Niveditha Gowda Emotion: ಮದುವೆಯ ದಿನದ ಸಂಭ್ರಮದಲ್ಲೇ ಕಣ್ಣೀರು ಹಾಕಿದ ನಿವೇದಿತಾ, ಅಪ್ಪ ಅಮ್ಮನನ್ನ ಹೊಗಳಿದ ನಿವೇದಿತಾ.

Chandan Shetty And Nivedita Gowda 3rd Wedding Anniversary: ಚಂದನವನದ ಕ್ಯೂಟ್ ಜೋಡಿಯಾಗಿರುವ ನಿವೇದಿತಾ ಗೌಡ (Nivedita Gowda) ಹಾಗೂ ಚಂದನ್ ಶೆಟ್ಟಿ (Chandan Shetty) ಇದೀಗ ತಮ್ಮ 3 ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಮಾರಂಭದಲ್ಲಿದ್ದಾರೆ.

ಇನ್ನು ನಿವೇದಿತಾ ಗೌಡ ಗಿಚ್ಚಿ ಗಿಲಿ ಗಿಲಿ ಸೀಸನ್ 2 (Gicchi Gili Gili Season 2) ನಲ್ಲಿ ಇದೀಗ ಸಕ್ರಿಯರಾಗಿದ್ದಾರೆ. 

Actress Nivedita Gowda talked about how her father and mother used to take care of her on the anniversary day
Image Credit: instagram

ಗಿಚ್ಚಿ ಗಿಲಿ ಗಿಲಿ ಸೀಸನ್ 2 ವೇದಿಕೆಯಲ್ಲಿ ಈ ಜೋಡಿ ತಮ್ಮ ಮದುವೆ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. ಈ ವೇಳೆ ಚಂದನ್ ಶೆಟ್ಟಿ ಅವರು ಮಾಡಿರುವ ಕೇಕ್ ನೋಡಿದ ನಿವಿ ಭಾವುಕರಾಗಿದ್ದಾರೆ.

Nivedita Gowda broke down in tears talking about her mother and father on the stage of Gitchi Diligili
Image Credit: instagram

3 ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ನಿವಿ- ಚಂದನ್
ಗಿಚ್ಚಿ ಗಿಲಿ ಗಿಲಿ ಸೀಸನ್ 2 ವೇದಿಕೆಯ ಫ್ಯಾಮಿಲಿ ರೌಂಡ್ ನಲ್ಲಿ ಚಂದನ್ ಶೆಟ್ಟಿ ನೀವಿಗೆ ಸರ್ಪ್ರೈಸ್ ನೀಡಿದ್ದಾರೆ. ನಿವಿ ವೇದಿಕೆಯಲ್ಲಿ ತಾಯಿ ಪಾತ್ರ ಮಾಡಿದ್ದಾರೆ ಈ ವೇಳೆ ನಿರೂಪಕ ನಿರಂಜನ್ ಅವರು ನಿಮ್ಮ ಮಗು ಎಂಟ್ರಿ ಯಾವಾಗ ಎಂದು ಕೇಳಿದ್ದಾರೆ.

‘ಸ್ವಲ್ಪ ವರ್ಷ ಆದ್ಮೇಲೆ ಮಗು ಮಾಡಿಕೊಳ್ಳುವುದು. ಮಗು ಸಾಕಬಹುದು ಎನ್ನುವ ನಂಬಿಕೆ ಬಂದ ಮೇಲೆ ನಾನು ಮಗು ಮಾಡಿಕೊಳ್ಳುವುದು. ನನಗೆ ಹೆಣ್ಣು ಮಗು ಆಗಬೇಕು, ನೋಡಲು ನನ್ನಂತೆ ಇರಬೇಕು ಆದರೆ ಹೈಟ್ ಮಾತ್ರ ಚಂದನ್ ರೀತಿ ಇರಬೇಕು.

Join Nadunudi News WhatsApp Group

Nivedita Gowda celebrated her 3rd year wedding anniversary on stage at Gitchy GiliGili
Image Credit: instagram

ಬೆಕ್ಕಿನ ಕಣ್ಣು ನನಗೆ ತುಂಬಾ ಇಷ್ಟವಾಗುತ್ತದೆ ಹೀಗಾಗಿ ಕಣ್ಣು ಮೂಗು ನನ್ನ ರೀತಿ ಇರಬೇಕು ಕೂದಲು ಮಾತ್ರ ಮರೌನ್ ಇರಬೇಕು, ನಾನು ಹೇಳಿದ ಮಾತುಗಳನ್ನು ಕೇಳಬೇಕು’ ಎಂದು ನಿವಿ ಉತ್ತರಿಸಿದ್ದಾರೆ.

ಚಂದನ್ ಮಾಡಿದ ಕೇಕ್ ನೋಡಿ ಭಾವುಕರಾದ ನಿವಿ
3 ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮವನ್ನು ನಿವಿ- ಚಂದನ್ ಜೋಡಿ ಗಿಚ್ಚಿ ಗಿಲಿ ಗಿಲಿ ಸೀಸನ್ 2 ವೇದಿಕೆಯಲ್ಲಿ ಆಚರಿಸಿಕೊಂಡಿದ್ದಾರೆ. ನಿವೇದಿತಾಗೆ ಸರ್ಪ್ರೈಸ್ ಕೊಡಬೇಕು ಎಂದು ರಾಗಿ ಮುದ್ದೆಯಿಂದ ಮಾಡಿರುವ ಕೇಕ್ ನ ತಯಾರಿಸುವೆ ಎಂದು ಹಾಸ್ಯ ಕ್ರಿಯೇಟ್ ಮಾಡಿದ್ದಾರೆ.

Nivedita Gowda burst into tears after seeing the cake made by Chandan Shetty on her 3rd anniversary.
Image Credit: instagram

ಕೇಕ್ ಮಾಡುತ್ತಿರುವುದನ್ನು ವಿಡಿಯೋ ಮಾಡಿ ಒಂದೊಂದು ಲೇಯರ್ ಇಡುವ ಮುನ್ನ ಪ್ರತಿ ವರ್ಷವನ್ನು ನೆನಪಿಸಿಕೊಂಡಿದ್ದಾರೆ.

ಹಾರ್ಟ್ ಶೇಪ್ ಕೇಕ್ ಗೆ ಕೆಂಪು ಬಣ್ಣ ಹಾಕಿದ್ದಾರೆ. ಹ್ಯಾಪಿ ಆನಿವರ್ಸರಿ ಪಪ್ಪಿ ಎಂದು ಬರೆದು ಕೇಕ್ ಮಾಡಿದ್ದಾರೆ. ಚಂದನ್ ವೇದಿಕೆ ಮೇಲೆ ಬರುವುದಿಲ್ಲ ಎಂದು ಕೊಂಡು ಇದು ನನಗೆ ಸರ್ಪ್ರೈಸ್ ಅಥವಾ ಶಿಕ್ಷೆನ ಗೊತ್ತಿಲ್ಲ ಅನುಭವಿಸಲು ಆಗುತ್ತಿಲ್ಲ. ಯಾವತ್ತೂ ಚಂದನ್ ಈ ರೀತಿ ಮಾಡಿರಲಿಲ್ಲ ಹೀಗಾಗಿ ಖುಷಿಯಾಗುತ್ತಿದೆ ಎಂದು ನಿವಿ ಭಾವುಕರಾಗಿದ್ದಾರೆ.

Join Nadunudi News WhatsApp Group