Nivedita Gowda Bali Trip: ಕಾಡು ಪ್ರಾಣಿ ಲದ್ದಿ ಕಾಫಿ ಕುಡಿಯಲು ಮುಂದಾದ ನಿವೇದಿತಾ, ಬಾಲಿಯಲ್ಲಿ ನಡೆದ ಘಟನೆ.

Nivedita Gowda Bali Solo Trip Experience: ಕನ್ನಡದ ಕಿರುತೆರೆಯ ನಟಿ ನಿವೇದಿತಾ ಗೌಡ (Nivedita Gowda) ಸದಾ ಸುದ್ದಿಯಲ್ಲಿರುತ್ತಾರೆ. ಮೊನ್ನೆಯಷ್ಟೇ ನಟಿ ತಾಯಿಯಾಗಿದ್ದರೆ ಎನ್ನುವ ಸುದ್ದಿ ಹರಡಿತ್ತು, ಆದರೆ ನಟ ಚಂದನ ಈ ಬಗ್ಗೆ ಸ್ಪಷ್ಟನೆ ನೀಡಿದ್ದರು.

Nivedita Gowda talked about the tea made in Prani Laddi on Bali trip

ನಾವಿನ್ನು ಮಗುವಿಗೆ ಸಿದ್ಧರಾಗಿಲ್ಲ ಎಂದಿದ್ದರು. ಈ ನಡುವೆ ನೀವಿ ಇದೀಗ ತಮ್ಮ ಬಾಲಿ ಪ್ರವಾಸದ ಬಗ್ಗೆ ನೆಟ್ಟಿಗರೊಂದಿಗೆ ಹಂಚಿಕೊಂಡಿದ್ದಾರೆ. ನಟಿ ನಿವೇದಿತಾ ಗೌಡ ತಮ್ಮ ಪತಿ ಚಂದನ್ ಶೆಟ್ಟಿ (Chandan Shetty) ಅವರನ್ನು ಬಿಟ್ಟು ಒಬ್ಬರೇ ಬಾಲಿಗೆ ಪ್ರವಾಸ ಮಾಡಿದ್ದರು. ಹಾಗೂ ನಟಿ ತಮ್ಮ ಸೋಲೋ ಟ್ರಿಪ್ ಅನ್ನು ಬಹಳ ಎಂಜಾಯ್ ಮಾಡುತ್ತಿದ್ದರು.

Nivedita Gowda shares her Bali trip experience
Image Credit: arcattoscana

ಆ ಸಮಯದಲ್ಲಿ ನಟಿ ತಮ್ಮ ಕೆಲವು ಫೋಟೋಗಳನ್ನು ಶೇರ್ ಮಾಡುವ ಮೂಲಕ ಅಭಿಮಾನಿಗಳಿಗೆ ಬಾಲಿಯ ಕೆಲವು ಸ್ಥಳಗಳನ್ನು ತೋರಿಸುತ್ತಿದ್ದರು.

ಬಾಲಿಯಲ್ಲಿ ಬೆಂಗಳೂರು ಕಾಫಿ (Bengaluru Coffee) ನೆನಪಿಸಿಕೊಂಡ ನಟಿ
ನಿವೇದಿತಾ ಗೌಡ ತಮ್ಮ ಬಾಲಿಯ ಪ್ರವಾಸದ ಕೆಲವು ಕ್ಷಣಗಳನ್ನು ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ. ‘ಅಲ್ಲಿದ್ದಷ್ಟು ದಿನ ನಾನು ಬೆಂಗಳೂರಿನಲ್ಲಿ ಮಿಸ್ ಮಾಡಿಕೊಂಡಿದ್ದು ಕಾಫಿ. ಬೆಂಗಳೂರು ಫಿಲ್ಟರ್ ಕಾಫಿಯನ್ನು ನಾನು ಪದೇ ಪದೇ ನೆನಪುಮಾಡಿಕೊಳ್ಳುತ್ತಿದ್ದೆ’ ಎಂದು ಹೇಳಿದ್ದಾರೆ.

Join Nadunudi News WhatsApp Group

ಬಾಲಿಯ ವಿಚಿತ್ರ ಸ್ಪೆಷಲ್ ಕಾಫಿ ಬಗ್ಗೆ ತಿಳಿಸಿದ ನಟಿ
ಬಾಲಿಯಲ್ಲಿ ಸುಮಾರು 50 ರೀತಿಯ ಕಾಫಿಗಳ ರುಚಿ ನೋಡಿದ್ದೇನೆ. ಅಲ್ಲಿದ್ದ ಸ್ಪೆಷಲ್ ಕಾಫಿ (Bali Special Coffee) ಏನೆಂದರೆ ಒಂದು ವಿಚಿತ್ರ ಕಾಡು ಪ್ರಾಣಿ ಇದೆ ಅದಕ್ಕೆ ಕಾಫಿಯನ್ನು ತಿನ್ನಿಸಿ ಅದರ ಲದ್ಧಿಯಿಂದ ಕಾಫಿ ಮಾಡುತ್ತಾರೆ.

ಅದೆಲ್ಲ ನೋಡಿ ಆ ಜಾಗದಿಂದ ಓಡಿ ಬಂದೆ ಪ್ರಯತ್ನ ಮಾಡಬೇಕು ಅನಿಸಿಲ್ಲ. ಅದೆಲ್ಲ ನೆನಪು ಮಾಡಿಕೊಂಡರೆ ಬೆಂಗಳೂರು ಕಾಫಿ ಎಷ್ಟು ಮುಖ್ಯ ಅನ್ನೋದು ಗೊತ್ತಾಗುತ್ತದೆ ಎಂದು ನಿವೇದಿತಾ ಗೌಡ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

Actress Nivedita Gowda spoke about the special coffee in Bali
Image Credit: b4blaze

ಟ್ರಿಪ್ ಮುಗಿಸಿಕೊಂಡು ನಾನು ಬೆಂಗಳೂರಿಗೆ ಬರುತ್ತಿದ್ದಂತೆ ತುಂಬಾ ಕೆಲಸಗಳು ಬಾಕಿ ಇದ್ದ ಕಾರಣ ಕೆಲಸ ಮುಗಿಸುವ ಬರದಲ್ಲಿ ಡಾರ್ಕ್ ಸರ್ಕಲ್ ಮಾಡಿಕೊಂಡಿರುವೆ ಎಂದು ನಟಿ ತಮ್ಮ ಬೇಸರವನ್ನು ತೋರಿಸಿಕೊಂಡಿದ್ದಾರೆ.

Join Nadunudi News WhatsApp Group