀವು ಹೆಜ್ಜೆ ಹಾಕಿ ಅಂತಾ ಮನವಿ ಕೂಡ ಮಾಡಿದ್ದಾರೆ. ಒಟ್ನಲ್ಲಿ ರಾ ರಾ ರಕ್ಕಮ್ಮ ಫೀವರ್ ಜೋರಾಗಿದ್ದು, ಜುಲೈ 28ಕ್ಕೆ ಕಿಚ್ಚನ ದರ್ಶನ ಮಾಡುವುದಕ್ಕೆ ಫ್ಯಾನ್ಸ್ ಕಾಯ್ತಿದ್ದಾರೆ.

Video:

Join Nadunudi News WhatsApp Group

Join Nadunudi News WhatsApp Group