ನಿಜವಾಯಿತು 300 ವರ್ಷಗಳ ಹಿಂದೆ ಸದಾಶಿವ ಅಜ್ಜರು ನುಡಿದ ಭವಿಷ್ಯ, ಅವರ ಭವಿಷ್ಯದಲ್ಲಿ ಏನಿತ್ತು ಗೊತ್ತಾ.

ಇತ್ತೀಚಿನ ದಿನಗಳಲ್ಲಿ ಕೆಲವು ಸ್ವಾಮೀಜಿಗಳು ಮತ್ತು ಗಣ್ಯ ಪಂಡಿತರು ನುಡಿದ ಕೆಲವು ಭವಿಷ್ಯಗಳು ನಿಜವಾಗುತ್ತಿದೆ ಎಂದು ಹೇಳಬಹುದು. ಹೌದು ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯಬಹುದು ಎಂದು ಕೆಲವು ಪಂಡಿತರು ನುಡಿದ ಭವಿಷ್ಯಗಳು ಈಗ ನಿಜವಾಗುತ್ತಿದೆ ಎಂದು ಹೇಳಬಹುದು. ಇನ್ನು ಬಬಲಾದಿ ಮಠದ ಸದಾಶಿವ ಅಜ್ಜ ಯಾರಿಗೆ ತಾನೇ ಗೊತ್ತಿಲ್ಲ. ಹೌದು ಈ ಸ್ವಾಮೀಜಿಯ ಹೆಸರನ್ನ ಸಾಮಾನ್ಯವಾಗಿ ಎಲ್ಲರೂ ಕೂಡ ಕೇಳಿರುತ್ತಾರೆ ಎಂದು ಹೇಳಿದರೆ ತಪ್ಪಾಗಲ್ಲ. ದೇಶದ ಮಹಾನ್ ಜ್ಯೋತಿಷ್ಯ ಪಂಡಿತರಲ್ಲಿ ಬಬಲಾದಿ ಮಠದ ಸದಾಶಿವ ಅಜ್ಜ ಕೂಡ ಒಬ್ಬರು ಎಂದು ಹೇಳಾಬಹುದು.

ಇನ್ನು ಈಗ ವಿಷಯಕ್ಕೆ ಬರುವುದಾದರೆ 2021 ರಲ್ಲಿ ಇಂತಹ ಘಟನೆಗಳು ನಡೆಯುತ್ತದೆ ಎಂದು ಅನೇಕ ಸ್ವಾಮೀಜಿಗಳು ಭವಿಷ್ಯವನ್ನ ನುಡಿದಿದ್ದರು ಮತ್ತು ಕೆಲವು ಸ್ವಾಮೀಜಿಗಳು ನುಡಿದ ಭವಿಷ್ಯ ಕೂಡ ನಿಜವಾಗಿದೆ ಎಂದು ಹೇಳಬಹುದು. ಇನ್ನು ಸುಮಾರು 300 ವರ್ಷಗಳ ಹಿಂದೆ ಬಬಲಾದಿ ಮಠದ ಸದಾಶಿವ ಅಜ್ಜ ನುಡಿದ ಭವಿಷ್ಯ ಈಗ ನಿಜವಾಗಿದ್ದು ಜನರ ಹುಬ್ಬೇರಿಸುವಂತೆ ಮಾಡಿದೆ ಎಂದು ಹೇಳಬಹುದು. ಅಗಾದರೆ ಬಬಲಾದಿ ಮಠದ ಸದಾಶಿವ ಅಜ್ಜ ನೀಡಿದ ಆ ಭವಿಷ್ಯ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಸ್ವಾಮೀಜಿಯ ಈ ಭವಿಷ್ಯದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Old Bhavishya

