ಕಿರಿಕ್ ಮಾಡಿದ ಚಂದನ್ ಶೆಟ್ಟಿಗೆ ಚನ್ನಾಗಿ ಉಗಿದ ಪತ್ನಿ ನಿವೇದಿತಾ ಗೌಡ, ವಿಡಿಯೋ ಫುಲ್ ವೈರಲ್.

ನಿವೇದಿತಾ ಗೌಡ ಸದ್ಯ ಸಾಮಾಜಿಕ ಜಾಲತಾಣದ ಸ್ಟಾರ್ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಸದಾ ರೀಲ್ಸ್ ಮಾಡುವುದರ ಮೂಲಕ ವೈರಲ್ ಆಗುವ ನಟಿ ನಿವೇದಿತಾ ಗೌಡ ಇನ್ಸ್ಟಾಗ್ರಾಮ್ ನಲ್ಲಿ ಲಕ್ಷಾಂತರ ಸಂಖ್ಯೆಯ ಅಭಿಮಾನಿ ಬಳಗವನ್ನ ಕೂಡ ಹೊಂದಿದ್ದಾರೆ. ಆರಂಭದಲ್ಲಿ ಬಿಗ್ ಬಾಸ್ ನಲ್ಲಿ ಕಾಣಿಸಿಕೊಳ್ಳುವುದರ ಮೂಲಕ ಪರಿಚಿತರಾದ ನಿವೇದಿತಾ ಗೌಡ ಅವರು ನಂತರ ಚಂದನ್ ಶೆಟ್ಟಿ ಅವರನ್ನ ಪ್ರೀತಿಮಾಡಿ ಮದುವೆಯನ್ನ ಮಾಡಿಕೊಂಡರು. ಸದ್ಯ ಈಗ ಚಂದನ್ ಶೆಟ್ಟಿ ಅವರ ಜೊತೆ ಖುಷಿಯಿಂದ ಸಂಸಾರವನ್ನ ಮಾಡುತ್ತಿರುವ ನಟಿ ನಿವೇದಿತಾ ಗೌಡ ಅವರು ಸಾಮಾಜಿಕ ಜಾಲತಾಣದಲ್ಲಿ ಸದಾ ಗಂಡನ ಜೊತೆ ರೀಲ್ಸ್ ಶೇರ್ ಮಾಡುವುದರ ಮೂಲಕ ಅಭಿಮಾನಿಗಳನ್ನ ಮನರಂಜಿಸುತ್ತಾರೆ.

ಈಗ ಗಿಚ್ಚಿ ಗಿಲಿಗಿಲಿ ಶೋನಲ್ಲಿ ಸ್ಪರ್ಧಿಯಾಗಿರುವ ನಟಿ ನಿವೇದಿತಾ ಗೌಡ ಅವರು ಕನ್ನಡ ಕಿರುತೆರೆಯಲ್ಲಿ ತಮ್ಮ ಮಾತಿನ ಮೂಲಕ ಜನರನ್ನ ಮನರಂಜಿಸುತ್ತಿದ್ದಾರೆ. ಇನ್ನು ಈಗ ನಟಿ ನಿವೇದಿತಾ ಗೌಡ ಅವರು ಪತಿ ಚಂದನ್ ಶೆಟ್ಟಿ ಕಿರಿಕ್ ಮಾಡಿದ ಚನ್ನಾಗಿ ಉಗಿದಿದ್ದು ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಸದ್ಯ ನಿವೇದಿತಾ ಗೌಡ ಶೇರ್ ಮಾಡಿರುವ ವಿಡಿಯೋ ನೋಡಿದ ಚಂದನ್ ಶೆಟ್ಟಿ ಅಭಿಮಾನಿಗಳು ಕೊನೆಗೆ ಎಲ್ಲಾ ಹುಡುಗರ ಪಾಡು ಹೀಗೆ ಎಂದು ಕಮೆಂಟ್ ಮಾಡಿದ್ದಾರೆ. ವಿಡಿಯೋದ ಆರಂಭದಲ್ಲಿ ಚಂದನ್ ಶೆಟ್ಟಿ ಏನೋ ಕೆಲಸವನ್ನ ಮಾಡುತಿದ್ದ ಸಮಯದಲ್ಲಿ ನಿವೇದಿತಾ ಗೌಡ ಅವರು ಬಹಳ ಬೇಸರದಿಂದ ಅವರ ಬಳಿ ಬರುತ್ತಾರೆ.