ಸುಮಾರು 300 ವರ್ಷಗಳ ಹಿಂದಿನಿಂದ ವಿಜಯಪುರ ಜಿಲ್ಲೆಯ ಬಬಿಲೇಶ್ವರದ ಬಬಲಾದಿ ಮಠದ ಸದಾಶಿವ ಅಜ್ಜ ನುಡಿಯುವ ಭವಿಷ್ಯ ಸತ್ಯವಾಗುತ್ತದೆ. ಅಂತೆಯೇ ಈ ಬಾರಿ ಕೂಡ ಸದಾಶಿವ ಅಜ್ಜ ನುಡಿಯುವ ಭವಿಷ್ಯದ ಬಗ್ಗೆ ಜನರಲ್ಲಿ ಬಹಳ ಕುತೂಹಲವಿತ್ತು, ಇದೀಗ ಕುತೂಹಕ್ಕೆ ತೆರೆ ಬಿದ್ದಿದೆ. ಹೌದು ಸುಮಾರು 300 ವರ್ಷಗಳ ಹಿಂದೆ ಭವಿಷ್ಯವನ್ನ ನುಡಿದಿದ್ದ ಅಜ್ಜರು ಇರಾನ್ ಮತ್ತು ಅಮೇರಿಕಾ ದೇಶಗಳಿಗೆ ಬಹಳ ಕೆಡಕಾಗಲಿದೆ, ಬೆಳೆಗಳ ಬೆಲೆ ಬಹಳ ಜಾಸ್ತಿ ಆಗಲಿದೆ,ಅಸೂಯೆ ರಾಜಕಾರಣ ಮುಂದುವರೆಯಲಿದ್ದು, ಪಕ್ಷ ಪಕ್ಷಗಳ ಆಂತರಿಕ ಕಲಹ ಹೆಚ್ಚಾಗಲಿದೆ ಎಂದು ಭವಿಷ್ಯವನ್ನ ನೀಡಿದ್ದರು.

ಇನ್ನು ಇದರ ಜೊತೆಗೆ ಕೆಲವು ಕಡೆ ಮಳೆ ಬೆಳೆ ಆದರೆ ಇನ್ನು ಕೆಲವು ಕಡೆ ಮಳೆ ಬೆಳೆ ಆಗೋದಿಲ್ಲ ಎಂದು ಪೂಜ್ಯ ವೇದಮೂರ್ತಿ ಸಿದ್ದರಾಮಯ್ಯ ಮಹಾಸ್ವಾಮೀಜಿ ಸದಾಶಿವ ಅಜ್ಜನ ಭವಿಷ್ಯವನ್ನು ವಿಶ್ಲೇಷಿಸಿದ್ದಾರೆ. ಇನ್ನು ಎರಡು ಪಕ್ಷಗಳ ನಡುವೆ ದ್ವೇಷ ಹೆಚ್ಚಾಗಲಿದೆ, ರಾಜಕಾರಣಿಗಳು ಕೆಟ್ಟ ಫಲ ಅನುಭವಿಸಲಿದ್ದಾರೆ. ಬೆಳೆಗಳ ಬೆಲೆ ಗಗನಕ್ಕೇರಲಿದೆ. ಒಂದು ಕಡೆ ಮಳೆ ಆದರೆ ಇನ್ನೊಂದು ಕಡೆ ಮಳೆ ಆಗುವುದಿಲ್ಲ ಮತ್ತು ಅನ್ಯ ಕೋಮಿನ ನಡುವೆ ದಂಗೆಗಳು ನಡೆಯಲಿದೆ.

Join Nadunudi News WhatsApp Group

Old Bhavishya

ಅಗ್ನಿ ಅವಘಡಗಳು ಸಂಭವಿಸಲಿದೆ. ಭೂಮಿ ಕುಪ್ಪಳಿಸಲಿದೆ ಅಂದರೆ ಕೆಲವು ಪ್ರದೇಶದಲ್ಲಿ ಭೂ ಕಂಪನ ಸಂಭವಿಸುವ ಸಾಧ್ಯತೆ ಕೂಡ ಇದೆ ಎಂದು ಎಂದು ಸುಮಾರು 300 ವರ್ಷಗಳ ಹಿಂದೇನೆ ಅಜ್ಜರು ಭವಿಷ್ಯವನ್ನ ನುಡಿದಿದ್ದು ಈಗ ಆ ಭವಿಷ್ಯ ನಿಜವಾಗಿದೆ ಎಂದು ಹೇಳಬಹುದು. ಸ್ನೇಹಿತರೆ ಅಜ್ಜರ ಈ ಭವಿಷ್ಯದ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group