ಹೆಂಡತಿ ಬೇಸರದಲ್ಲಿ ಇರುವುದನ್ನ ಕಂಡು ಕಂದ ಏನಾಯಿತು ಎಂದು ಚಂದನ್ ಶೆಟ್ಟಿ ಅವರು ಪತ್ನಿ ನಿವೇದಿತಾ ಗೌಡ ಅವರನ್ನ ಅಪ್ಪಿಕೊಂಡು ಸಮಾಧಾನ ಮಾಡುತ್ತಾರೆ. ಇನ್ನು ವಿಡಿಯೋಯಾದ ಇನ್ನೊಂದು ಭಾಗದಲ್ಲಿ ನಟಿ ನಿವೇದಿತಾ ಗೌಡ ಅವರು ಕೈಗೆ ನೈಲ್ ಪಾಲಿಶ್ ಹಾಕಿಕೊಳ್ಳುವ ಸಮಯದಲ್ಲಿ ಪತಿ ಚಂದನ್ ಶೆಟ್ಟಿ ಅವರ ಬಳಿ ಬೇಸರದಿಂದ ಬಂದು ನಿವೇದಿತಾ ಗೌಡ ಅವರನ್ನ ಮುಟ್ಟುತ್ತಾರೆ. ಈ ಸಮಯದಲ್ಲಿ ಕೋಪ ಮಾಡಿಕೊಂಡ ನಿವೇದಿತಾ ಗೌಡ ಅವರು ನಾನು ಕೆಲಸ ಮಾಡುತ್ತಿರುವುದು ನಿಮಗೆ ಕಾಣಲ್ವಾ. ನಾನು ನೈಲ್ ಪಾಲಿಶ್ ಹಾಕಿಕೊಳ್ಳುತ್ತಿದ್ದೇನೆ ನನಗೆ ತೊಂದರೆ ಕೊಡಬೇಡಿ ಎಂದು ಚನ್ನಾಗಿ ಬಯ್ಯುತ್ತಾರೆ.

ಸದ್ಯ ಈ ವಿಡಿಯೋ ನೋಡಿದ ಹುಡುಗರು ಎಲ್ಲಾ ಹುಡುಗರ ಪಾಡು ಹೀಗೆ ಗುರು. ಪತ್ನಿಯರು ಬೇಸರದಲ್ಲಿ ಇದ್ದಾಗ ಗಂಡ ಸಮಾಧಾನ ಮಾಡಬೇಕು, ಆದರೆ ಗಂಡ ಬೇಸರದಲ್ಲಿ ಇದ್ದಾಗ ಇದೆ ಪಾಡು ಎಂದು ವಿಡಿಯೋ ನೋಡಿ ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ. ನಟಿ ನಿವೇದಿತಾ ಗೌಡ ಅವರು ಹೀಗೆ ಏನಾದರು ವಿಡಿಯೋ ಮಾಡುವುದರ ಮೂಲಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಾರೆ. ಕೆಲವು ದಿನಗಳ ರಾಮಾಚಾರಿ ಚಿತ್ರದ ಹಾಡಿಗೆ ಹಳ್ಳಿ ಹುಡುಗಿಯ ಡ್ರೆಸ್ ಹಾಕಿಕೊಂಡು ಹೆಜ್ಜೆ ಹಾಕಿ ಇನ್ಸ್ಟಾಗ್ರಾಮ್ ನಲ್ಲಿ ಬಹಳ ಸುದ್ದಿಯಾಗಿದ್ದರು ನಿವೇದಿತಾ ಗೌಡ. ಮಿಸಸ್ ಇಂಡಿಯಾ ವಿನ್ ಆಗಿರುವ ನಟಿ ನಿವೇದಿತಾ ಗೌಡ ಅವರು ಈಗ ತೆಲುಗು ಚಿತ್ರಗಳಿಗೆ ಆಯ್ಕೆ ಆಗಿದ್ದು ಮುಂದಿನ ದಿನಗಳಲ್ಲಿ ನಾವು ಅವರನ್ನ ತೆರೆಯ ಮೇಲೆ ನೋಡಬಹುದಾಗಿದೆ.

Join Nadunudi News WhatsApp Group

Join Nadunudi News WhatsApp Group